alex Certify ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಐಪಿಎಲ್ ದಿನಗಳಂದು ನಮ್ಮ ಮೆಟ್ರೋ ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಐಪಿಎಲ್ ದಿನಗಳಂದು ನಮ್ಮ ಮೆಟ್ರೋ ಅವಧಿ ವಿಸ್ತರಣೆ

ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ದಿನಗಳಂದು ನಮ್ಮ ಮೆಟ್ರೋ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಬಿಎಂಆರ್‌ಸಿಎಲ್ ಈ ಕುರಿತಾಗಿ ಮಾಹಿತಿ ನೀಡಿದೆ.

ಮಾರ್ಚ್ 25, 29 ಮತ್ತು ಏಪ್ರಿಲ್ 2 ರಂದು ರಾತ್ರಿ 11:30ರ ವರೆಗೆ ನಮ್ಮ ಮೆಟ್ರೋ ಅವಧಿಯನ್ನು ವಿಸ್ತರಿಸಲಾಗಿದೆ. ಅಲ್ಲದೆ, ಎಲ್ಲಾ ನಿಲ್ದಾಣಗಳಿಂದಲೂ ರಿಟರ್ನ್ ಪೇಪರ್ ಟಿಕೆಟ್ ಕೂಡ ಲಭ್ಯವಿರುತ್ತದೆ ಎಂದು ಹೇಳಲಾಗಿದೆ.

ಐಪಿಎಲ್ ಪಂದ್ಯ ನಡೆಯುವ ನಿಗದಿತ ದಿನಗಳಂದು ಪಂದ್ಯಗಳಿಗೆ ಬರುವ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ದರ 50 ರೂ. ಆಗಿದ್ದು, ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಿರುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಮಾರಾಟಕ್ಕೆ ಲಭ್ಯವಿರುವ ಟಿಕೆಟ್ ಗಳು ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ನಿಂದ ಮಾನ್ಯವಾಗಿರುತ್ತವೆ. ರಾತ್ರಿ 8 ಗಂಟೆ ನಂತರ ದಿನದ ಸೇವೆ ಕೊನೆಗೊಳ್ಳುವವರೆಗೆ ಮಾತ್ರ ರಿಟರ್ನ್ ಟಿಕೆಟ್ ಬಳಸಬಹುದಾಗಿದೆ. ಎಂದಿನಂತೆ ಪ್ರಯಾಣಿಕರು ಕ್ಯೂಆರ್ ಕೋಡ್ ಟಿಕೆಟ್, ಸ್ಮಾರ್ಟ್ ಕಾರ್ಡ್, ಎನ್‌ಸಿಎಂಸಿ ಕಾರ್ಡುಗಳನ್ನು ಬಳಕೆ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...