alex Certify ‘ಆಯುಷ್ಮಾನ್’ ಯೋಜನೆ ಎಲ್ಲಾ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಯುಷ್ಮಾನ್’ ಯೋಜನೆ ಎಲ್ಲಾ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ: ಆಯುಷ್ಮಾನ್​ ಭಾರತ್​ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯ ಫಲಾನುಭವಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಫಲಾನುಭವಿಗಳು ಈಗ ತಮ್ಮ ಅರ್ಹತಾ ಕಾರ್ಡ್​ಗಳನ್ನ ಉಚಿತವಾಗಿ ಪಡೆಯಬಹುದಾಗಿದೆ.

ಗ್ರಾಮ ಮಟ್ಟದ ನಿರ್ವಾಹಕರಿಗೆ ಆಯುಷ್ಮಾನ್​ ಫಲಾನುಭವಿಗಳು ಪಾವತಿ ಮಾಡಬೇಕಿದ್ದ 30 ರೂಪಾಯಿ ಶುಲ್ಕವನ್ನ ಕೇಂದ್ರ ಸರ್ಕಾರ ಶುಕ್ರವಾರ ಮನ್ನಾ ಮಾಡಿದೆ. ಆದರೆ, ಡುಪ್ಲಿಕೇಟ್​ ಕಾರ್ಡ್​ ಅಥವಾ ಮರುಮುದ್ರಣಕ್ಕಾಗಿ ತೆರಿಗೆಗಳನ್ನ ಹೊರತುಪಡಿಸಿ 15 ರೂಪಾಯಿಯನ್ನ ಫಲಾನುಭವಿ ಪಾವತಿ ಮಾಡಬೇಕಾಗುತ್ತದೆ.

ಆಯುಷ್ಮಾನ್​ ಯೋಜನೆಯ ಅನುಷ್ಠಾನ ಹಾಗೂ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಸರ್ಕಾರಿ ಸಂಸ್ಥೆಯಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ ನಂತರ ಈ ವ್ಯವಸ್ಥೆಯನ್ನ ಜಾರಿಗೆ ತರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...