alex Certify ಬೆಂಗಳೂರಿನ ದೋಸೆಗೆ ಮನಸೋತ ಬ್ರಿಟಿಷ್​ ಹೈ ಕಮಿಷನರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ದೋಸೆಗೆ ಮನಸೋತ ಬ್ರಿಟಿಷ್​ ಹೈ ಕಮಿಷನರ್​

ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಆಹಾರ ಪ್ರಿಯರಾಗಿದ್ದಾರೆ ಮತ್ತು ಸ್ಥಳೀಯ ಭಾರತೀಯ ಭಕ್ಷ್ಯಗಳನ್ನು ಆನಂದಿಸುವ ಕುರಿತು ಅವರ ಹಲವಾರು ಪೋಸ್ಟ್‌ಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಅವರ ಇತ್ತೀಚಿನ ಟ್ವೀಟ್ ಅವರಿಗೆ ಭಾರತದ ಆಹಾರದ ಮೇಲೆ ಎಲ್ಲಿಲ್ಲದ ಪ್ರೀತಿಯಂತೆ. ಇದೇ ಕಾರಣಕ್ಕೆ ಇಲ್ಲಿಯ ಥಹರೇವಾರಿ ತಿನಿಸುಗಳ ಬಗ್ಗೆ ಅವರು ಬರೆದುಕೊಳ್ಳುತ್ತಲೇ ಇರುತ್ತಾರೆ. ಇದೀಗ ಬೆಂಗಳೂರಿನ ದೋಸೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲ್ಲಿಸ್ ಅವರು, ಈ ಹಿಂದೆ ವಡಾ ಪಾವ್, ದೋಸೆ ಮತ್ತು ರೋಡಗುಲ್ಲಾ ಇತ್ಯಾದಿಗಳ ಬಗ್ಗೆ ಬರೆದುಕೊಂಡಿದ್ದರು. ಅದನ್ನು ಸವಿಯುವ ಫೋಟೋಗಳನ್ನು ಶೇರ್​ಮಾಡಿಕೊಂಡು ಭಾರತೀಯ ಆಹಾರದ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದರು. ಇದೀಗ ಬೆಂಗಳೂರಿನ ದೋಸೆಯ ಕುರಿತು ಬರೆದಿದ್ದಾರೆ. ಗರಿಗರಿಯಾದ ದೋಸೆ, ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿ ಬಹಳ ವಿಶೇಷವಾಗಿತ್ತು. ಭಾರತದ ಆಹಾರ ಪದ್ಧತಿಗೆ ಮನಸೋತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...