alex Certify BIG NEWS: ಒಂದೇ ಹಳಿಯಲ್ಲಿ 2 ರೈಲುಗಳು ಎದುರಾದರೂ ಆಗುವುದಿಲ್ಲ ಅಪಘಾತ; ಭಾರತದಲ್ಲೇ ನಿರ್ಮಾಣವಾಗಿದೆ ಹೆಮ್ಮೆಯ ರಕ್ಷಣಾ ಸಾಧನ ‌ʼಕವಚ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೇ ಹಳಿಯಲ್ಲಿ 2 ರೈಲುಗಳು ಎದುರಾದರೂ ಆಗುವುದಿಲ್ಲ ಅಪಘಾತ; ಭಾರತದಲ್ಲೇ ನಿರ್ಮಾಣವಾಗಿದೆ ಹೆಮ್ಮೆಯ ರಕ್ಷಣಾ ಸಾಧನ ‌ʼಕವಚ್ʼ

ಎರಡು ರೈಲುಗಳು ಪೂರ್ಣ ವೇಗದಲ್ಲಿ ಒಂದಕ್ಕೊಂದು ಮುಖಾಮುಖಿಯಾಗಿ ಚಲಿಸಲಿವೆ. ಅವುಗಳಲ್ಲಿ ಒಂದು ರೈಲಿನಲ್ಲಿ ರೈಲ್ವೇ ಸಚಿವರು ಇದ್ದರು. ಎದುರುಬದುರಾಗಿ ಹೋದರೂ ಆ ಎರಡು ರೈಲುಗಳು ಡಿಕ್ಕಿಯಾಗಿಲ್ಲ ಯಾವುದೇ ಅಪಘಾತವಾಗಿಲ್ಲ, ಇದಕ್ಕೆ ಕಾರಣ ಕವಚ.

ಭಾರತೀಯ ರೈಲ್ವೇ ಅಭಿವೃದ್ಧಿಪಡಿಸಿರುವ “ಕವಚ್” ಎಂಬ ಸ್ವಯಂಚಾಲಿತ ರೈಲು ರಕ್ಷಣೆ ಸಿಸ್ಟಮ್ ಅನ್ನು ಇಂದು ಪರೀಕ್ಷಿಸಲಾಗಿದೆ. ಭಾರತದಲ್ಲೇ ನಿರ್ಮಾಣವಾಗಿರುವ ಹೆಮ್ಮೆಯ ರಕ್ಷಣಾ “ಕವಚ್”, ಪರೀಕ್ಷೆಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿದ್ದು ಅಪಘಾತದಿಂದ ರಕ್ಷಣೆ ನೀಡಿದೆ.

ಶೂನ್ಯ ಅಪಘಾತಗಳನ್ನು ಸಾಧಿಸುವ ಗುರಿಯಿಂದ ಈ ಕವಚವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಸಿಕಂದರಾಬಾದ್ ನಲ್ಲಿ ಇಂದು ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯನ್ನು ನೈಜ ಸಮಯದಲ್ಲಿ ಪರೀಕ್ಷಿಸಲಾಗಿದೆ. ಪರೀಕ್ಷೆಯ ವೇಳೆ ರೈಲಿನಲ್ಲಿ, ರೈಲ್ವೇ ಸಚಿವರು ಹಾಗೂ ಇಲಾಖೆಯ ಇತರ ಅಧಿಕಾರಿಗಳು ಭಾಗಿಯಾಗಿದ್ದರು. ಈ ವಿಡಿಯೋವನ್ನು ಸಚಿವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ʼಕವಚ್ʼ ಹೇಗೆ ಕೆಲಸ ಮಾಡುತ್ತದೆ …?

