alex Certify ನಟಿಯ ಪ್ರಾಣ ಉಳಿಸಿದ ಏರ್‌ಬ್ಯಾಗ್….! ದೀಪ್ ಸಿಧು ಜೊತೆಗಿದ್ದ ರೀನಾ ರೈ ಬದುಕುಳಿದಿದ್ದೇ ಪವಾಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿಯ ಪ್ರಾಣ ಉಳಿಸಿದ ಏರ್‌ಬ್ಯಾಗ್….! ದೀಪ್ ಸಿಧು ಜೊತೆಗಿದ್ದ ರೀನಾ ರೈ ಬದುಕುಳಿದಿದ್ದೇ ಪವಾಡ

ಮಂಗಳವಾರ ರಾತ್ರಿ ದೆಹಲಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಂಜಾಬಿ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅವರೊಂದಿಗೆ ಅದೇ ಕಾರಿನಲ್ಲಿದ್ದ ಅವರ ಸ್ನೇಹಿತೆ ರೀನಾ ರೈ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಆ ಭೀಕರ ಅಪಘಾತದಲ್ಲೂ ರೀನಾ ರೈ ಬದುಕುಳಿದಿರುವುದು ಆಕೆಯ ಅದೃಷ್ಟ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ನಿಜಾಂಶವೇ ಬೇರೆ. ರೀನಾ ಕಾರಿನ ಎಡಭಾಗದಲ್ಲಿ ಕುಳಿತಿದ್ದರು. ಅದು ಹೆಚ್ಚು ಹಾನಿಗೆ ಒಳಗಾಗಲಿಲ್ಲ. ಅಪಘಾತದ ನಂತರ, ರೀನಾ ಅವರ ಬದಿಯಲ್ಲಿದ್ದ ಏರ್‌ಬ್ಯಾಗ್ ತಕ್ಷಣವೇ ತೆರೆದುಕೊಂಡು ಅವರ ಜೀವವನ್ನು ಉಳಿಸಿತು. ಅಷ್ಟೇ ಅಲ್ಲ ಪ್ರಯಾಣದುದ್ದಕ್ಕೂ ರೀನಾ ಸೀಟ್‌ಬೆಲ್ಟ್ ಧರಿಸಿದ್ದರು. ಜೊತೆಗೆ ಅವರ ಏರ್‌ಬ್ಯಾಗ್ ತೆರೆದ ನಂತರ ಸಿಡಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕ್ಯಾಬ್​ ಚಾಲಕನಿ​ಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ ಅರೆಸ್ಟ್​

ಆದರೆ, ದೀಪ್ ಸಿಧು ವಿಚಾರದಲ್ಲಿ ಏರ್ ಬ್ಯಾಗ್ ಓಪನ್ ಆದ ತಕ್ಷಣವೇ ಸ್ಫೋಟಗೊಂಡಿದೆ. ಅಪಘಾತದ ನಂತರ ಏರ್‌ಬ್ಯಾಗ್ ರೀನಾ ಅವರ ತಲೆ ಅಥವಾ ಎದೆಯ ಭಾಗಕ್ಕೆ ಯಾವುದೇ ತೀವ್ರವಾದ ಗಾಯಗಳಾಗದಂತೆ ತಡೆದಿದೆ. ಈ ಮೂಲಕ ರೀನಾ ಅವರ ಜೀವವನ್ನು ಉಳಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...