alex Certify 5ನೇ ತರಗತಿ ಮಕ್ಕಳಿಗೆ ಲೈಂಗಿಕ ಆರೋಗ್ಯದ ಶಿಕ್ಷಣ ನೀಡಲು ಮುಂದಾದ ಶಾಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5ನೇ ತರಗತಿ ಮಕ್ಕಳಿಗೆ ಲೈಂಗಿಕ ಆರೋಗ್ಯದ ಶಿಕ್ಷಣ ನೀಡಲು ಮುಂದಾದ ಶಾಲೆ

Chicago's Decision to Provide Free Condoms To Class 5 Students Sparks Debate

ಅಮೆರಿಕಾದ ಚಿಕಾಗೋದ ಶಾಲೆಗಳಿಗೆ ಹೊಸದಾಗಿ ತರಲಾದ ನೀತಿಯನುಸಾರ ಐದನೇ ತರಗತಿ ಮಕ್ಕಳಿಗೆ ಕಾಂಡೋಂ ಲಭ್ಯತೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದೆ. ಅನಗತ್ಯ ಗರ್ಭಧಾರಣೆ ಹಾಗೂ ಲೈಂಗಿಕ ಆರೋಗ್ಯದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಸದ್ಯ ಕೋವಿಡ್ ಬ್ರೇಕ್‌ನಲ್ಲಿರುವ ಮಕ್ಕಳು ಶಾಲೆ ಆರಂಭಗೊಳ್ಳುತ್ತಲೇ ಋತುಚಕ್ರ ಸಂಬಂಧಿ ಉತ್ಪನ್ನಗಳು, ಕಾಂಡೋಂಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲಿದ್ದಾರೆ.

ಜೈಲಿನ ಗಾರ್ಡ್‌ಗಳಿಗೆ ಮೆಣಸಿನ ಪುಡಿ ಎರಚಿ ಖೈದಿಗಳು ಪರಾರಿ

ಈ ಐಡಿಯಾವನ್ನು ಬಹಳ ವರ್ಷಗಳಿಂದ ಚರ್ಚಿಸುತ್ತಾ ಬಂದಿದ್ದು, ಕೆಲವು ವಲಯಗಳಿಂದ ವಿರೋಧ ವ್ಯಕ್ತವಾದರೂ ಮಕ್ಕಳಲ್ಲಿ ಲೈಂಗಿಕತೆ ಕುರಿತ ಅರಿವು ಮೂಡಿಸಲು ಹಾಗೂ ಈ ವಿಚಾರವಾಗಿ ತಪ್ಪು ಹೆಜ್ಜೆಗಳನ್ನು ಇಡದಂತೆ ಜಾಗೃತಿ ಮೂಡಿಸಲು ಮೇಲ್ಕಂಡ ಕಾರ್ಯಕ್ರಮ ಅನಿವಾರ್ಯ ಎಂದು ನೀತಿ ರೂಪಕರು ಅಭಿಪ್ರಾಯ ಪಡುತ್ತಾರೆ.

“ಹತ್ತು-ಹನ್ನೊಂದು ವರ್ಷದ ಮಕ್ಕಳಿಗೆ ಲೈಂಗಿಕ ಶಿಕ್ಷಣ ಹೇಳಿಕೊಟ್ಟರೆ ಅವು ಅದೇನು ಅಂತ ಅರ್ಥ ಮಾಡಿಕೊಳ್ಳುತ್ತಾರೆ ? ಬದಲಿಗೆ ಪ್ರೌಢಶಾಲಾ ಮಕ್ಕಳಿಗೆ ಈ ಅರಿವನ್ನು ಮೂಡಿಸುವ ಯತ್ನ ಮಾಡಬಹುದಲ್ಲ ?” ಎಂಬ ಅರ್ಥದಲ್ಲಿ ನೆಟ್ಟಿಗರು ಈ ನಡೆಗೆ ಅಭಿಪ್ರಾಯ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...