alex Certify ಹಸು, ಎಮ್ಮೆ, ಕೋಣ ಮೃತಪಟ್ಟರೆ 75 ಸಾವಿರ ರೂಪಾಯಿ; ಕುರಿ, ಮೇಕೆಗೆ 10 ಸಾವಿರ ರೂ. ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸು, ಎಮ್ಮೆ, ಕೋಣ ಮೃತಪಟ್ಟರೆ 75 ಸಾವಿರ ರೂಪಾಯಿ; ಕುರಿ, ಮೇಕೆಗೆ 10 ಸಾವಿರ ರೂ. ಪರಿಹಾರ

ಬೆಂಗಳೂರು: ಕಾಡುಪ್ರಾಣಿಯಿಂದ ಹಸು, ಎಮ್ಮೆ, ಕೋಣ ಮೃತಪಟ್ಟರೆ ಅವುಗಳ ಮಾಲೀಕರಿಗೆ ನೀಡಲಾಗುತ್ತಿದ್ದ ಪರಿಹಾರ ಹಣವನ್ನು 75 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಕುರಿ, ಮೇಕೆ ಮೃತಪಟ್ಟಲ್ಲಿ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಈ ಬಗ್ಗೆ ಮಾಹಿತಿ ನೀಡಿದ್ದು, ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಕಾಡು ಪ್ರಾಣಿಗಳಿಂದ ಜಾನುವಾರು ಮೃತಪಟ್ಟಲ್ಲಿ 10 ಸಾವಿರ ರೂಪಾಯಿ ಪರಿಹಾರ ನೀಡುತ್ತಿದ್ದು, ಅದನ್ನು 75 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಕುರಿ, ಮೇಕೆ ಮೃತಪಟ್ಟ ಸಂದರ್ಭದಲ್ಲಿ 5 ಸಾವಿರ ರೂಪಾಯಿ ಪರಿಹಾರ ನೀಡುತ್ತಿದ್ದು, ಅದನ್ನು 10 ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...