alex Certify ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಹಗರಣ; 34 ಸಾವಿರ ಕೋಟಿ ರೂ. ವಂಚಿಸಿದ ಧೀರಜ್ ವಾಧವನ್ ಯಾರು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಹಗರಣ; 34 ಸಾವಿರ ಕೋಟಿ ರೂ. ವಂಚಿಸಿದ ಧೀರಜ್ ವಾಧವನ್ ಯಾರು ಗೊತ್ತಾ ?

ಭಾರತದಲ್ಲಿ ಸಾಕಷ್ಟು ಕಾರ್ಪೊರೇಟ್‌ ಮತ್ತು ಬ್ಯಾಂಕಿಂಗ್ ಹಗರಣಗಳು ನಡೆದಿವೆ. PNB ಹಗರಣ, ಯೆಸ್ ಬ್ಯಾಂಕ್, ವಿಜಯ್ ಮಲ್ಯ ಹೀಗೆ ಅನೇಕ ಹಗರಣಗಳು ದೇಶವನ್ನೇ ಬೆಚ್ಚಿಬೀಳಿಸಿದ್ದವು. ಇವುಗಳಲ್ಲೊಂದು DHFL ಹಗರಣ. 34,000 ಕೋಟಿ ರೂಪಾಯಿಗಳ ಬ್ಯಾಂಕಿಂಗ್ ವಂಚನೆ ಇದು. ಡಿಎಚ್‌ಎಫ್‌ಎಲ್‌ನ ಮಾಜಿ ನಿರ್ದೇಶಕ ಧೀರಜ್ ವಾಧವನ್ ಅವರನ್ನು ಈಗಾಗ್ಲೇ ಸಿಬಿಐ ಬಂಧಿಸಿದೆ.

ಈ ಹಿಂದೆ PNB ಹಗರಣದಲ್ಲಿ ನೀರಜ್ ಮೋದಿ ದೇಶಕ್ಕೆ 14,000 ಕೋಟಿ ರೂಪಾಯಿ ವಂಚಿಸಿದ್ದಾರೆ. ಕಿಂಗ್‌ಫಿಷರ್ ಮಾಲೀಕ ವಿಜಯ್ ಮಲ್ಯ ಎಸ್‌ಬಿಐ ಸೇರಿದಂತೆ ದೇಶದ ಹಲವು ಬ್ಯಾಂಕ್‌ಗಳಿಗೆ 9900 ಕೋಟಿ ರೂಪಾಯಿ ವಂಚನೆ ಮಾಡಿದ್ದರು. ಧೀರಜ್‌ ಮತ್ತವರ ಸಹೋದರ 34,000 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ಪಡದು ವಂಚನೆ ಮಾಡಿದ್ದಾರೆ. ಇದು ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣ.

ಧೀರಜ್ ವಾಧವನ್ ಯಾರು ?

17 ಬ್ಯಾಂಕ್‌ಗಳ ಒಕ್ಕೂಟದಿಂದ 34,000 ಕೋಟಿ ರೂಪಾಯಿ ಪಡೆದು ವಂಚನೆ ಮಾಡಿರುವ ಆರೋಪ ಇವರ ಮೇಲಿದೆ. ಧೀರಜ್ ವಾಧವನ್ DHFLನ ಪ್ರವರ್ತಕರು ಮತ್ತು ನಿರ್ದೇಶಕರಾಗಿದ್ದರು. ಅವರ ಸಹೋದರ ಕಪಿಲ್ ವಾಧವನ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇಬ್ಬರೂ ಸಹೋದರರು, ಕೆಲವು ಉದ್ಯಮಿಗಳೊಂದಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ವಂಚಿಸಿದ್ದಾರೆ.

ಡಿಎಚ್‌ಎಫ್‌ಎಲ್ ಹೆಸರಿನಲ್ಲಿ ಈ ಬ್ಯಾಂಕ್‌ಗಳಿಂದ 42,871 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. DHFL ನಿಂದ 24,595 ಕೋಟಿ ರೂಪಾಯಿಗಳನ್ನು ಹಿಂತೆಗೆದುಕೊಂಡರು ಮತ್ತು ಅದನ್ನು 66 ಕಂಪನಿಗಳು ಮತ್ತು ಅವರ ಸಹವರ್ತಿಗಳಿಗೆ ವಿತರಿಸಿದರು. ನಕಲಿ ಹೆಸರಿನಲ್ಲಿ 14,000 ಕೋಟಿ ರೂಪಾಯಿಗಳ ಸುಳ್ಳು ಸಾಲವನ್ನು ವಿತರಿಸಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ, 2010 ಮತ್ತು 2018 ರ ನಡುವೆ, DHFL 42,871 ಕೋಟಿ ರೂಪಾಯಿಗಳ ಸಾಲವನ್ನು ನೀಡಿದೆ. ಈ ಪೈಕಿ 34,615 ಕೋಟಿ ರೂಪಾಯಿಯನ್ನು 2019 ರಲ್ಲಿ, ಈ ಸಾಲವನ್ನು ಎನ್‌ಪಿಎ ಎಂದು ಘೋಷಿಸಲಾಯಿತು ಮತ್ತು 2020 ರಲ್ಲಿ ಇದನ್ನು ವಂಚನೆ ಎಂದು ಘೋಷಿಸಲಾಯಿತು. ವಿಶೇಷ ಪರಿಶೀಲನಾ ಲೆಕ್ಕಪರಿಶೋಧನೆಯ ನಂತರ ಇವರಿಬ್ಬರ ವಂಚನೆಯ ರಹಸ್ಯ ಬಯಲಾಗಿದೆ.

ಹಗರಣ ಬಯಲಾದ ನಂತರ ಕಂಪನಿಯ ಷೇರುಗಳು ಕುಸಿಯಲಾರಂಭಿಸಿದವು. ಕಂಪನಿಯ ಷೇರುಗಳು ಒಂದು ದಿನದಲ್ಲಿ 60 ಪ್ರತಿಶತದಷ್ಟು ಕುಸಿದವು. 2021ರ ಜೂನ್‌ನಲ್ಲಿ DHFL ಅನ್ನು ಷೇರು ಮಾರುಕಟ್ಟೆಯಿಂದ ಪಟ್ಟಿಯಿಂದ ತೆಗೆದುಹಾಕಲಾಯಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...