alex Certify ಭಾರತೀಯ ಯುವತಿಯರಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್; ಇದರ ಹಿಂದಿದೆ ಈ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಯುವತಿಯರಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್; ಇದರ ಹಿಂದಿದೆ ಈ ಕಾರಣ…!

ಕಳೆದ ಕೆಲವು ದಶಕಗಳಿಂದ ಸ್ತನ ಕ್ಯಾನ್ಸರ್ ಭಾರತೀಯ ಮಹಿಳೆಯರನ್ನು ಬಲಿ ಪಡೆಯುತ್ತಲೇ ಇದೆ. ಆರಂಭದಲ್ಲೇ ರೋಗ ಪತ್ತೆಯಾಗದೇ ಇದ್ದಲ್ಲಿ ಸ್ತನ ಕ್ಯಾನ್ಸರ್‌ ಮಾರಕವಾಗಬಹುದು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಯುವತಿಯರಲ್ಲೇ ಸ್ತನ ಕ್ಯಾನ್ಸರ್‌ನ ಅಪಾಯ ಏಕೆ ಹೆಚ್ಚುತ್ತಿದೆ ಎಂಬುದು ಈಗ ಬಹಿರಂಗವಾಗಿದೆ.

ಜೀವನಶೈಲಿ ಮತ್ತು ಸಂತಾನೋತ್ಪತ್ತಿ ಅಂಶಗಳು

ಮುಟ್ಟಿನ ವಯಸ್ಸು: ಹುಡುಗಿಯರ ಮೊದಲ ಮುಟ್ಟಿನ ವಯಸ್ಸಿನಲ್ಲಿ ವಿಳಂಬವಾಗುವುದರಿಂದ ಅವರು ಒಟ್ಟಾರೆ ಈಸ್ಟ್ರೊಜೆನ್‌ಗೆ ಒಡ್ಡಿಕೊಳ್ಳುವುದನ್ನು ಹೆಚ್ಚಿಸುತ್ತದೆ.  ಇದು ಸ್ತನ ಕ್ಯಾನ್ಸರ್‌ಗೆ ಕಾರಣವಾಗುತ್ತಿರುವ ಪ್ರಮುಖ ಅಂಶವಾಗಿದೆ.

ಜಡ ಜೀವನಶೈಲಿ: ದೈಹಿಕ ನಿಷ್ಕ್ರಿಯತೆ ಮತ್ತು ಸ್ಥೂಲಕಾಯತೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದಾಗುವ ಹಾರ್ಮೋನ್‌ ಬದಲಾವಣೆಗಳು ಕೂಡ ಕ್ಯಾನ್ಸರ್‌ಗೆ ಕಾರಣವಾಗುತ್ತವೆ.

ಒತ್ತಡ: ದೀರ್ಘಕಾಲದ ಒತ್ತಡವು ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಕೂಡ ಕ್ಯಾನ್ಸರ್ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.

ಕಡಿಮೆ ಗರ್ಭಧಾರಣೆ ಮತ್ತು ತಾಯ್ತನ ವಿಳಂಬ: ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಗರ್ಭಧಾರಣೆಯ ಸಮಸ್ಯೆಗಳು ಬಹಳಷ್ಟು ಕಾಣಿಸಿಕೊಳ್ಳುತ್ತಿವೆ. ಇದರಿಂದ ತಾಯಿಯಾಗುವಿಕೆ ಕೂಡ ವಿಳಂಬವಾಗುತ್ತದೆ. ಈ ಅಂಶಗಳು ಈಸ್ಟ್ರೊಜೆನ್‌ಗೆ ಒಡ್ಡಿಕೊಳ್ಳುವುದನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇದು ಸಹ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಸೀಮಿತ ಸ್ತನ್ಯಪಾನ: ಮಗುವಿಗೆ ಹಾಲುಣಿಸುವುದರಿಂದ ಕ್ಯಾನ್ಸರ್‌ ಅಪಾಯ ಕಡಿಮೆಯಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಗುವಿಗೆ ಕೇವಲ 6 ತಿಂಗಳುಗಳ ಕಾಲ ಸ್ತನ್ಯಪಾನ ಮಾಡಿಸುವ ಪ್ರವೃತ್ತಿ ಹೆಚ್ಚುತ್ತಿದೆ.

ಪರಿಸರದ ಅಂಶಗಳು

ಆಹಾರ: ಅನಾರೋಗ್ಯಕರ ಆಹಾರ, ಅತಿಯಾಗಿ ಸಂಸ್ಕರಿಸಿದ ಆಹಾರ ಸೇವನೆ, ಹಣ್ಣುಗಳು ಮತ್ತು ತರಕಾರಿಗಳನ್ನು ಕಡಿಮೆ ತಿನ್ನುವುದು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ನೀರಿನ ಗುಣಮಟ್ಟ: ನೀರಿನಲ್ಲಿರುವ ವಿಷ ಮತ್ತು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ.

ವಾಯು ಮಾಲಿನ್ಯ: ಅನೇಕ ಅಧ್ಯಯನಗಳು ವಾಯು ಮಾಲಿನ್ಯ ಮತ್ತು ಸ್ತನ ಕ್ಯಾನ್ಸರ್ ನಡುವಿನ ಸಂಭಾವ್ಯ ಸಂಪರ್ಕವನ್ನು ಸೂಚಿಸುತ್ತವೆ, ಹೊಗೆಯು ಈ ಅಪಾಯವನ್ನು ಹೆಚ್ಚಿಸುತ್ತದೆ.

ಆನುವಂಶಿಕ ಕಾರಣಗಳು

BRCA ಮತ್ತು ಸಂಬಂಧಿತ ಜೀನ್ ರೂಪಾಂತರಗಳು: BRCA ಮತ್ತು ಸಂಬಂಧಿತ ಜೀನ್ ರೂಪಾಂತರಗಳು ಸ್ತನ ಕ್ಯಾನ್ಸರ್‌ಗೆ ಕಾರಣವಾಗುವ ಪ್ರಮುಖ ಅಂಶಗಳು. ಇತರ ದೇಶಗಳಿಗಿಂತ ಭಾರತದಲ್ಲಿ ಅವುಗಳ ಹರಡುವಿಕೆಯು ಹೆಚ್ಚಿರಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ.

ಟ್ರಿಪಲ್-ನೆಗೆಟಿವ್ ಸ್ತನ ಕ್ಯಾನ್ಸರ್: ಇದು ಸ್ತನ ಕ್ಯಾನ್ಸರ್‌ನ ಆಕ್ರಮಣಕಾರಿ ರೂಪವಾಗಿದ್ದು, ಹೆಚ್ಚಾಗಿ ಯುವತಿಯರ ಮೇಲೆ ಪರಿಣಾಮ ಬೀರುತ್ತದೆ. ಇದು BRCA ರೂಪಾಂತರಗಳೊಂದಿಗೆ ಸಂಬಂಧ ಹೊಂದಿರಬಹುದು. ಈ ಎಲ್ಲಾ ಅಂಶಗಳು ಸ್ತನ ಕ್ಯಾನ್ಸರ್ ಅಪಾಯದ ಬಗ್ಗೆ ಮಾಹಿತಿಯನ್ನು ನೀಡುತ್ತವೆ, ಆದರೆ ಕೆಲವು ಕಾರಣಗಳು ಇಂದಿಗೂ ತಿಳಿದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...