alex Certify BIG NEWS: ಪಾಕಿಸ್ತಾನ ಮೂಲದ ಓಟಿಟಿ ಪ್ಲಾಟ್ ಫಾರಂ Vidly TV ಬ್ಯಾನ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಾಕಿಸ್ತಾನ ಮೂಲದ ಓಟಿಟಿ ಪ್ಲಾಟ್ ಫಾರಂ Vidly TV ಬ್ಯಾನ್….!

ಮಹತ್ವದ ಬೆಳವಣಿಗೆ ಒಂದರಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವಾಲಯ, ಪಾಕಿಸ್ತಾನ ಮೂಲದ ಓಟಿಟಿ ಪ್ಲಾಟ್ ಫಾರಂ Vidly TV ಮೇಲೆ ನಿಷೇಧ ಹೇರಿದೆ. ಭಾರತದ ಏಕತೆ, ಸಮಗ್ರತೆ ಹಾಗೂ ಹಿತಾಸಕ್ತಿಗೆ ಧಕ್ಕೆ ತರುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಐಟಿ ನಿಯಮ 2021ರ ಅನ್ವಯ ತನಗಿರುವ ಅಧಿಕಾರವನ್ನು ಬಳಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ತೀರ್ಮಾನ ಕೈಗೊಂಡಿದ್ದು, ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತ ಸೋಮವಾರದಂದು ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ.

Vidly TV ‘ಸೇವಕ್: ದಿ ಕನ್ಫೇಷನ್’ ಎಂಬ ವೆಬ್ ಸೀರೀಸ್ ಪ್ರಸಾರ ಮಾಡುತ್ತಿದ್ದು, ಈಗಾಗಲೇ ಇದರ ಮೂರು ಕಂತುಗಳು ಪ್ರಸಾರವಾಗಿವೆ. ಇದರಲ್ಲಿ ಪ್ರಸಾರವಾಗುತ್ತಿರುವ ಮಾಹಿತಿಗಳು ಭಾರತದ ಭದ್ರತೆ, ಏಕತೆ, ಸಮಗ್ರತೆ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತಿವೆ ಎಂದು ಹೇಳಲಾಗಿದೆ.

ಈ ವೆಬ್ ಸೀರೀಸ್ ಮೊದಲ ಕಂತು 2008ರ ಮುಂಬೈ ಅಟ್ಯಾಕ್ ವಾರ್ಷಿಕೋತ್ಸವ ದಿನವಾದ ನವೆಂಬರ್ 26ರಂದೇ ಪ್ರಸಾರವಾಗಿದ್ದು, ಹಲವು ವಿಷಯಗಳನ್ನು ತಿರುಚಲಾಗಿತ್ತು. ಆ ಬಳಿಕ ಆಪರೇಷನ್ ಬ್ಲೂ ಸ್ಟಾರ್, ಅಯೋಧ್ಯೆ ಬಾಬರಿ ಮಸೀದಿ, ಮಾಲೆಗಾಂವ್ ಬ್ಲಾಸ್ಟ್ ಮೊದಲಾದ ವಿಷಯಗಳನ್ನು ತಿರುಚಿ ಪ್ರಸಾರ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...