alex Certify ಭಾರತೀಯ ಸೇನೆಯಿಂದ ವಿಶ್ವದ ಅತಿದೊಡ್ಡ ರಾಷ್ಟ್ರ ಧ್ವಜ ಅನಾವರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಸೇನೆಯಿಂದ ವಿಶ್ವದ ಅತಿದೊಡ್ಡ ರಾಷ್ಟ್ರ ಧ್ವಜ ಅನಾವರಣ

ಗಾಂಧಿ ಜಯಂತಿಯ ಪ್ರಯುಕ್ತ ಭಾರತೀಯ ಸೇನೆಯು ಲೇಹ್​ನ ಪರ್ವತದ ತುತ್ತ ತುದಿಯಲ್ಲಿ ಖಾದಿಯಿಂದ ಮಾಡಲಾದ ವಿಶ್ವದಲ್ಲೇ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿದೆ. ಈ ರಾಷ್ಟ್ರೀಯ ಧ್ವಜವನ್ನು ಲೆಫ್ಟಿನಂಟ್​ ಗವರ್ನರ್​ ಆರ್.ಕೆ. ಮಾಥೂರ್​ ಅನಾವರಣಗೊಳಿಸಿದರು. ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗವು ಈ ರಾಷ್ಟ್ರೀಯ ಧ್ವಜವನ್ನು ತಯಾರಿಸಿದೆ.

ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ವಿನಯ್​ ಕುಮಾರ್ ಸಕ್ಸೇನಾ ಈ ತ್ರಿವರ್ಣ ಧ್ವಜವು ವಿಶ್ವದ ಅತಿದೊಡ್ಡ ರಾಷ್ಟ್ರೀಯ ಧ್ವಜ ಎಂದು ದೃಢೀಕರಿಸಿದ್ದಾರೆ.

ರಾಷ್ಟ್ರ ಧ್ವಜವು 225 ಅಡಿ ಉದ್ದ ಹಾಗೂ 150 ಅಡಿ ಅಗಲ ಹೊಂದಿದೆ. 37,500 ಚದರ ಮೀಟರ್​ ವಿಸ್ತೀರ್ಣ ಹೊಂದಿರುವ ಈ ಧ್ವಜವು 1400 ಕೆಜಿ ತೂಕ ಹೊಂದಿದೆ. ಈ ಧ್ವಜವನ್ನು ನಿರ್ಮಾಣ ಮಾಡಲು 49 ದಿನವನ್ನು ತೆಗೆದುಕೊಳ್ಳಲಾಯ್ತು.

ಧ್ವಜವನ್ನು ಅನಾವರಣಗೊಳಿಸಿ ಮಾತನಾಡಿದ ಲೆಫ್ಟಿನಂಟ್​ ಗವರ್ನರ್​ ಆರ್​.ಕೆ. ಮಾಥುರ್​, ನಮ್ಮ ಧ್ವಜವು ಏಕತೆ, ಮಾನವೀಯತೆ ಹಾಗೂ ದೇಶದ ಪ್ರತಿಯೊಬ್ಬರಿಂದಲೂ ಸ್ವೀಕರಿಸಲ್ಪಟ್ಟ ಸಂಕೇತವಾಗಿದೆ. ಇದು ದೇಶದ ಶ್ರೇಷ್ಟತೆಯ ಸಂಕೇತವಾಗಿದೆ. ಮುಂದಿನ ವರ್ಷಗಳಲ್ಲಿ ಈ ಧ್ವಜವು ಲೇಹ್​ನಲ್ಲಿ ನಮ್ಮ ಸೈನಿಕರಿಗೆ ಉತ್ಸಾಹದ ಸಂಕೇತವಾಗಿದೆ ಎಂದು ಹೇಳಿದ್ದಾರೆ.

— ANI (@ANI) October 2, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...