alex Certify ಮಕ್ಕಳಿಗೆ ತಿಂಡಿ ತರಲು ಹೋದವನಿಗೆ ಅಂಗಡಿಯಲ್ಲಿ ಕಾದಿತ್ತು ʼಅದೃಷ್ಟʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ತಿಂಡಿ ತರಲು ಹೋದವನಿಗೆ ಅಂಗಡಿಯಲ್ಲಿ ಕಾದಿತ್ತು ʼಅದೃಷ್ಟʼ

ತನ್ನ ಮಕ್ಕಳಿಗಾಗಿ ಚಾಕ್ಲೇಟ್ ಮಿಲ್ಕ್‌ ಖರೀದಿ ಮಾಡಲು 7-ಇಲೆವೆನ್ ಸ್ಟೋರ್‌ ಒಂದಕ್ಕೆ ಹೋದ ವ್ಯಕ್ತಿಯೊಬ್ಬರು $100,000 ಜಾಕ್‌ಪಾಟ್‌ ಜೊತೆಗೆ ಮನೆಗೆ ಮರಳಿದ್ದಾರೆ.

ವರ್ಜೀನಿಯಾದ ಈ ಅದೃಷ್ಟಶಾಲಿ ಡೆನ್ನಿಸ್ ವಿಲ್ಲಭಿ ಇಲ್ಲಿನ ನಾರ್ತ್ ಚೆಸ್ಟರ್‌ಫೀಲ್ಡ್‌ ನಿವಾಸಿಯಾಗಿದ್ದಾರೆ. ತಮ್ಮೂರಿನಲ್ಲಿರುವ 7-ಇಲೆವೆನ್ ಸ್ಟೋರ್‌‌ಗೆ ಚಾಕ್ಲೆಟ್ ಮಿಲ್ಕ್ ಖರೀದಿಗಾಗಿ ತೆರಳಿದ್ದ ಡೆನ್ನಿಸ್ ಹಾಗೇ ಸುಮ್ಮನೆ ಒಂದು ಲಾಟರಿ ಚೀಟಿಯನ್ನು ಉಜ್ಜಿ ನೋಡಲು ಮುಂದಾದರು ಎಂದು ವರ್ಜೀನಿಯಾ ಲಾಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಹಾಗೇ ಸುಮ್ಮನೇ ಇರಲಿ ಎಂದು ಖರೀದಿ ಮಾಡಿದ ಲಾಟರಿಯಿಂದ ಡೆನ್ನಿಸ್‌ಗೆ ಅದೃಷ್ಟ ಖುಲಾಯಿಸಿದೆ. ಹೀಗೆ ಬಹುಮಾನ ಗೆಲ್ಲುವ ಸಾಧ್ಯತೆ 1,632,000 ದಲ್ಲಿ 1 ಮಾತ್ರ ಇರುತ್ತದೆ ಎಂದು ಲಾಟರಿ ಅಧಿಕಾರಿಗಳು ತಿಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...