alex Certify ಬೆಂಗಳೂರಲ್ಲಿ ಕಂಬಳ ಆಯೋಜನೆ : ಹಾಸನಕ್ಕೆ ಬಂದಿಳಿದ 180 ಜೋಡಿ ಕೋಣಗಳಿಗೆ ಸ್ವಾಗತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಕಂಬಳ ಆಯೋಜನೆ : ಹಾಸನಕ್ಕೆ ಬಂದಿಳಿದ 180 ಜೋಡಿ ಕೋಣಗಳಿಗೆ ಸ್ವಾಗತ

ಬೆಂಗಳೂರು : ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ನವೆಂಬರ್ 25-26ರಂದು ಕಂಬಳ ನಡೆಯಲಿದ್ದು, ಕಂಬಳ ಪ್ರಿಯರಲ್ಲಿ ಬಹಳ ಕುತೂಹಲ ಮೂಡಿದೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜನೆ ಮಾಡಲಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಕಂಬಳದ ಕೋಣಗಳಿಗೆ ದಾರಿ ಮಧ್ಯೆ ಸ್ವಾಗತ ಕೋರಲಾಗಿದೆ.

ಹಾಸನಕ್ಕೆ ಬಂದಿಳಿದ 180 ಜೋಡಿ ಕಂಬಳದ ಕೋಣಗಳಿಗೆ ಸ್ವಾಗತ ಕೋರಲಾಗಿದೆ. ಹಾಸನದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ 4 ಗಂಟೆ ವಿಶ್ರಾಂತಿ ಪಡೆದಿದೆ. ಕಂಬಳದ ಕೋಣಗಳನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಸಿಎಂ, ಡಿಸಿಎಂ ಸೇರಿ ಇತರೆ ಪಕ್ಷದ ಪ್ರಮುಖರು ಕಂಬಳಕ್ಕೆ ಬರಲಿದ್ದಾರೆ. ಕಂಬಳ ವೀಕ್ಷಿಸಲು ಯಾವುದೇ ಶುಲ್ಕ ಇಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...