alex Certify ‘supplier ಶಂಕರ’ ಚಿತ್ರದ ಮತ್ತೊಂದು ಹಾಡು ಸೆಪ್ಟೆಂಬರ್ 14 ಕ್ಕೆ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘supplier ಶಂಕರ’ ಚಿತ್ರದ ಮತ್ತೊಂದು ಹಾಡು ಸೆಪ್ಟೆಂಬರ್ 14 ಕ್ಕೆ ರಿಲೀಸ್

ರಂಜಿತ್ ಸಿಂಗ್ ನಿರ್ದೇಶನದ ಆಕ್ಷನ್ ಲವ್ ಸ್ಟೋರಿ ಕಥಾ ಹಂದರ ಹೊಂದಿರುವ supplier ಶಂಕರ ಚಿತ್ರದ ನಾಯಕಿಯ ಪಾತ್ರದ ಪರಿಚಯವನ್ನು ಇತ್ತೀಚಿಗೆ ಮಾಡಲಾಗಿತ್ತು.‌ ಇದೀಗ ಈ ಸಿನಿಮಾದ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

‘ಮಾಡೋ ಕೆಲಸವ ನೀನು ಮರೆಸಿದೆ’ ಎಂಬ ಈ ಮೆಲೋಡಿ ಹಾಡಿಗೆ ಸುನಿಲ್ ಕಶ್ಯಪ್ ಧ್ವನಿಯಾಗಿದ್ದು, ಆರ್ ಬಿ ಭರತ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇದೇ ಸೆಪ್ಟೆಂಬರ್ 14 ರಂದು ಬೆಳಿಗ್ಗೆ 11:23 ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ  ರಿಲೀಸ್ ಆಗಲಿದೆ.

ತ್ರಿನೇತ್ರ ಫಿಲಂಸ್ ಬ್ಯಾನರ್ ನಡಿ ಎಂ ಸಿ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ನಿಶ್ಚಿತ್ ಕೊರೋಡಿ ಹಾಗೂ ದೀಪಿಕಾ ಆರಾಧ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಾರ್ ಸಪ್ಲೈಯರ್ ಹಾಗೂ ಶಾಲಾ ಶಿಕ್ಷಕಿಯ ನಡುವಿನ ಪ್ರೇಮ ಕಥೆ ಇದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...