alex Certify ವಿದ್ಯುತ್​ ಕಂಬದಲ್ಲಿ ಸಿಲುಕಿಕೊಂಡ ಕರಡಿ..! ಫೋಟೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್​ ಕಂಬದಲ್ಲಿ ಸಿಲುಕಿಕೊಂಡ ಕರಡಿ..! ಫೋಟೋ ವೈರಲ್​

ಅಮೆರಿಕದ ಅರಿಜೋನಾದಲ್ಲಿ ಕರಡಿಯೊಂದು ವಿದ್ಯುತ್​ ಕಂಬದಲ್ಲಿ ಸಿಲುಕಿಹಾಕಿಕೊಂಡಿದ್ದರ ಪರಿಣಾಮವಾಗಿ ವಿದ್ಯುತ್​ ಸಂಪರ್ಕವನ್ನ ಕಡಿತಗೊಳಿಸಬೇಕಾಗಿ ಬಂತು. ಕರಡಿ ಈ ರೀತಿ ವಿದ್ಯುತ್​ ಕಂಬದಲ್ಲಿ ಸಿಲುಕಿಹಾಕಿಕೊಂಡಿದೆ ಎಂದು ತಿಳಿದ ತಕ್ಷಣವೇ ವಿದ್ಯುತ್​ ಸ್ಥಗಿತಗೊಳಿಸಿದ್ದೆವು. ಅಲ್ಲದೇ 8 ಅಡಿ ಎತ್ತರದಲ್ಲಿದ್ದ ಕರಡಿಯನ್ನ ಅಲ್ಲಿಂದ ನೂಕುವ ಮೂಲಕ ಎಲೆಕ್ಟ್ರಿಕ್​ ಕಂಬದಿಂದ ಪಾರು ಮಾಡಲು ಯತ್ನಿಸಿದ್ದೇವೆ ಎಂದು ಸಿಬ್ಬಂದಿ ವರ್ನರ್ ನ್ಯೂಬೌರ್ ಹೇಳಿದ್ದಾರೆ.

ಕರಡಿ ಜೊತೆ ನಾನು ಮಾತನಾಡುತ್ತಿದ್ದೆ. ನಾನು ಕರಡಿ ಬಳಿ ನಿನ್ನನ್ನ ವಿದ್ಯುತ್​ ಕಂಬದಿಂದ ಪಾರಾಗಲು ಸಹಾಯ ಮಾಡುತ್ತೇನೆ ಎಂತಲೂ ಹೇಳಿದೆ. ಆದರೆ ನನಗೆ ಗೊತ್ತು ನನ್ನ ಮಾತು ಅದಕ್ಕೆ ಅರ್ಥ ಆಗಿರೋದಕ್ಕೆ ಸಾಧ್ಯವಿಲ್ಲ ಎಂದು ನ್ಯೂಬೌರ್​ ಹೇಳಿದ್ದಾರೆ.

ಆಂಗಿಕ ಭಾಷಾ ಕ್ಲಾಸ್‌ ಮೂಲಕ ಆನ್ಲೈನ್‌ನಲ್ಲಿ ಸಂಚಲನ ಸೃಷ್ಟಿಸಿದ 5ರ ಪೋರ

ಕೊನೆಗೂ ಕರಡಿಯೂ ವಿದ್ಯುತ್​ ಕಂಬದಿಂದ ಕೆಳಗೆ ಇಳಿದಿದ್ದು ಸ್ಥಳದಿಂದ ಕಣ್ಮರೆಯಾಗಿದೆ. ನ್ಯೂಬೌರ್​ ನೀಡಿರುವ ಮಾಹಿತಿಯ ಪ್ರಕಾರ ಕರಡಿಗೆ ಯಾವುದೇ ಹಾನಿ ಉಂಟಾಗಲಿಲ್ಲ. ಆದರೆ ಇಲ್ಲಿನ ನಿವಾಸಿಗಳು ಮಾತ್ರ 15 ನಿಮಿಷಗಳ ಕಾಲ ವಿದ್ಯುತ್​ ಸ್ಥಗಿತದ ಸಮಸ್ಯೆಯನ್ನ ಎದುರಿಸುವಂತಾಯ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...