alex Certify ಕ್ಯಾಬ್​ ಚಾಲಕನಿ​ಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ ಅರೆಸ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಬ್​ ಚಾಲಕನಿ​ಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ ಅರೆಸ್ಟ್​

ತನ್ನನ್ನು ತಾನು ವಿದೇಶಿ ಎಂದು ಹೇಳಿಕೊಂಡ ಮಹಿಳೆಯು ಗುರುಗಾಂವ್​ನಲ್ಲಿ ಕ್ಯಾಬ್​ ಚಾಲಕನಿಗೆ ಚಾಕುವಿನಿಂದ ಇರಿದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗುರ್ಗಾಂವ್​​ನ ರಾಜೀವ್​ ಚೌಕ್​​ನಲ್ಲಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ಕೃತ್ಯ ಎಸಗಿದ ಬಳಿಕ ಬುರ್ಖಾಧಾರಿ ಮಹಿಳೆಯು ಸ್ಥಳದಿಂದ ಕಾಲ್ಕೀಳಲು ಯತ್ನಿಸಿದ್ದಾಳೆ. ಆದರೆ ಪೊಲೀಸರು ಆಕೆಯನ್ನು ಬೆನ್ನಟ್ಟಿದ್ದಾರೆ.

ಪೊಲೀಸರು ಹಿಡಿದ ಬಳಿಕ ತನ್ನನ್ನು ತಾನು ಈಜಿಪ್ಟ್​ನವಳು ಎಂದು ಹೇಳಿಕೊಂಡ ಮಹಿಳೆಯು ತನ್ನ ಮಾತೃಭಾಷೆಯಲ್ಲಿ ಕೂಗಲು ಆರಂಭಿಸಿದಳು. ಅಲ್ಲದೇ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಬುರ್ಖಾಧಾರಿ ಮಹಿಳೆಯು ಮಹಿಳಾ ಪೊಲೀಸ್​​ಗೆ ಗುದ್ದುವುದು ಹಾಗೂ ಅಮಾನುಷವಾಗಿ ವರ್ತಿಸುವುದನ್ನು ಕಾಣಬಹುದಾಗಿದೆ.

ಶಂಕಿತ ಮಹಿಳೆಯನ್ನು ಸಿವಿಲ್​ ಲೈನ್ಸ್​ ಠಾಣೆಗೆ ಕರೆದೊಯ್ಯಲಾಗಿದೆ. ಇಲ್ಲಿ ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಆದರೆ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುವವರೆಗೂ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ಈ ಮಹಿಳೆಯಿಂದ ಯಾವುದೇ ಪಾಸ್​ಪೋರ್ಟ್ ಅಥವಾ ವೀಸಾ ಲಭ್ಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಕೆಗೆ ಹಿಂದಿ ಅಥವಾ ಇಂಗ್ಲೀಷ್​ ಭಾಷೆ ಅರ್ಥವಾಗದ ಕಾರಣ ಈಕೆಯ ವಿಚಾರಣೆ ನಡೆಸಲು ಟ್ರಾನ್ಸ್​ಲೇಟರ್​ಗಾಗಿ ಹುಡುಕಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...