alex Certify BREAKING : ಏಕಾಏಕಿ ಬೆಂಗಳೂರಿನ `BMTC’ ಬಸ್ ಡಿಪೋಗೆ `ಸೂಪರ್ ಸ್ಟಾರ್ ರಜನಿಕಾಂತ್’ ಭೇಟಿ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಕಾಏಕಿ ಬೆಂಗಳೂರಿನ `BMTC’ ಬಸ್ ಡಿಪೋಗೆ `ಸೂಪರ್ ಸ್ಟಾರ್ ರಜನಿಕಾಂತ್’ ಭೇಟಿ!

 

ಬೆಂಗಳೂರು : ಜೈಲರ್ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಏಕಾಏಕಿ ಬೆಂಗಳೂರಿನ ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ್ದಾರೆ.

ಹೌದು, ರಜನಿಕಾಂತ್ ಅವರು ಇಂದು ಬೆಂಗಳೂರಿನ ಬಿಎಂಟಿಸಿ ಬಸ್ ಡಿಪೋಗೆ ಏಕಾಏಕಿ ಭೇಟಿ ನೀಡಿದ್ದಾರೆ. ಡಿಪೋ ಮ್ಯಾನೇಜರ್ ಗೂ ಮಾಹಿತಿ ನೀಡದೇ ರಜನಿಕಾಂತ್ ಬಿಎಂಟಿಸಿ ಬಸ್ ಡಿಪೋಗೆ ಭೇಟಿ ನೀಡಿದ್ದು, ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.

ಬಿಎಂಟಿಸಿ ಬಸ್ ಡಿಪೋದಲ್ಲಿ ರಜನಿಕಾಂತ್ ಮೆಕ್ಯಾನಿಕ್, ಡ್ರೈವರ್, ನಿರ್ವಾಹಕರ ಯೋಗಕ್ಷೇಮ ವಿಚಾರಿಸಿ ಎಲ್ಲರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸುಮಾರು 10 ನಿಮಿಷ ಬಿಎಂಟಿಸಿ ಬಸ್ ಡಿಪೋದಲ್ಲಿದ್ದು, ಬಳಿಕ ಅಲ್ಲಿಂದ ತೆರಳಿದ್ದಾರೆ.

ರಜನಿಕಾಂತ್ ಚಿತ್ರರಂಗಕ್ಕೂ ಹೋಗುವ ಮುನ್ನ ಬೆಂಗಳೂರು ಮಹಾನಗರ ಸಾರಿಗೆಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿದ್ದರು. ಇದೀಗ ಮತ್ತೆ ಬಿಎಂಟಿಸಿ ಬಸ್ ಡಿಪೋಗೆ ಭೇಟಿ ಕೊಡುವ ಮೂಲಕ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...