alex Certify BIG NEWS: ಮನೆಯ ತ್ಯಾಜ್ಯ ಶುಲ್ಕ ನಿರ್ಧರಿಸುತ್ತೆ ನಿಮ್ಮ ಕರೆಂಟ್​ ಬಿಲ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮನೆಯ ತ್ಯಾಜ್ಯ ಶುಲ್ಕ ನಿರ್ಧರಿಸುತ್ತೆ ನಿಮ್ಮ ಕರೆಂಟ್​ ಬಿಲ್​..!

ನಗರದಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಣೆ ಮಾಡುವ ಸೇವೆಯನ್ನು ನೀಡುತ್ತಿರುವ ಬಿಬಿಎಂಪಿಯು ಈ ಸೇವೆಗೆ ಬಳಕೆದಾರರಿಂದ ಶುಲ್ಕವನ್ನು ಸಂಗ್ರಹಿಸಲು ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ಕೋರಿದೆ. ಹೀಗಾಗಿ ಬಳಕೆದಾರರಿಂದ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಸಂಗ್ರಹಿಸಲು ಬಿಬಿಎಂಪಿಯು ಆಯಾ ಮನೆಗಳ ವಿದ್ಯುತ್​ ಬಿಲ್​ನ್ನು ಮಾನದಂಡವಾಗಿ ಬಳಕೆ ಮಾಡಲು ಮುಂದಾಗಿದೆ.

ಈ ವಿಚಾರವಾಗಿ ಮಾಹಿತಿ ನೀಡಿದ ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತ್ಯಾಜ್ಯ ಸಂಗ್ರಹಣಾ ಸೇವೆಗೆ ಶುಲ್ಕವನ್ನು ವಿಧಿಸಲು ಮಾಸಿಕ ವಿದ್ಯುತ್​ ಬಿಲ್​ ಸೂಕ್ತವಾದ ಮಾನದಂಡವಾಗಿದೆ. ಮನೆಯವರ ಆದಾಯದ ಮೇಲೆ ಹಾಗೂ ಆಯಾ ಮನೆಯಲ್ಲಿ ವಾಸಿಸುವರ ಸಂಖ್ಯೆಯನ್ನು ಅವಲಂಬಿಸಿ ಬದಲಾಗುತ್ತದೆ. ಹೀಗಾಗಿ ಕಡಿಮೆ ವಿದ್ಯುತ್​ ಬಿಲ್​ ಪಡೆಯುವವರಿಗೆ ನಾವು 30 ರೂಪಾಯಿ ಸೇವಾ ಶುಲ್ಕ ನಿಗದಿ ಮಾಡಿದ್ದೇವೆ ಎಂದು ಹೇಳಿದರು.

ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಚರ್ಚೆಯ ಸಮಯದಲ್ಲಿ ಈ ಅಂಕಿ ಅಂಶಗಳು ಬದಲಾಗಲೂಬಹುದು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಪ್ರತಿ ತಿಂಗಳು ಬಳಕೆದಾರರ ಶುಲ್ಕ ಸಂಗ್ರಹಿಸಲು ಬೆಸ್ಕಾಂ ಅಧಿಕಾರಿಗಳ ನೆರವು ಪಡೆಯುವುದಾಗಿ ಬಿಬಿಎಂಪಿ ಈ ಹಿಂದೆಯೇ ಬಹಿರಂಗಪಡಿಸಿತ್ತು. ಘನತ್ಯಾಜ್ಯ ನಿರ್ವಹಣೆಗೆ ಸುಮಾರು 800 ಕೋಟಿ ರೂಪಾಯಿ ಖರ್ಚು ಮಾಡುವ ಪೌರಕಾರ್ಮಿಕ ಸಂಸ್ಥೆಯು ವರ್ಷಕ್ಕೆ ಸುಮಾರು 200 ಕೋಟಿಯಿಂದ 300 ಕೋಟಿ ರೂಪಾಯಿ ಗಳಿಸುವ ಭರವಸೆ ಹೊಂದಿದೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...