alex Certify ದರ ಏರಿಕೆ ವಿಷಯ ಕೇಳಿ ಕೇಳಿ ಬೇಸತ್ತಿದ್ದ ಜನತೆಗೆ ಇಲ್ಲಿದೆ ಒಂದು ʼನೆಮ್ಮದಿʼ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರ ಏರಿಕೆ ವಿಷಯ ಕೇಳಿ ಕೇಳಿ ಬೇಸತ್ತಿದ್ದ ಜನತೆಗೆ ಇಲ್ಲಿದೆ ಒಂದು ʼನೆಮ್ಮದಿʼ ಸುದ್ದಿ

ದೇಶದಲ್ಲಿ ಕೊರೊನಾ ವೈರಸ್ ಸೋಂಕು ನಿಧಾನವಾಗಿ ಕಡಿಮೆಯಾಗ್ತಿದೆ. ಭಾರತ, ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಭಾರತೀಯ ರೈಲ್ವೆ ಕೂಡ ಹಲವು ನಿರ್ಬಂಧಗಳನ್ನು ತೆಗೆದು ಹಾಕಿದೆ. ಈಗ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ರೈಲ್ವೆ ನಿಲ್ದಾಣಕ್ಕೆ ಬಿಡಲು ಬರುವ ಜನರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ಟಿಕೆಟ್ ದರ ಇಳಿಕೆಯಾಗ್ತಿದೆ.

ಕೊರೊನಾ ಸಂದರ್ಭದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ನಂತ್ರ ವಿಶೇಷ ರೈಲುಗಳು ಮಾತ್ರ ಸಂಚರಿಸುತ್ತಿದ್ದವು. ಈಗ ವಿಶೇಷ ರೈಲುಗಳನ್ನು ನಿಲ್ಲಿಸಿ, ಮೊದಲಿನಂತೆ ರೈಲು ಸಂಚಾರ ಆರಂಭವಾಗ್ತಿದೆ. ಹಾಗಾಗಿ ರೈಲ್ವೆ ಇಲಾಖೆ ಕೆಲವು ಮಹತ್ವದ ನಿರ್ಣಯ ತೆಗೆದುಕೊಳ್ಳುತ್ತಿದೆ. ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಇಳಿಕೆಯಾಗಿದೆ.

50 ರೂಪಾಯಿಯಿದ್ದ ಟಿಕೆಟ್ ಬೆಲೆ 10 ರೂಪಾಯಿಗೆ ಲಭ್ಯವಾಗಲಿದೆ. ಸೆಂಟ್ರಲ್ ರೈಲ್ವೆ ಮಾಹಿತಿ ಪ್ರಕಾರ, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಎಲ್‌ಎಲ್‌ಟಿ, ಥಾಣೆ, ಕಲ್ಯಾಣ್ ಮತ್ತು ಪನ್ವೇಲ್ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಈಗ 10 ರೂಪಾಯಿಗೆ ಲಭ್ಯವಾಗಲಿವೆ.

ಕೊರೊನಾ ಸಂದರ್ಭದಲ್ಲಿ ಪ್ಲಾಟ್‌ಫಾರ್ಮ್‌ ಜನಸಂದಣಿ ಕಡಿಮೆ ಮಾಡಲು, ರೈಲ್ವೆ ಇಲಾಖೆ ಪ್ಲಾಟ್ಫಾರ್ಮ್ ಟಿಕೆಟ್ ಬೆಲೆಯನ್ನು ಹೆಚ್ಚಿಸಿತ್ತು. ಸೋಂಕಿನ ಪ್ರಮಾಣ ಕಡಿಮೆಯಾಗ್ತಿದ್ದಂತೆ ರೈಲ್ವೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...