alex Certify ಪತಿ-ಪತ್ನಿ ನಡುವೆ ಜಗಳವಾದಾಗ ಈ 4 ಕೆಲಸಗಳನ್ನು ಮಾಡಬೇಡಿ; ಮಿತಿಮೀರಬಹುದು ಕಲಹ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ-ಪತ್ನಿ ನಡುವೆ ಜಗಳವಾದಾಗ ಈ 4 ಕೆಲಸಗಳನ್ನು ಮಾಡಬೇಡಿ; ಮಿತಿಮೀರಬಹುದು ಕಲಹ…!

ಮದುವೆಯ ನಂತರ ಪತಿ-ಪತ್ನಿ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ಜಗಳಗಳಾಗುವುದು ಸಹಜ. ಆದರೆ ಈ ಜಗಳ ಮಿತಿಮೀರಬಾರದು. ಆಗ ಮಾತ್ರ ಸಂಬಂಧವು ಜೀವನದುದ್ದಕ್ಕೂ ಚೆನ್ನಾಗಿರುತ್ತದೆ. ಸಂಗಾತಿಗಳ ಮಧ್ಯೆ ಕಲಹವಾಗದಂತೆ ಪ್ರಯತ್ನಿಸಬೇಕು. ಜಗಳಗಳಾದಾಗ ಅದನ್ನು ಮುಂದುವರಿಸದೇ ಇರಲು ಪತ್ನಿ ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಹಳೆಯ ತಪ್ಪನ್ನು ನೆನಪಿಸಬೇಡಿ

ಪತಿ-ಪತ್ನಿ ಮಧ್ಯೆ ಜಗಳವಾದಾಗ ಗಂಡನ ಹಳೆಯ ತಪ್ಪುಗಳನ್ನು ನೆನಪಿಸಬಾರದು. ಏಕೆಂದರೆ ಹಳೆಯ ವಿಚಾರಗಳನ್ನು ಕೆದಕುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ಜಗಳವು ಇನ್ನಷ್ಟು ಉಲ್ಬಣಗೊಳ್ಳಬಹುದು.

ವಿವಾದಗಳನ್ನು ಪರಿಹರಿಸುವಲ್ಲಿ ಆತುರಪಡಬೇಡಿ

ಕೆಲವೊಮ್ಮೆ ಜಗಳದ ಬಗ್ಗೆ ನಾವು ತುಂಬಾ ಗಂಭೀರವಾಗಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಅದನ್ನೆಲ್ಲ ನಿಯಂತ್ರಿಸಲು ಪ್ರಯತ್ನಿಸಬೇಡಿ. ಇದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೋಪಗೊಂಡ ಪತಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರೆ ಆತ ಮತ್ತಷ್ಟು ಸಿಟ್ಟಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಸಮಯವೇ ಇದನ್ನೆಲ್ಲ ಪರಿಹರಿಸುತ್ತದೆ. ಪರಸ್ಪರರನ್ನು ಅರ್ಥಮಾಡಿಕೊಳ್ಳುವುದರೊಂದಿಗೆ ವಿವಾದವೂ ಬಗೆಹರಿಸಯುತ್ತದೆ.

ಸಮಸ್ಯೆಯನ್ನು ಸರಿಪಡಿಸಲು ನಟಿಸಬೇಡಿ

ಗಂಡನೊಂದಿಗಿನ ವಿವಾದವನ್ನು ಪರಿಹರಿಸಲು ಬಯಸಿದರೆ ಮನದಾಳದಿಂದ ಪ್ರಯತ್ನಿಸಿ. ಎಲ್ಲವನ್ನೂ ಸರಿಪಡಿಸಲು ಬಯಸಿದಂತೆ ನಟಿಸಬೇಡಿ. ಏಕೆಂದರೆ ನಕಲಿ ಭಾವನೆಗಳನ್ನು ಮರೆಮಾಡುವುದು ಸುಲಭವಲ್ಲ. ತಪ್ಪು ನಿಮ್ಮದಾಗಿದ್ದರೆ, ಕ್ಷಮೆಯಾಚಿಸಲು ಮತ್ತು ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಹಿಂಜರಿಯಬೇಡಿ.

ಗಂಡನ ಸಂಬಂಧಿಕರ ಬಗ್ಗೆ ಕಾಮೆಂಟ್ ಮಾಡಬೇಡಿ

ಗಂಡ ಮತ್ತು ಹೆಂಡತಿ ಜಗಳವಾಡಿದಾಗ ಅವರು ಪರಸ್ಪರರ ಸಂಬಂಧಿಕರ ಮೇಲೆ ಅಶ್ಲೀಲ ಕಾಮೆಂಟ್ಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಆದರೆ ಈ ರೀತಿ ಮಾಡುವುದು ಸೂಕ್ತವಲ್ಲ. ಸಂಬಂಧಿಕರ ಮೇಲೆ ಕೆಸರೆರಚಾಟ ಮಾಡುವುದರಿಂದ ಕಲಹ ಮತ್ತಷ್ಟು ಜಾಸ್ತಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...