alex Certify ಬಿಜೆಪಿಗೆ 17, ಜೆಡಿಯು 16, ಎಲ್‌ಜೆಪಿಗೆ 5 ಸ್ಥಾನ: ಬಿಹಾರದಲ್ಲಿ ಲೋಕಸಭೆ ಚುನಾವಣೆಗೆ NDA ಸೀಟು ಹಂಚಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಗೆ 17, ಜೆಡಿಯು 16, ಎಲ್‌ಜೆಪಿಗೆ 5 ಸ್ಥಾನ: ಬಿಹಾರದಲ್ಲಿ ಲೋಕಸಭೆ ಚುನಾವಣೆಗೆ NDA ಸೀಟು ಹಂಚಿಕೆ

ಪಾಟ್ನಾ: ಬಿಹಾರದ ಎನ್‌ಡಿಎ ನಾಯಕರು ಸೋಮವಾರ ರಾಜ್ಯದಲ್ಲಿ ಸೀಟು ಹಂಚಿಕೆ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಬಿಜೆಪಿ 17 ಲೋಕಸಭಾ ಸ್ಥಾನಗಳು, ಜೆಡಿಯು 16, ಎಲ್‌ಜೆಪಿ(ರಾಮ್ ವಿಲಾಸ್) 5, ಇತರ ಎರಡು ಪಕ್ಷಗಳು ತಲಾ ಒಂದರಲ್ಲಿ ಸ್ಪರ್ಧಿಸಲಿವೆ ಎಂದು ಬಿಜೆಪಿ ನಾಯಕ ವಿನೋದ್ ತಾವ್ಡೆ ಹೇಳಿದ್ದಾರೆ.

ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ತಲಾ ಒಂದು ಸ್ಥಾನವನ್ನು ಪಡೆದಿವೆ ಎಂದು ಅವರು ಹೇಳಿದ್ದಾರೆ.

ಲೋಕ ಜನಶಕ್ತಿ ಪಕ್ಷಕ್ಕೆ(ರಾಮ್ ವಿಲಾಸ್) 5 ಸ್ಥಾನಗಳನ್ನು ನೀಡಲಾಗಿದೆ. ಬಿಹಾರದ ಎಲ್ಲಾ 40 ಲೋಕಸಭಾ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಲೋಕ ಜನಶಕ್ತಿ ಪಕ್ಷದ(ರಾಮ್ ವಿಲಾಸ್) ಬಿಹಾರ ರಾಜ್ಯ ಅಧ್ಯಕ್ಷ ರಾಜು ತಿವಾರಿ ಹೇಳಿದ್ದಾರೆ.

ಬಿಜೆಪಿ ಸ್ಪರ್ಧಿಸಲಿರುವ ಕ್ಷೇತ್ರಗಳು

ಪಶ್ಚಿಮ ಚಂಪಾರಣ್, ಪೂರ್ವಿ ಚಂಪಾರಣ್, ಔರಂಗಾಬಾದ್, ಮಧುಬನಿ, ಅರಾರಿಯಾ, ದರ್ಬಂಗಾ, ಮುಜಾಫರ್‌ಪುರ, ಮಹಾರಾಜ್‌ಗಂಜ್, ಸರನ್, ಉಜಿಯಾರ್‌ಪುರ, ಬೇಗುಸರೈ, ನಾವಡಾ, ಪಾಟ್ನಾ ಸಾಹಿಬ್, ಪಾಟಲಿಪುತ್ರ, ಅರ್ರಾ, ಬಕ್ಸರ್ ಮತ್ತು ಸಸಾರಾಮ್ ಸೇರಿದಂತೆ 17 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ ಸ್ಪರ್ಧಿಸಲಿದೆ.

ಜೆಡಿಯು ಕ್ಷೇತ್ರಗಳು

ಜನತಾ ದಳ-ಯುನೈಟೆಡ್ ವಾಲ್ಮೀಕಿ ನಗರ, ಸೀತಾಮರ್ಹಿ, ಝಂಜರ್‌ಪುರ, ಸುಪೌಲ್, ಕಿಶನ್‌ಗಂಜ್, ಕತಿಹಾರ್, ಪೂರ್ಣಿಯಾ, ಮಾಧೇಪುರ, ಗೋಪಾಲ್‌ಗಂಜ್, ಸಿವಾನ್, ಭಾಗಲ್ಪುರ್, ಬಂಕಾ, ಮುಂಗೇರ್, ನಳಂದ, ಜಹಾನಾಬಾದ್ ಮತ್ತು ಶೆಯೋಹರ್ ಸೇರಿದಂತೆ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್) ಬಿಹಾರದಲ್ಲಿ ವೈಶಾಲಿ, ಹಾಜಿಪುರ್, ಸಮಸ್ತಿಪುರ್, ಖಗಾರಿಯಾ ಮತ್ತು ಜಮುಯಿ ಸೇರಿದಂತೆ 5 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ(ಹೆಚ್‌ಎಎಂ) ಗಯಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲಿದ್ದು, ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಕರಕಟ್ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...