alex Certify BIG NEWS: ಒಮ್ಮಿಂದೊಮ್ಮೆ 300 ಸಿಬ್ಬಂದಿಗಳನ್ನ ಕೆಲಸದಿಂದ ವಜಾ ಮಾಡಿದ NETFLIX | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಮ್ಮಿಂದೊಮ್ಮೆ 300 ಸಿಬ್ಬಂದಿಗಳನ್ನ ಕೆಲಸದಿಂದ ವಜಾ ಮಾಡಿದ NETFLIX

ನೆಟ್‌ಫ್ಲಿಕ್ಸ್‌ ಬಹುಬೇಡಿಕೆಯಲ್ಲಿರುವ ಸ್ಟ್ರೀಮಿಂಗ್ ಅಪ್ಲಿಕೇಶನ್. ಆದರೆ ಕೊರೊನಾ ಕಾಲದ ನಂತರದಿಂದ ಈ ಕಂಪನಿ ನಷ್ಟವನ್ನ ಅನುಭವಿಸುತ್ತಿದೆ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಕಾರಣ ಬೇರೆ ಬೇರೆ ಅಪ್ಲಿಕೇಶನ್‌ಗಳು ನೆಟ್‌ಫ್ಲಿಕ್ಸ್‌ಗೆ ಕೊಡ್ತಿರೋ ಟಕ್ಕರ್.

ಸ್ಟ್ರೀಮಿಂಗ್ ದೈತ್ಯ ಅಂತಾನೇ ಫೇಮಸ್ ಆಗಿರೋ ನೆಟ್‌ಫ್ಲಿಕ್ಸ್‌, ದಿನದಿಂದ ದಿನಕ್ಕೆ ಚಂದಾದಾರರನ್ನ ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಈಗಾಗಲೇ ನೆಟ್‌ಫ್ಲಿಕ್ಸ್‌ ಇದರ ಬೆಲೆಯನ್ನ ಕೂಡಾ ಕಡಿತಗೊಳಿಸಿದೆ. ಆದರೂ ಚಂದಾದಾರರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿಲ್ಲ. ಆದ್ದರಿಂದ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನ ವಜಾ ಮಾಡುವ ನಿರ್ಧಾರಕ್ಕೆ ಕಂಪನಿ ಬಂದಿದೆ. ಈಗಾಗಲೇ ಮೊದಲ ಸುತ್ತಿನಲ್ಲಿ ಅಂದರೆ ಮೇ ನಲ್ಲಿ 200 ಉದ್ಯೋಗಿಗಳಿಗೆ ಗೇಟ್ ಪಾಸ್‌ ಕೊಟ್ಟಿತ್ತು. ಈಗ ಮತ್ತೆ 300 ಜನರನ್ನ ವಜಾ ಮಾಡುವುದಕ್ಕೆ ಕಂಪನಿ ಮುಂದಾಗಿದೆ. ಅಂದರೆ ಕಂಪನಿ 4% ಉದ್ಯೋಗಿಗಳನ್ನ ಕಡಿತಗೊಳಿಸುವುದು ಕನ್ಫರ್ಮ್ ಆಗಿದೆ.

ಕಂಪನಿಯ ಈ ನಿರ್ಧಾರದಿಂದ ಅಮೆರಿನ್ ಉದ್ಯೋಗಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಈ ಹಿಂದೆ ಕೂಡಾ ಅಮೆರಿಕನ್ ಉದ್ಯೋಗಿಗಳೇ ಕೆಲಸವನ್ನ ಕಳೆದುಕೊಂಡಿದ್ದರು, ಈಗ ಮತ್ತೆ ಅವರು ಕೆಲಸ ಕಳೆದುಕೊಳ್ಳುವ ಆತಂಕವನ್ನ ಎದುರಿಸುತ್ತಿದ್ದಾರೆ.

“ವ್ಯವಹಾರದಲ್ಲಿ ಗಮನಾರ್ಹ ಹೂಡಿಕೆಗಳನ್ನ ಮಾಡುವುದನ್ನ ಕಂಪನಿ ಮುಂದುವರೆಸುತ್ತಿದೆ. ಆದರೆ ನಿಧಾನಗತಿಯ ಬೆಳವಣಿಗೆಯಿಂದಾಗಿ ಕಂಪನಿ ನಷ್ಟವನ್ನ ಅನುಭವಿಸುತ್ತಿದೆ. ಆದ್ದರಿಂದ ನಮಗೆ ಎಲ್ಲ ವಿಭಾಗಗಳನ್ನ ನಿಭಾಯಿಸಲು ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಕಂಪನಿ ಈ ಒಂದು ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ” ಅಂತ ನೆಟ್‌ಫ್ಲಿಕ್ಸ್‌ ಅಧಿಕಾರಿಗಳು ಸ್ಪಷ್ಟನೆಯನ್ನ ಕೊಟ್ಟಿದ್ದಾರೆ.

ಹಣದುಬ್ಬರ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ, ಮತ್ತು ಅನೇಕ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಕೊಡುತ್ತಿರುವ ಪೈಪೋಟಿಯನ್ನ ನೆಟ್‌ಫ್ಲಿಕ್ಸ್‌ ಎದುರಿಸೊಕ್ಕಾಗದೇ ಪರದಾಡ್ತಿದೆ. ಮೊದಲ ತ್ರೈಮಾಸಿಕ ಚಂದಾದಾರರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಇದೇ ರೀತಿ ಮುಂದುವರೆದಿದ್ದೆ ಆದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನಷ್ಟವನ್ನ ಕಂಪನಿ ಅನುಭವಿಸುತ್ತದೆ.

ಇದೆಲ್ಲದಕ್ಕೂ ಪರಿಹಾರವಾಗಿ ಈಗಾಗಲೇ ಅಗ್ಗದ ಜಾಹೀರಾತುಗಳನ್ನ ಬಳಸಿಕೊಳ್ಳುವುದಕ್ಕೆ ಕಂಪನಿ ನಿರ್ಧಾರ ಮಾಡಿದೆ. ಈ ಕುರಿತು ಬೇರೆ, ಬೇರೆ ಕಂಪನಿಗಳ ಜೊತೆ ಮಾತುಕತೆ ನಡೆಸುತ್ತಿದೆ. ಈ ರೀತಿಯಿಂದಾದರೂ ನಷ್ಟವನ್ನ ಭರಿಸುವ ಪ್ರಯತ್ನಕ್ಕೆ ಕಂಪನಿ ಮಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...