alex Certify ಐಐಟಿ ಕ್ಯಾಂಪಸ್​ನಲ್ಲಿ ಸುಟ್ಟು ಕರಕಲಾದ ಮೃತದೇಹ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಐಟಿ ಕ್ಯಾಂಪಸ್​ನಲ್ಲಿ ಸುಟ್ಟು ಕರಕಲಾದ ಮೃತದೇಹ ಪತ್ತೆ

ಸುಮಾರು 20 ವರ್ಷ ಆಸುಪಾಸಿನ ಯುವಕನ ಶವವೊಂದು ಮದ್ರಾಸ್​ನ ಐಐಟಿ ಕ್ಯಾಂಪಸ್​ನಲ್ಲಿ ಪತ್ತೆಯಾಗಿದೆ. ಮೃತದೇಹವು ಭಾಗಶಃ ಸುಟ್ಟು ಕರಕಲಾಗಿದೆ.

ಮೃತ ವ್ಯಕ್ತಿಯನ್ನ ಉನ್ನಿ ಕೃಷ್ಣನ್​ ನಾಯರ್​ ಎಂದು ಗುರುತಿಸಲಾಗಿದೆ. ಈತ ಐಐಟಿ ಮದ್ರಾಸ್​ನಲ್ಲಿ ಅತಿಥಿ ಉಪನ್ಯಾಸಕ ಹಾಗೂ ಸಂಶೋಧನಾ ವಿದ್ಯಾರ್ಥಿಯಾಗಿಯೂ ಆಗಿದ್ದ ಎನ್ನಲಾಗಿದೆ.

ಪ್ರಾಥಮಿಕ ತನಿಖೆಯ ವೇಳೆ ಪೊಲೀಸರಿಗೆ ಈತನ ಕೊಣೆಯಲ್ಲಿದ್ದ ಪುಸ್ತಕವೊಂದರಲ್ಲಿ ಸೂಸೈಡ್​ ನೋಟ್​ ಸಿಕ್ಕಿರೋದ್ರಿಂದ ಇದೊಂದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಅಂದಾಜಿಸಲಾಗಿದೆ.

ಮೃತ ನಾಯರ್​ ಕೇರಳ ಮೂಲದವನಾಗಿದ್ದು ಈತನ ತಂದೆ ಇಸ್ರೋದಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಹಾಕಿ ಕ್ರೀಡಾಂಗಣದಲ್ಲಿ ಈ ಶವ ಇರೋದನ್ನ ನೋಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕೊಟ್ಟುಪುರಂ ಠಾಣಾ ಪೊಲೀಸರು ಮೃತದೇಹವನ್ನ ವಶಕ್ಕೆ ಪಡೆದಿದ್ದಾರೆ. ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.

ಮೃತ ವ್ಯಕ್ತಿಯ ಮುಖ ಹಾಗೂ ಇತರೆ ದೇಹದ ಭಾಗಗಳು ಭಾಗಶಃ ಸುಟ್ಟು ಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...