alex Certify ಗ್ರಾಹರಿಂದ ವಸೂಲಿ ಮಾಡುವ ʼಸರ್ವೀಸ್​ ಚಾರ್ಜ್ʼ​ ಈ ಕೆಲಸಕ್ಕೆ ಬಳಸುತ್ತಿತ್ತಂತೆ ಕೆಫೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹರಿಂದ ವಸೂಲಿ ಮಾಡುವ ʼಸರ್ವೀಸ್​ ಚಾರ್ಜ್ʼ​ ಈ ಕೆಲಸಕ್ಕೆ ಬಳಸುತ್ತಿತ್ತಂತೆ ಕೆಫೆ…!

ಹೋಟೆಲ್​ಗಳು ಹೆಚ್ಚುವರಿಯಾಗಿ ಗ್ರಾಹಕರಿಂದ ಸೇವಾ ಶುಲ್ಕ ಪಡೆಯುವಂತಿಲ್ಲ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಆದೇಶ ಹೊರಡಿಸಿದೆ. ಈ ಬಗ್ಗೆ ಸಾರ್ವಜನಿಕ ವಲಯ, ಹೋಟೆಲ್​ ಉದ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

ಹೋಟೆಲ್​ ಉದ್ಯಮ ಮಾತ್ರ ಪ್ರತಿ ಗ್ರಾಹಕನಿಂದ ಸೇವಾ ಶುಲ್ಕ ವಸೂಲಿ ಮಾಡುವುದು ಅಕ್ರಮವಲ್ಲ ಎಂದು ವಾದಿಸುತ್ತಿದೆ. ಈ ನಡುವೆ ಬೆಂಗಳೂರಿನ ಇಂದಿರಾ ನಗರ ಸೋಶಿಯಲ್​ ಕೆಫೆ ತಾನು ಪ್ರತಿ ಟೇಬಲ್​ನಲ್ಲಿ ಸೇವಾ ಶುಲ್ಕದ ಕುರಿತು ಸೂಚನೆಯನ್ನು ಹಾಕಿ ಗಮನ ಸೆಳೆಯುತ್ತಿದೆ.

ಇದೇ ಚಿತ್ರವನ್ನು ರೆಡ್ಡಿಟ್​ನಲ್ಲಿ ಅಪ್​ಲೋಡ್​ ಮಾಡಿದ್ದು ಚರ್ಚೆಗೆ ಕಾರಣವಾಗಿದೆ, ಸೇವಾ ಶುಲ್ಕವನ್ನು ಸ್ಥಳದಲ್ಲಿ ಊಟ ತಿಂಡಿ ಮಾಡುವ ಗ್ರಾಹಕರಿಂದ ಪಡೆಯಲಾಗುತ್ತಿದೆಯೇ ಹೊರತು ಟೇಕ್​ಔಟ್​ಗಳು ಮತ್ತು ಹೋಮ್​ ಡೆಲಿವರಿಗಳ ಮೇಲೆ ಅಲ್ಲ ಎಂದು ರೆಸ್ಟೋರೆಂಟ್​ ಹೇಳಿಕೊಂಡಿದೆ.

ಅಲ್ಲದೇ ಈ ಸೇವಾ ಶುಲ್ಕವು ಸಿಬ್ಬಂದಿಯ ʼಮಕ್ಕಳ ಶಿಕ್ಷಣ’ ಕ್ಕೆ ಪಾವತಿಸಲಾಗುತ್ತದೆ ಎಂದು ಕೆಫೆ ಹೇಳಿಕೊಂಡಿದೆ. ಸೇವಾ ಶುಲ್ಕವು “ಟಿಪ್​” ಅಥವಾ “ಕಾನೂನುಬಾಹಿರ” ಅಲ್ಲ ಎಂದು ಅವರು ತಿಳಿಸಲು ಪ್ರಯತ್ನಿಸಿದ್ದಾರೆ. ಗ್ರ್ರಾಹಕರು ನೀಡುವ ಸೇವಾ ಶುಲ್ಕವು ನಮ್ಮ ತಂಡದ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ನಮ್ಮಲ್ಲಿ ಟಿಪ್ಸ್​ ಕೇಳುವುದಿಲ್ಲ, ಟಿಪ್ಸ್​ ನೀಡಲು ಸ್ವಾಗತವಿದೆ ಎಂದು ಬೋರ್ಡ್​ನಲ್ಲಿ ಬರೆಯಲಾಗಿದೆ.

ಜಾಲತಾಣದಲ್ಲಿ ಅನೇಕರು ಕಾಮೆಂಟ್​ ವಿಭಾಗದಲ್ಲಿ ಅಭಿಪ್ರಾಯ ದಾಖಲಿಸಿದ್ದಾರೆ. ಒಬ್ಬರು ರೆಸ್ಟೋರೆಂಟ್​ ತಪ್ಪಿತಸ್ಥರೆಂದು ಕರೆದರೆ ಇನ್ನೊಬ್ಬರು ತಮಗಾದ ಅನುಭವವದ ದೊಡ್ಡ ಕತೆಯನ್ನೇ ಬರೆದುಕೊಂಡಿದ್ದಾರೆ.

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ರೆಸ್ಟೋರೆಂಟ್​ಗಳು ಮತ್ತು ಹೋಟೆಲ್​ಗಳು ಬಿಲ್​ಗಳಲ್ಲಿ ಸೇವಾ ಶುಲ್ಕ ವಿಧಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಘೋಷಿಸಿತು. ಆದರೆ ಬುಧವಾರ, ನ್ಯಾಷನಲ್​ ರೆಸ್ಟೊರೆಂಟ್​ ಅಸೋಸಿಯೇಷನ್​ ಆಫ್​ ಇಂಡಿಯಾ ರೆಸ್ಟೋರೆಂಟ್​ಗಳಲ್ಲಿ ಸೇವಾ ಶುಲ್ಕವನ್ನು ವಿಧಿಸುವುದು “ಕಾನೂನುಬಾಹಿರವಲ್ಲ’ ಎಂದು ಪ್ರಕಟಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...