alex Certify ಅಮೆರಿಕದಲ್ಲಿ ರಾಜಕೀಯ ಸೇರ್ಪಡೆಗೆ ಸಜ್ಜಾಗಿದ್ದಾರೆ 24ರ ಹರೆಯದ ಅಶ್ವಿನ್ ರಾಮಸ್ವಾಮಿ, ಇಲ್ಲಿದೆ ಇಂಡೋ-ಅಮೆರಿಕನ್‌ ಯುವಕನ ಕುರಿತ ವಿವರ.. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದಲ್ಲಿ ರಾಜಕೀಯ ಸೇರ್ಪಡೆಗೆ ಸಜ್ಜಾಗಿದ್ದಾರೆ 24ರ ಹರೆಯದ ಅಶ್ವಿನ್ ರಾಮಸ್ವಾಮಿ, ಇಲ್ಲಿದೆ ಇಂಡೋ-ಅಮೆರಿಕನ್‌ ಯುವಕನ ಕುರಿತ ವಿವರ..

ಅಮೆರಿಕದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ  ಭಾರತೀಯ ಮೂಲದ ವ್ಯಕ್ತಿಗಳ ಕೊಡುಗೆ ಬಹಳಷ್ಟಿದೆ. ಇದೀಗ ಇಂಡೋ-ಅಮೆರಿಕನ್‌ ಯುವಕನೊಬ್ಬ ಅಮೆರಿಕದ ರಾಜಕೀಯಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಜಾರ್ಜಿಯಾದಿಂದ ಸೆನೆಟ್ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಅವರ ಹೆಸರು ಅಶ್ವಿನ್ ರಾಮಸ್ವಾಮಿ. ಅಶ್ವಿನ್‌ಗೆ 24 ವರ್ಷ. ಅಶ್ವಿನ್ ‘ Gen Z’ ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ ಮೊದಲ ಇಂಡೋ-ಅಮೆರಿಕನ್‌ ಎನಿಸಿಕೊಳ್ಳಲಿದ್ದಾರೆ. Gen Z ಎಂದರೆ 1997 ಮತ್ತು 2012ರ ನಡುವೆ ಜನಿಸಿದವರು ಎಂದರ್ಥ.

ಅಶ್ವಿನ್‌, 2021ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ. ಜೊತೆಗೆ ಕಾನೂನು ಪದವೀಧರರೂ ಹೌದು. ಅಶ್ವಿನ್ ರಾಮಸ್ವಾಮಿ ಸಾಫ್ಟ್‌ವೇರ್‌ ಎಂಜಿನಿಯರ್‌. ಓದು ಪೂರ್ಣಗೊಂಡ ಬಳಿಕ ಸೈಬರ್ ಸೆಕ್ಯೂರಿಟಿಗೆ ಸಂಬಂಧಿಸಿದ ಸರ್ಕಾರಿ ಏಜೆನ್ಸಿಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಅನೇಕ ಸ್ಟಾರ್ಟ್‌ಅಪ್‌ಗಳಲ್ಲಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ.

ಅಶ್ವಿನ್, ಚಿನ್ಮಯ ಮಿಷನ್ ಬಾಲ ವಿಹಾರ್‌ನಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಂತಹ ಮಹಾಕಾವ್ಯಗಳ ಬಗ್ಗೆ ಅಧ್ಯಯನ ಮಾಡಿದ್ದಾರಂತೆ. ಕಾಲೇಜಿನಲ್ಲಿದ್ದಾಗ ಸಂಸ್ಕೃತವನ್ನು ಕಲಿತರು. ಬಹಳಷ್ಟು ಪ್ರಾಚೀನ ಗ್ರಂಥಗಳು, ಉಪನಿಷತ್ತುಗಳನ್ನು ಸಹ ಓದಿದ್ದಾರೆ.

ಅಶ್ವಿನ್ ರಾಮಸ್ವಾಮಿ ಡೆಮಾಕ್ರಟ್ ಆಗಿ ಜಾರ್ಜಿಯಾದ ಡಿಸ್ಟ್ರಿಕ್ಟ್‌ 48 ರಿಂದ ರಾಜ್ಯ ಸೆನೆಟ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅಶ್ವಿನ್ ಕುಟುಂಬಸ್ಥರು 1990ರಲ್ಲಿ ತಮಿಳುನಾಡಿನಿಂದ ಅಮೆರಿಕಕ್ಕೆ ಬಂದರು. ತಂದೆ-ತಾಯಿ ಇಬ್ಬರದ್ದೂ ಐಟಿ ವಲಯದಲ್ಲಿ ಕೆಲಸ. ತಾಯಿ ಚೆನ್ನೈ ಮೂಲದವರಾದ್ರೆ, ತಂದೆ ಕೊಯಮತ್ತೂರಿನವರು.

ಅಶ್ವಿನ್, ಜಾರ್ಜಿಯಾ ಅಟಾರ್ನಿ ಜನರಲ್‌ನ ಗ್ರಾಹಕ ಸಂರಕ್ಷಣಾ ವಿಭಾಗದಲ್ಲಿ ಕಾನೂನು ಪಾಲುದಾರರಾಗಿಯೂ ಕೆಲಸ ಮಾಡಿದ್ದಾರೆ. ಸಾರ್ವಜನಿಕ ಒಳಿತಿಗಾಗಿ ತಂತ್ರಜ್ಞಾನಗಳ ಬಳಕೆ, ಎನ್‌ಜಿಒಗಳ ಮೂಲ ಉದ್ಯೋಗ ಸೃಷ್ಟಿ ಇವರ ಮೂಲ ಉದ್ದೇಶವಾಗಿತ್ತು. ಅದಕ್ಕೆ ಸಹಕರಿಸುವ ಅನೇಕ ಸ್ಟಾರ್ಟ್‌ಅಪ್‌ಗಳು ಮತ್ತು ಸಣ್ಣ ಉದ್ಯಮಗಳೊಂದಿಗೆ ಕೆಲಸ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...