alex Certify ತಮ್ಮ ಸೂಪರ್‌ ಹಿಟ್ ಹಾಡಿಗೆ ಮೊಮ್ಮಗಳು ಶ್ರೀಲಂಕಾ ಗೀತೆ ಸೇರಿಸಿದ್ದಕ್ಕೆ ಹುಬ್ಬೇರಿಸಿದ ‘ಬಿಗ್ ಬಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಸೂಪರ್‌ ಹಿಟ್ ಹಾಡಿಗೆ ಮೊಮ್ಮಗಳು ಶ್ರೀಲಂಕಾ ಗೀತೆ ಸೇರಿಸಿದ್ದಕ್ಕೆ ಹುಬ್ಬೇರಿಸಿದ ‘ಬಿಗ್ ಬಿ’

ʼಜಹಾನ್ ತೇರಿ ಯೇ ನಜರ್ ಹೈʼ ಎಂಬ ಕಾಲಿಯಾ ಸಿನಿಮಾದ ಸೂಪರ್ ಹಿಟ್ ಹಾಡಿಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಜ್ಜೆ ಹಾಕುತ್ತಿದ್ದರೆ ಇಂದಿಗೂ ಯುವಕರ ಮನಸ್ಸು ಹುಚ್ಚೆದ್ದು ಕುಣಿಯುತ್ತದೆ. ಆದರೆ ಅಮಿತಾಭ್ ಮೊಮ್ಮಗಳು ನವ್ಯಾಗೆ ಮಾತ್ರ ಹೊಸ ಐಡಿಯಾ ಹೊಳೆದಿದೆ.

2020ರಲ್ಲಿ ಶ್ರೀಲಂಕಾದ ಸಿಂಹಳ ಭಾಷೆಯಲ್ಲಿ ಮಹಿಳಾ ರ್ಯಾಪರ್ ಯೊಹಾನಿ ಮತ್ತು ಗಾಯಕ ಸತೀಶನ್ ಹಾಡಿದ್ದ ‘ ಮನಿಕೆ ಮಗೆ ಹಿತೆ’ ಹಾಡು ಸೂಪರ್ ಹಿಟ್ ಆಗಿದೆ. ಅದರ ಹಿಂದಿ ಆವೃತ್ತಿಯನ್ನು ರ್ಯಾಪರ್ ಮುಜಿಸ್ಟಾರ್ ಬಿಡುಗಡೆ ಮಾಡಿದ್ದಾರೆ. ಅದ್ಯಾಕೊ ನವ್ಯಾಗೆ ಬಚ್ಚನ್ ಸಾಹೇಬರ ಕಾಲಿಯಾ ಡ್ಯಾನ್ಸ್ ಈ ಹಾಡಿಗೆ ಸರಿಹೊಂದುತ್ತದೆ ಎಂದೆನಿಸಿ , ಕುಳಿತುಕೊಂಡು ಆರಾಮಾಗಿ ಎಡಿಟ್ ಮಾಡಿದ್ದಾರೆ. ಅಲ್ಲದೇ, ತನ್ನ ಅಜ್ಜ ಅಮಿತಾಭ್ ಅವರಿಗೂ ಎಡಿಟ್ ಆದ ವಿಡಿಯೊ ಕಳಿಸಿದ್ದಾರೆ.

SHOCKING: ಸುಪ್ರೀಂ ಕೋರ್ಟ್​ ಆವರಣದಲ್ಲೇ ಬೆಂಕಿ ಹಚ್ಚಿಕೊಂಡ ಅತ್ಯಾಚಾರ ಸಂತ್ರಸ್ತೆ

ನೋಡಿದ ಕೂಡಲೇ ಬಿಗ್ ಬಿ ಹುಬ್ಬೇರಿಸಿದ್ದಾರೆ. ತಮ್ಮ ಡ್ಯಾನ್ಸ್ ಸ್ಟೆಪ್‍ಗಳು ಇಷ್ಟು ಚೆನ್ನಾಗಿ ಲಂಕಾದ ಹಾಡಿಗೆ ಹೊಂದಾಣಿಕೆ ಆಗುತ್ತದೆಯೇ ಎಂದು ಖುಷಿಪಟ್ಟಿದ್ದಾರೆ. ಎಡಿಟೆಡ್ ವಿಡಿಯೊವನ್ನು ತಮ್ಮ ಅಭಿಮಾನಿಗಳಿಗಾಗಿ ಇನ್‍ಸ್ಟ್ರಾಗ್ರಾಂ ಹಾಗೂ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಕೂಡ.

ಕೇಳುವುದನ್ನು ನಿಲ್ಲಿಸಲೇ ಆಗುತ್ತಿಲ್ಲ, ಸೂಪರ್ಬ್……. ಎಂದು ಹೊಗಳಿದ್ದಾರೆ ಹಿರಿಯ ನಟ ಬಚ್ಚನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...