alex Certify ಎದೆ ಹಾಲು-ಹೊಕ್ಕಳ ಬಳ್ಳಿಯಿಂದ ಆಭರಣ ಸಿದ್ಧಪಡಿಸ್ತಾರೆ ಈ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ಹಾಲು-ಹೊಕ್ಕಳ ಬಳ್ಳಿಯಿಂದ ಆಭರಣ ಸಿದ್ಧಪಡಿಸ್ತಾರೆ ಈ ಮಹಿಳೆ

ಮನೆಗೆ ಮಗು ಬಂದ್ರೆ ಅದ್ರ ಖುಷಿಯೇ ಬೇರೆ. ಮನೆ ವಾತಾವರಣವನ್ನೇ ನವಜಾತ ಶಿಶು ಬದಲಿಸಿರುತ್ತದೆ. ಮಗುವಿನ ಮೊದಲ ನಗುವಿನಿಂದ ಹಿಡಿದು, ಮಗುವಿನ ಪ್ರತಿಯೊಂದು ಹೊಸದು ಕುಟುಂಬಸ್ಥರಿಗೆ ಖುಷಿ ನೀಡುತ್ತದೆ. ಮಗುವಿನ ಆ ಕ್ಷಣವನ್ನು ಅನೇಕರು ಫೋಟೋ, ವಿಡಿಯೋದಲ್ಲಿ ಹಿಡಿದಿಡುತ್ತಾರೆ. ಆದ್ರೆ ಬೆಂಗಳೂರಿನ ಮಹಿಳೆಯೊಬ್ಬಳು ಅದ್ಭುತ ಕೆಲಸ ಮಾಡಿದ್ದಾರೆ.

ಎದೆ ಹಾಲು, ಮಗುವಿನ ಕತ್ತರಿಸಿದ ಮೊದಲ ಉಗುರು ಹಾಗೂ ಕೂದಲು ಸೇರಿದಂತೆ ಹೊಕ್ಕಳಬಳ್ಳಿ, ಹಾಲು ಹಲ್ಲು ಎಲ್ಲವನ್ನೂ ಬಳಸಿ ವಿವಿಧ ಜ್ಯುವೆಲರಿ ಸಿದ್ಧಪಡಿಸಿದ್ದಾರೆ. ನಮಿತಾ, ಮಗು ಜನಿಸುತ್ತಿದ್ದಂತೆ, ಸ್ತನಪಾನ, ಬಾಲ್ಯದ ನೆನಪು ಸದಾ ಇರಬೇಕೆಂದು ನಿರ್ಧರಿಸಿದ್ರು. ಬಯೋಟೆಕ್ನಾಲಜಿಯಲ್ಲಿ ಎಂಎಸ್ಸಿ ಮಾಡಿರುವ ನಮಿತಾ ತಾಯಿ ಹಾಲು, ಮಗುವಿನ ಹೊಕ್ಕುಳಬಳ್ಳಿ, ಹಿಂದೆ ಕತ್ತರಿಸಿದ ಉಗುರುಗಳು ಮತ್ತು ಕೂದಲನ್ನು ಬಳಸಿ ಆಭರಣ ತಯಾರಿಸಲು ಮುಂದಾದ್ರು. ಇದ್ರಲ್ಲಿ ಯಶಸ್ಸು ಕಂಡ ನಮಿತಾ, ಮಾಮ್ಸ್ ಮಿಲ್ಕಿಟೇಲ್ ಜ್ಯುವೆಲ್ಸ್ ಎಂಬ ಉದ್ಯಮ ಶುರು ಮಾಡಿದ್ದಾರೆ. ನಮಿತಾ ಈ ವಿಶಿಷ್ಟ್ಯ ಪ್ರಯತ್ನಕ್ಕೆ ಅನೇಕ ತಾಯಂದಿರ ಬೆಂಬಲವಿದೆ. ಅನೇಕರು, ಮಗುವಿನ ನೆನಪನ್ನು ಸದಾ ಜೊತೆಗಿಟ್ಟುಕೊಳ್ಳಲು ನಮಿತಾ ಸಂಪರ್ಕಿಸಿ, ಜ್ಯುವೆಲರಿ ಸಿದ್ಧಪಡಿಸಿದ್ದಾರೆ. ಭಾರತದಾದ್ಯಂತ ನಮಿತಾ ಆರ್ಡರ್ ಪಡೆದು, ಆಭರಣ ಮಾಡುತ್ತಾರೆ.

ನಟ ರಾಜ್‌ಕುಮಾರ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪತ್ರಲೇಖಾ

ಎದೆ ಹಾಲನ್ನು ಸಂಸ್ಕರಿಸಿ,ಅದಕ್ಕೆ ರಾಸಾಯನಿಕ ಬೆರೆಸಿ ಒಣಗಿಸಿ, ಪುಡಿ ಮಾಡಿ ಅವರು ಜ್ಯುವೆಲರಿ ಸಿದ್ಧಪಡಿಸುತ್ತಾರೆ. ಬೆಳ್ಳಿ, ಬಂಗಾರದ ಕೋಟಿಂಗ್ ಕೂಡ ಮಾಡಲಾಗುತ್ತದೆ. ಗ್ರಾಹಕರಿಗೆ ಬೇಕಾದ ಆಭರಣ ಸಿದ್ಧಪಡಿಸಲಾಗುತ್ತದೆ. 1300ರಿಂದ 3500ರವರೆಗೆ ಶುಲ್ಕ ವಿಧಿಸಲಾಗುತ್ತದೆ. ತೂಕ ಮತ್ತು ಡಿಸೈನ್ ಮೇಲೆ ಬೆಲೆ ನಿಗದಿಯಾಗುತ್ತದೆ.

This Bangalore Woman Makes Breast Milk & Umbilical Cord Jewellery Starting  At Rs 1,500 | WhatsHot Bangalore

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...