alex Certify ಮಹಿಳೆಯೊಂದಿಗೆ ಕೌನ್ಸಿಲರ್ ಪತಿ ಅನುಚಿತ ವರ್ತನೆ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯೊಂದಿಗೆ ಕೌನ್ಸಿಲರ್ ಪತಿ ಅನುಚಿತ ವರ್ತನೆ; ವಿಡಿಯೋ ವೈರಲ್

ಗ್ರೇಟರ್​​ ಚೆನ್ನೈ ಕಾರ್ಪೋರೇಷನ್​ ಕೌನ್ಸಿಲರ್​ ಪತಿ ಕೌನ್ಸಿಲರ್​ ಕಚೇರಿಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸುವಂತಿದ್ದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬೆನ್ನಲ್ಲೇ ತಮಿಳುನಾಡು ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ, ಡಿಎಂಕೆ ಕೌನ್ಸಿಲರ್​ಗಳು ಜನರ ಸೇವೆ ಮಾಡುವ ಬದಲು ಸಾರ್ವಜನಿಕರನ್ನು ಬೆದರಿಸಿ ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊಡಂಗಯ್ಯೂರು ಪ್ರದೇಶದ ಒಯ್ಯತೋಪು ನಿವಾಸಿ ದೇವಿ ಎಂಬವರಿಗೆ ಚೆನ್ನೈನ ಕೌನ್ಸಿಲರ್​ ಕೆ. ಶರ್ಮಿಳಾ ಗಾಂಧಿ ಕಚೇರಿಯಲ್ಲಿ ನಿಂದಿಸಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಕೌನ್ಸಿಲರ್​ ಒಂದು ಮೂಲೆಯಲ್ಲಿ ಕುಳಿತಿರುವುದು ಕಂಡುಬಂದರೆ ಕೌನ್ಸಿಲರ್ ಸ್ಥಾನದಲ್ಲಿ ಪತಿ ಕರುಣಾನಿಧಿ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಮಹಿಳೆಯನ್ನು ನಿಂದಿಸುತ್ತಿರುವವರು ಕರುಣಾನಿಧಿ ಬೆಂಬಲಿಗರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...