alex Certify SHOCKING: ಸುಪ್ರೀಂ ಕೋರ್ಟ್​ ಆವರಣದಲ್ಲೇ ಬೆಂಕಿ ಹಚ್ಚಿಕೊಂಡ ಅತ್ಯಾಚಾರ ಸಂತ್ರಸ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಸುಪ್ರೀಂ ಕೋರ್ಟ್​ ಆವರಣದಲ್ಲೇ ಬೆಂಕಿ ಹಚ್ಚಿಕೊಂಡ ಅತ್ಯಾಚಾರ ಸಂತ್ರಸ್ತೆ

2019ರಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪ ಮಾಡಿದ್ದ ಮಹಿಳೆ ಹಾಗೂ ಓರ್ವ ಪುರುಷ ಸುಪ್ರೀಂ ಕೋರ್ಟ್​ ಎದುರೇ ಬೆಂಕಿ ಹಚ್ಚಿಕೊಂಡ ದಾರುಣ ಘಟನೆ ವರದಿಯಾಗಿದೆ.

ಗಾಯಾಳುಗಳನ್ನು ರಾಮ್​ಮನೋಹರ ಲೋಹಿಯಾ​ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ದೆಹಲಿ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಇವರಿಬ್ಬರು ಸೋಮವಾರ ಮಧ್ಯಾಹ್ನ12:30 ರ ಸುಮಾರಿಗೆ ಸುಪ್ರೀಂ ಕೋರ್ಟ್​ ಒಳಗೆ ಎಂಟ್ರಿ ಕೊಡಲು ಪ್ರಯತ್ನಿಸಿದ್ದರು.

ಆದರೆ ಅವರಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಕೂಡಲೇ ಮಹಿಳೆ ತನಗೆ ಹಾಗೂ ತನ್ನ ಸ್ನೇಹಿತನ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿದ್ದಾಳೆ. ಸುಪ್ರೀಂ ಕೋರ್ಟ್​ನ ಗೇಟ್​​ನ ಸಮೀಪದಲ್ಲೇ ಈ ಘಟನೆ ನಡೆದು ಹೋಗಿದೆ.

ಗಾಯಗೊಂಡಿರುವ ಮಹಿಳೆ 2019ರಲ್ಲಿ ತನ್ನ ಮೇಲೆ ಬಹುಜನ ಸಮಾಜ ಪಾರ್ಟಿಯ ಸಂಸದ ಅತುಲ್​ ರೈ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದಳು. ಸುಪ್ರೀಂ ಕೋರ್ಟ್​ನಲ್ಲಿ ಸಂಸದನ ನಿರೀಕ್ಷಣಾ ಜಾಮೀನು ತಿರಸ್ಕೃತವಾಗಿತ್ತು. ಅತುಲ್​ ರೈ ಪ್ರಸ್ತುತ ಜೈಲಿನಲ್ಲಿಯೇ ಇದ್ದಾರೆ.

ಸಂತ್ರಸ್ತೆ ಸಂಸದನ ವಿರುದ್ಧ ಕಳೆದ ವರ್ಷ ಡಿಸೆಂಬರ್​ನಲ್ಲಿ ಮತ್ತೊಂದು ದೂರನ್ನು ದಾಖಲಿಸಿದ್ದಳು. ಈ ದೂರಿನಲ್ಲಿ ಸಂಸದ ಹಾಗೂ ಆತನ ಆಪ್ತರು ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹೆಸರು ಹಾಳು ಮಾಡುತ್ತಿದ್ದಾರೆ ಹಾಗೂ ನನ್ನ ಕುಟುಂಬಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದರು.

ಕೆಲ ದಿನಗಳ ಹಿಂದಷ್ಟೇ ಸಂಸದನ ಸಹೋದರ ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್​​​ 419, 420, 467, 468, 471 ಹಾಗೂ 120 – ಬಿ ಅಡಿಯಲ್ಲಿ ದೂರನ್ನು ದಾಖಲಿಸಿದ್ದರು.

ಮಹಿಳೆ ಹಾಗೂ ಆಕೆಯ ಸ್ನೇಹಿತ ಬೆಂಕಿ ಹಚ್ಚಿಕೊಂಡ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಕೆಲ ಪೊಲೀಸ್​ ಅಧಿಕಾರಿಗಳು ಇವರನ್ನು ಬಚಾವ್​ ಮಾಡುವ ಸಲುವಾಗಿ ನೀರನ್ನು ಹಾಕುತ್ತಿರೋದನ್ನೂ ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...