alex Certify ಅಪಾಯದಲ್ಲಿದ್ದಾರೆ ಐಟಿ ವಲಯದ ಉದ್ಯೋಗಿಗಳು, ಅಧ್ಯಯನದಲ್ಲಿ ಬಹಿರಂಗವಾಗಿದೆ ಶಾಕಿಂಗ್‌ ಸಂಗತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾಯದಲ್ಲಿದ್ದಾರೆ ಐಟಿ ವಲಯದ ಉದ್ಯೋಗಿಗಳು, ಅಧ್ಯಯನದಲ್ಲಿ ಬಹಿರಂಗವಾಗಿದೆ ಶಾಕಿಂಗ್‌ ಸಂಗತಿ….!

ಅಧಿಕ ಕೊಲೆಸ್ಟ್ರಾಲ್ ಬಹಳ ಗಂಭೀರವಾದ ಸಮಸ್ಯೆ. ಇದು ಹೃದಯವನ್ನು ದುರ್ಬಲಗೊಳಿಸುತ್ತದೆ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಎಂಬ ಕೊಬ್ಬಿನ ಅಂಶ ಹೆಚ್ಚಾದಾಗ ಅಧಿಕ ಕೊಲೆಸ್ಟ್ರಾಲ್ ಉಂಟಾಗುತ್ತದೆ. ಇದು ಮುಖ್ಯವಾಗಿ ಕೊಬ್ಬಿನ ಆಹಾರ ಸೇವನೆ, ಸಾಕಷ್ಟು ವ್ಯಾಯಾಮ ಮಾಡದಿರುವುದು, ಅಧಿಕ ತೂಕ, ಧೂಮಪಾನ ಮತ್ತು ಮದ್ಯಪಾನದಿಂದ ಉಂಟಾಗುತ್ತದೆ.

ಇತ್ತೀಚೆಗೆ ನಡೆಸಲಾದ ಅಧ್ಯಯನವೊಂದರಲ್ಲಿ ಆತಂಕಕಾರಿ ಸಂಗತಿ  ಬಹಿರಂಗವಾಗಿದೆ. ಈ ಅಧ್ಯಯನದ ಪ್ರಕಾರ ಮಾಹಿತಿ ತಂತ್ರಜ್ಞಾನ (ಐಟಿ) ವಲಯದಲ್ಲಿ ಕೆಲಸ ಮಾಡುವ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಐಟಿ ವೃತ್ತಿಪರರಲ್ಲಿ 61 ಪ್ರತಿಶತದಷ್ಟು ಜನರು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿದ್ದಾರೆ. ಭಾರತದ ಕಾರ್ಪೊರೇಟ್ ವಲಯದಲ್ಲಿ ಆತಂಕ ಮೂಡಿಸುವಂತಹ ಸಂಗತಿ ಇದು.

ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣವೇನು?

ಅಧಿಕ ಕೊಲೆಸ್ಟ್ರಾಲ್ ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಲ್ಲದು. ಐಟಿ ಉದ್ಯೋಗಿಗಳಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಲು ಕಾರಣವೆಂದರೆ ಜಡ ಜೀವನಶೈಲಿ. ದೀರ್ಘಕಾಲ ಕುಳಿತು ಕೆಲಸ ಮಾಡುವುದು, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆ ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣವಾಗುತ್ತಿದೆ.

ಅಧಿಕ ಕೊಲೆಸ್ಟ್ರಾಲ್‌ನ ಹೊರತಾಗಿ ಶೇ.22ರಷ್ಟು ಐಟಿ ವಲಯದ ಉದ್ಯೋಗಿಗಳು ಸ್ಥೂಲಕಾಯತೆ, ಶೇ.17ರಷ್ಟು ಮಂದಿ ಪ್ರಿ-ಡಯಾಬಿಟಿಸ್, ಹೈಪೋಥೈರಾಯ್ಡಿಸಮ್ ಮತ್ತು ರಕ್ತಹೀನತೆ, ಮಧುಮೇಹದಂತಹ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ.

ಸಂಶೋಧಕರ ಪ್ರಕಾರ ಐಟಿ ವೃತ್ತಿಪರರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಸಾಕಷ್ಟು ನಿದ್ರೆ ಮಾಡುವುದು ಬಹಳ ಮುಖ್ಯ. ಇದಲ್ಲದೆ ನಿರಂತರವಾಗಿ ಕುಳಿತು ಕೆಲಸ ಮಾಡುವ ಬದಲು ನಡುವೆ ಚಿಕ್ಕ ಚಿಕ್ಕ ಬ್ರೇಕ್‌ ತೆಗೆದುಕೊಂಡು ವಾಕಿಂಗ್‌ ಮಾಡಬೇಕು. ಹೆಚ್ಚು ಕ್ರಿಯಾಶೀಲರಾಗಿದ್ದರೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...