alex Certify ಕೋವಿಡ್​ ಸೋಂಕು ತಾಗಲೆಂದು ಈ ವಧು ಮಾಡಿದ ಹುಚ್ಚಾಟ ನೋಡಿದ್ರೆ ಶಾಕ್​ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಸೋಂಕು ತಾಗಲೆಂದು ಈ ವಧು ಮಾಡಿದ ಹುಚ್ಚಾಟ ನೋಡಿದ್ರೆ ಶಾಕ್​ ಆಗ್ತೀರಾ..!

ಕೋವಿಡ್​ ಕಾರಣದಿಂದಾಗಿ ಅದೆಷ್ಟೋ ಮಂದಿಯ ವಿವಾಹ ಮುಂದೂಡಲ್ಪಟ್ಟಿದೆ. ಇನ್ನು ಕೆಲವರ ಮದುವೆಯಂತೂ ರದ್ದಾಗಿದ್ದೂ ಇದೆ. ಆದರೆ ಇಲ್ಲೊಬ್ಬ ಯುವತಿಯು ತನ್ನ ಮದುವೆಗೆ ಕೋವಿಡ್​ನಿಂದಾಗಿ ಯಾವುದೇ ಸಮಸ್ಯೆ ಉಂಟಾಗಬಾರದು ಎಂದು ಮಾಡಿದ ಪ್ಲಾನ್​ ನೋಡಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ..!

ತನಗೆ ಕೋವಿಡ್​ ಸೋಂಕು ಬಂದರೆ ಮದುವೆ ಮುಂದೂಡಲ್ಪಡುತ್ತದೆ ಎಂಬ ಕಾರಣಕ್ಕೆ ಈಕೆ ಮದುವೆಗೂ ಮುನ್ನವೇ ಕೋವಿಡ್​ ಸೋಂಕನ್ನು ಬರಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದಾಳೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್​ ನಿವಾಸಿಯಾದ ಮಹಿಳೆಯು ಕೋವಿಡ್​ ಸೋಂಕು ಬರಿಸಿಕೊಳ್ಳುವ ಸಲುವಾಗಿ ನೈಟ್​ ಕ್ಲಬ್​​ನಲ್ಲಿ ತಾನು ಮಾಡಿದ ಹುಚ್ಚಾಟಗಳನ್ನು ವಿಡಿಯೋ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾಳೆ. ಮದುವೆಗೆ ಆರು ವಾರಗಳ ಮುನ್ನವೇ ಹೇಗಾದರೂ ಮಾಡಿ ಕೋವಿಡ್​ ಸೋಂಕು ತಗುಲಿದರೆ ಮದುವೆ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾಗೋದಿಲ್ಲ ಅಂತಾ ನೈಟ್ ಕ್ಲಬ್​ಗೆ ತೆರಳಿ ಅಪರಿಚಿತರನ್ನು ಆಲಂಗಿಸಿದ್ದಾಳೆ. ಅಲ್ಲದೇ ಯಾರೋ ಕುಡಿದ ಪಾನೀಯಗಳನ್ನು ಸೇವಿಸಿದ್ದಾಳೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಯರ್ರಾಬಿರ್ರಿ ವೈರಲ್​ ಆಗಿದೆ. ಕೆಲವರು ವಧುವಿನ ಪ್ಲಾನ್​ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರೆ, ಇನ್ನು ಹಲವರು ಕೋವಿಡ್​​ ಸೋಂಕನ್ನು ಇಷ್ಟು ತಮಾಷೆಯಾಗಿ ತೆಗೆದುಕೊಳ್ಳಬಾರದು ಎಂದು ಕುಟುಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...