alex Certify BIG NEWS: ಸಾವಿನಲ್ಲೂ ಸಾರ್ಥಕತೆ ಮೆರೆದ ನಟ; ಅಂಗಾಂಗ ದಾನ ಮಾಡಿದ್ದಕ್ಕೆ ಸಂಚಾರಿ ವಿಜಯ್ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾವಿನಲ್ಲೂ ಸಾರ್ಥಕತೆ ಮೆರೆದ ನಟ; ಅಂಗಾಂಗ ದಾನ ಮಾಡಿದ್ದಕ್ಕೆ ಸಂಚಾರಿ ವಿಜಯ್ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ

ಬೆಂಗಳೂರು: ಅಪಘಾತದಿಂದ ನಿಧನರಾಗಿರುವ ಸ್ಯಾಂಡಲ್ ವುಡ್ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಕುಟುಂಬಸ್ಥರು ವಿಜಯ್ ಅಂಗಾಂಗ ದಾನ ಮಾಡಿದ್ದು, ಬೇರೊಬ್ಬ ವ್ಯಕ್ತಿಗೆ ಅಂಗಾಂಗ ಕಸಿ ಪ್ರಕ್ರಿಯೆ ಕೂಡ ಮುಗಿದಿದೆ.

ಪ್ರತಿಭಾವಂತ ನಟನ ಅಗಲಿಕೆಗೆ ಸಂತಾಪ ಸೂಚಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟನ ನಿಧನಕ್ಕೆ ಭಾವಪೂರ್ವ ಶ್ರಂದ್ಧಾಂಜಲಿ.
ಅವರ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿರುವ ಕುಟುಂಬದವರಿಗೆ ಕೃತಜ್ಞತೆಗಳ ಜೊತೆಗೆ ಸಂತಾಪ ಸೂಚಿಸುತ್ತೇನೆ.

ಬರಿಗೈಲಿ ನಾಗರಹಾವನ್ನ ಹಿಡಿದ ಯುವತಿ…! ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಸಂಚಾರಿ ವಿಜಯ್ ಅವರು ರಂಗಭೂಮಿ, ಸಿನೆಮಾ ರಂಗಗಳೆರಡರಲ್ಲೂ ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ರಾಮ ಜನ್ಮಭೂಮಿ ಟ್ರಸ್ಟ್​ ವಿರುದ್ಧ ಕೋಟಿಗಟ್ಟಲೇ ಅಕ್ರಮ ಭೂ ಅವ್ಯವಹಾರದ ಆರೋಪ

ಇದೇ ವೇಳೆ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಪೊಲೀಸ್ ಗೌರವಗಳೊಂದಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...