alex Certify ಎರಡು ಬ್ಯಾಂಕ್‌ ಗಳ ಖಾಸಗೀಕರಣಕ್ಕೆ ಕೇಂದ್ರದ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಬ್ಯಾಂಕ್‌ ಗಳ ಖಾಸಗೀಕರಣಕ್ಕೆ ಕೇಂದ್ರದ ಸಿದ್ಧತೆ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಲ್ಲಿ (ಐಒಬಿ) ತನ್ನ ಪಾಲಿನ ಹೊಣೆಗಾರಿಕೆಯನ್ನು ಮಾರಾಟ ಮಾಡಲು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದ್ದು ಇನ್ನೇನು ಈ ವಿಚಾರವಾಗಿ ಅಂತಿಮ ರೂಪುರೇಷೆಗಳನ್ನು ಹೊರತರುವ ಸಾಧ್ಯತೆ ಇದೆ.

ಚಿಂತಕರ ಚಾವಡಿ ನೀತಿ ಆಯೋಗ ಖಾಸಗೀಕರಣಕ್ಕೆ ಈ ಬ್ಯಾಂಕುಗಳ ಹೆಸರನ್ನು ಸೂಚಿಸಿದೆ. ಈ ಸಂಬಂಧ ಪ್ರಸ್ತಾವನೆಯೊಂದನ್ನು ಅಂತರ್‌-ಸಚಿವಾಲಯದ ಅಧಿಕಾರಿಗಳ ಸಮೂಹವೊಂದು ಪರಿಶೀಲಿಸುತ್ತಿದ್ದು ಶೀಘ್ರವೇ ಕೇಂದ್ರ ಸಚಿವ ಸಂಪುಟದ ಅನುಮೋದನೆಯ ಮೊಹರು ಬೀಳುವ ಸಾಧ್ಯತೆ ಇದೆ.

ಇದೇ ವಿತ್ತೀಯ ವರ್ಷದಲ್ಲಿ ಐಡಿಬಿಐ ಬ್ಯಾಂಕಿನ ಮಾರಾಟವನ್ನೂ ಕೇಂದ್ರ ಸರ್ಕಾರ ಅಂತಿಮಗೊಳಿಸುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...