alex Certify ಕೋವಿಡ್-19 ಲಸಿಕಾಕರಣ ವೇಗದ ಕುರಿತು ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ಲಸಿಕಾಕರಣ ವೇಗದ ಕುರಿತು ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ಕೋವಿಡ್-19 ಲಸಿಕಾಕರಣದ ಗುರಿಯನ್ನು ಭಾರತ ತಲುಪಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾದ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಇಲಾಖೆ, “ಇಂಥ ವರದಿಗಳು ದಾರಿ ತಪ್ಪಿಸುತ್ತಿದ್ದು, ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಟ್ಟಿಲ್ಲ,” ಎಂದಿದೆ.

ಅಮೆರಿಕ, ಬ್ರಿಟನ್, ಫ್ರಾನ್ಸ್, ಸ್ಪೇನ್‌ಗಳಂಥ ದೇಶಗಳೊಂದಿಗೆ ಕೋವಿಡ್-19 ಲಸಿಕಾಕರಣದ ಪ್ರಮಾಣವನ್ನು ತುಲನೆ ಮಾಡಿದ ಇಲಾಖೆ, “ಜಾಗತಿಕ ಸಾಂಕ್ರಾಮಿಕ ಕೋವಿಡ್-19 ವಿರುದ್ಧದ ಹೋರಾಟದಲ್ಲಿ, ಭಾರತದ ರಾಷ್ಟ್ರೀಯ ಲಸಿಕಾಕರಣವು, ಪಾಶ್ಚಾತ್ಯದ ಅನೇಕ ದೇಶಗಳಿಗೆ ಹೋಲಿಸಿದಲ್ಲಿ ಅತಿ ದೊಡ್ಡ ಹಾಗೂ ಯಶಸ್ವೀ ಲಸಿಕಾಕರಣವಾಗಿದೆ,” ಎಂದು ತಿಳಿಸಿದೆ.

ಸಚಿವಾಲಯದ ದತ್ತಾಂಶದ ಪ್ರಕಾರ, ಲಸಿಕೆ ಪಡೆಯಲು ಅರ್ಹವಿರುವ ವಯೋಮಾನದ ಮಂದಿಯ ಪೈಕಿ 90%ನಷ್ಟು ಮಂದಿಗೆ ಅದಾಗಲೇ ಮೊದಲ ಲಸಿಕೆ ನೀಡಲಾಗಿದೆ. ಎರಡನೇ ಲಸಿಕೆಯನ್ನು 65% ಮಂದಿಗೆ ನೀಡಲಾಗಿದೆ.

ಮಕ್ಕಳಿಗೆ ತಿಂಡಿ ತರಲು ಹೋದವನಿಗೆ ಅಂಗಡಿಯಲ್ಲಿ ಕಾದಿತ್ತು ʼಅದೃಷ್ಟʼ

ಮೊದಲನೇ ಡೋಸ್‌ನ ಅಂಕಿಅಂಶಗಳು ಅಮೆರಿಕ (73.2%), ಬ್ರಿಟನ್ (75.9%), ಫ್ರಾನ್ಸ್‌ (78.3%) ಮತ್ತು ಸ್ಪೇ‌ನ್‌ಗಿಂತ (84.7%) ಉತ್ತಮವಾಗಿವೆ ಎಂದು ತಿಳಿಸಿದ ಸಚಿವಾಲಯ, ಎರಡನೇ ಡೋಸ್‌ನ ಕವರೇಜ್‌ನಲ್ಲಿ ಅಮೆರಿಕ ಇನ್ನೂ 61.5%ನಲ್ಲೇ ಇದ್ದು, ಜನಸಂಖ್ಯೆಯಲ್ಲಿ ಈ ದೇಶಗಳಿಗಿಂತ ಭಾರೀ ಮುಂದೆ ಇರುವ ಭಾರತದ ಅಂಕಿ ಅಂಶಗಳೇ ಹೆಚ್ಚಿವೆ ಎಂದು ತಿಳಿಸಿದೆ.

“ಇಷ್ಟಲ್ಲದೇ, ದೇಶದ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅದಾಗಲೇ ಕೋವಿಡ್‌-19 ವಿರುದ್ಧದ ಮೊದಲ ಲಸಿಕೆಯ ಕವರೇಜ್‌ ಅನ್ನು 100% ಪೂರೈಸಿದ್ದು, 3 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಲಸಿಕಾಕರಣವನ್ನು 100%ನಷ್ಟು ಮುಗಿಸಲಾಗಿದೆ. ಇನ್ನಷ್ಟು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಶೀಘ್ರದಲ್ಲೇ ಈ ಗುರಿ ತಲುಪಲಿವೆ,” ಎಂದು ಸಚಿವಾಲಯ ಇದೇ ವೇಳೆ ತಿಳಿಸಿದೆ.

ದೇಶದಲ್ಲಿ ಇರುವ 94 ಕೋಟಿಯಷ್ಟು ವಯಸ್ಕರಿಗೆ ಲಸಿಕೆ ನೀಡುವ ಸಂಬಂಧ ಭಾರತ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸುತ್ತಿಲ್ಲ ಎಂದು ಬಿಬಿಸಿ ಡಿಸೆಂಬರ್‌ 31ರಂದು ವಿಶೇಷ ವರದಿಯೊಂದರಲ್ಲಿ ಪ್ರಕಟಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...