alex Certify 30 ವರ್ಷಗಳ ನಂತ್ರ ರಾಶಿ ಬದಲಿಸುತ್ತಿರುವ ಶನಿಯಿಂದ ಈ ರಾಶಿಗಳಿಗೆ ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30 ವರ್ಷಗಳ ನಂತ್ರ ರಾಶಿ ಬದಲಿಸುತ್ತಿರುವ ಶನಿಯಿಂದ ಈ ರಾಶಿಗಳಿಗೆ ಸಂಕಷ್ಟ

ಶನಿ, ರಾಶಿ ಬದಲಾಯಿಸಿದಾಗ ಎಲ್ಲ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಶನಿದೇವ 30 ವರ್ಷಗಳಿಗೊಮ್ಮೆ ರಾಶಿ ಬದಲಿಸುತ್ತಾನೆ. 2022 ರಲ್ಲಿ ಶನಿ ರಾಶಿ ಬದಲಾಯಿಸಿ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಶನಿಯ ಕುಂಭ ರಾಶಿ ಪ್ರವೇಶದಿಂದ ಯಾವ ಯಾವ ರಾಶಿ ಮೇಲೆ ಯಾವ ಪರಿಣಾಮವಾಗಲಿದೆ ಎಂಬ ವರದಿ ಇಲ್ಲಿದೆ.

ಕುಂಭ : ಶನಿ ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಕುಂಭ ರಾಶಿಯವರಿಗೆ ಆರೋಗ್ಯದ ಸಮಸ್ಯೆ ಉಂಟಾಗಲಿದೆ. ಹಾಗಾಗಿ ಅವರು ಆರೋಗ್ಯದ ಕಡೆ ತೀವ್ರ ಗಮನ ಕೊಡಬೇಕು. ಆರ್ಥಿಕವಾಗಿಯೂ ತೊಂದರೆಯಾಗಬಹುದು. ಖರ್ಚಿನ ಮೇಲೆ ನಿಯಂತ್ರಣವಿರಲಿ. ನೌಕರಿಯಲ್ಲಿ ಮತ್ತು ಮನೆಯಲ್ಲಿ ಹೆಚ್ಚಿನ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಕಟಕ : 2022 ರಲ್ಲಿ ಶನಿ ಕುಂಭ ರಾಶಿಗೆ ಪ್ರವೇಶ ಮಾಡಿದರೆ ಕಟಕ ರಾಶಿಯವರಿಗೂ ಒಳಿತಾಗುವುದಿಲ್ಲ. ಕಟಕ ರಾಶಿಯವರಿಗೆ ಆರ್ಥಿಕ ಕಷ್ಟಗಳು ಹೆಚ್ಚುತ್ತವೆ. ನೌಕರಿ ಮತ್ತು ವ್ಯಾಪಾರದಲ್ಲಿ ಆರ್ಥಿಕ ತೊಂದರೆಯುಂಟುಮಾಡುತ್ತದೆ. ಹಣಕಾಸಿನ ಹೂಡಿಕೆ ಬಗ್ಗೆ ಎಚ್ಚರವಿರಲಿ. ಹೊಸ ಕೆಲಸ ಆರಂಭದ ಮುನ್ನ ಅನೇಕ ಬಾರಿ ಯೋಚನೆ ಮಾಡುವುದು ಒಳ್ಳೆಯದು.

ತುಲಾ : ಶನಿಯ ರಾಶಿ ಬದಲಾವಣೆ ತುಲಾ ರಾಶಿಯವರ ಮೇಲೂ ಆಗಲಿದೆ. ತಂದೆಯ ಆಸ್ತಿಗೆ ಸಂಬಂಧಪಟ್ಟಂತೆ ಮನೆಯಲ್ಲಿ ವಿವಾದಗಳು ನಡೆಯಲಿವೆ. ವರ್ಷದ ಕೊನೆಯಲ್ಲಿ ನೌಕರಿ ಮತ್ತು ವ್ಯಾಪಾರದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ.

ವೃಶ್ಚಿಕ : ವೃಶ್ಚಿಕ ರಾಶಿಯವರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲಸದಲ್ಲಿ ಸುಲಭವಾಗಿ ಫಲ ಪ್ರಾಪ್ತಿಯಾಗುವುದಿಲ್ಲ. ಸಂಗಾತಿ ಜೊತೆ ವೈಮನಸ್ಸು ಉಂಟಾಗಲಿದೆ.

ಈ ಮೇಲಿನ ರಾಶಿಗಳಲ್ಲದೆ ವೃಷಭ, ಕನ್ಯಾ ಮತ್ತು ಸಿಂಹ ರಾಶಿಯವರಿಗೆ ಸ್ವಲ್ಪ ಪ್ರಮಾಣದಲ್ಲಿ ಶನಿಯ ಪ್ರಭಾವ ಕಾಣಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...