ನಿಗದಿತ ದೂರದಲ್ಲಿ ಅದೇ ಮಾರ್ಗದಲ್ಲಿ ಮತ್ತೊಂದು ರೈಲನ್ನು ಗಮನಿಸಿದಾಗ ರೈಲನ್ನು ಸ್ವಯಂಚಾಲಿತವಾಗಿ ನಿಲುಗಡೆಗೆ ತರಲು ಕವಚವನ್ನು ವಿನ್ಯಾಸಗೊಳಿಸಲಾಗಿದೆ. ಈ ರಕ್ಷಾ ಕವಚದ ಪರಿಣಾಮವಾಗಿ ರೈಲುಗಳು ಡಿಕ್ಕಿಯಾಗುವುದಿಲ್ಲ. ಜಿಪಿಎಸ್, ರೇಡಿಯೋ ಫ್ರೀಕ್ವೆನ್ಸಿಯಂತಹ ವ್ಯವಸ್ಥೆಗಳಲ್ಲಿ ಕವಚ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ. ಕವಚ್ ಅನ್ನು ಅತ್ಯಂತ ಸುರಕ್ಷಿತ ಸಿಸ್ಟಮ್ ಎನ್ನಲಾಗಿದ್ದು, ಸೇಫ್ಟಿ ಇಂಟೆಗ್ರೆಟಿ ಲೆವೆಲ್ 4ರ ಸುರಕ್ಷತಾ ಪ್ರಮಾಣ ಪಡೆದುಕೊಂಡಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಈ ವ್ಯವಸ್ಥೆಯ ಪ್ರಕಾರ ರೆಡ್ ಸಿಗ್ನಲ್ ದಾಟಿದ ತಕ್ಷಣ ಸ್ವಯಂಚಾಲಿತವಾಗಿ ರೈಲಿಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತದೆ. ಹೀಗಾದಾಗ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ರೈಲುಗಳು ನಿಲ್ಲುತ್ತವೆ. ಇದಲ್ಲದೆ, ರಕ್ಷಾಕವಚವು ಹಿಂದಿನಿಂದ ಬರುವ ರೈಲನ್ನು ಕೂಡ ರಕ್ಷಿಸುತ್ತದೆ.

ರೈಲು ಚಾಲಕನಿಂದ ಯಾವುದೇ ಲೋಪ ಉಂಟಾದರೆ ಕವಚ್ ಆಡಿಯೊ-ವಿಡಿಯೋ ಮೂಲಕ ಮೊದಲು ಎಚ್ಚರಿಸುತ್ತದೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ರೈಲಿನಲ್ಲಿ ಸ್ವಯಂಚಾಲಿತ ಬ್ರೇಕ್‌ಗಳನ್ನು ಅನ್ವಯಿಸಲಾಗುತ್ತದೆ. ಇದರೊಂದಿಗೆ, ಈ ವ್ಯವಸ್ಥೆಯು ರೈಲು ನಿಗದಿತ ವಿಭಾಗದ ವೇಗಕ್ಕಿಂತ ವೇಗವಾಗಿ ಓಡಲು ಅನುಮತಿಸುವುದಿಲ್ಲ. ರಕ್ಷಾಕವಚದಲ್ಲಿರುವ RFID ಸಾಧನಗಳನ್ನು ರೈಲು ಎಂಜಿನ್, ಸಿಗ್ನಲ್ ವ್ಯವಸ್ಥೆ, ರೈಲು ನಿಲ್ದಾಣದ ಒಳಗೆ ಅಳವಡಿಸಲಾಗುವುದು.

“ಕವಚ್”ದ ಭವಿಷ್ಯವೇನು…?

ಆತ್ಮನಿರ್ಭರ್ ಭಾರತದ ಉಪಕ್ರಮದ ಭಾಗವಾಗಿ 2022ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ, 2022-23 ರಲ್ಲಿ ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ 2,000 ಕಿಮೀ ರೈಲು ಜಾಲವನ್ನು ಸ್ಥಳೀಯ ವಿಶ್ವ ದರ್ಜೆಯ ತಂತ್ರಜ್ಞಾನ ‘ಕವಚ್’ ಅಡಿಯಲ್ಲಿ ತರಲು ಯೋಜಿಸಲಾಗಿದೆ.

ಸೌತ್ ಸೆಂಟ್ರಲ್ ರೈಲ್ವೇಯಲ್ಲಿ ಪ್ರಸ್ತುತ ನಡೆಯುತ್ತಿರುವ ಯೋಜನೆಗಳಲ್ಲಿ 1098 ರೂಟ್ ಕಿಮೀ ಮತ್ತು 65 ಲೋಕೋಗಳಲ್ಲಿ ಕವಚವನ್ನು ನಿಯೋಜಿಸಲಾಗಿದ್ದು, ಗಂಟೆಗೆ 160 ಕಿಮೀ ವೇಗಕ್ಕೆ ಅನುಮೋದಿಸಲಾಗಿದೆ. ಇದಲ್ಲದೆ, 160 ಕಿಮೀ ವೇಗವನ್ನು ಹೆಚ್ಚಿಸುವ ಮಿಷನ್ ರಾಫ್ತಾರ್ ಯೋಜನೆಯ ಭಾಗವಾಗಿ ದೆಹಲಿ-ಮುಂಬೈ ಮತ್ತು ದೆಹಲಿ ಹೌರಾ ಕಾರಿಡಾರ್‌ಗಳಲ್ಲಿ ಕವಚವನ್ನು ಅಳವಡಿಸಲು ಯೋಜಿಸಲಾಗಿದೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...