alex Certify 500 ಷೇರುಗಳ ಪ್ರಕರಣಕ್ಕೆ ಮೂರು ದಶಕದ ನಂತರ ಕೊನೆಗೂ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

500 ಷೇರುಗಳ ಪ್ರಕರಣಕ್ಕೆ ಮೂರು ದಶಕದ ನಂತರ ಕೊನೆಗೂ ಪರಿಹಾರ

ಕುತೂಹಲಕಾರಿ ಐನೂರು ಷೇರಿನ ಪ್ರಕರಣವೊಂದು ನ್ಯಾಯಾಲಯದಲ್ಲಿ‌ ಮೂವತ್ತು ವರ್ಷದ ಬಳಿಕ‌ ಬಗೆಹರಿದಿದ್ದು, ಸಮಸ್ಯೆಗೆ ಪರಿಹಾರ ದೊರಕಿದೆ.

ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಣೆಯಾದಂತೆ ಎಂಬ ಮಾತಿದೆ. ಈ ಮಾತಿಗೆ ಪೂರಕವಾಗಿ ಒಂದು ಪ್ರಕರಣ ಮೂವತ್ತು ವರ್ಷದ ಬಳಿಕ ಅಂತ್ಯವಾಗಿದೆ.

1991ರಲ್ಲಿ 88,350 ರೂ. ಮೌಲ್ಯದ 500 ಷೇರುಗಳು ಈಗ 3,56,500 ರೂ.ಗಳಾಗಿದೆ. ಆದರೆ ಮೂರು ದಶಕಗಳಲ್ಲಿ ಕಾನೂನು ಹೋರಾಟಕ್ಕೆ ವೆಚ್ಚ‌ಮಾಡಿದ್ದು 20 ಲಕ್ಷ ರೂ.ಗಿಂತ ಹೆಚ್ಚು ಎಂಬುದು ಗಮನಾರ್ಹ ಸಂಗತಿ. ಪ್ರಕರಣವನ್ನು 2016ರಲ್ಲಿ ಇತ್ಯರ್ಥಗೊಳಿಸಲಾಯಿತು ಮತ್ತು ವಿವಾದವನ್ನು ನ್ಯಾಯಾಲಯದ ಹೊರಗೆ ಪರಿಹರಿಸಲಾಗಿತ್ತು. ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪದ ಕಳಂಕದಿಂದ ಮುಕ್ತಮಾಡುವ ಪ್ರಕ್ರಿಯೆ ಕಳೆದ ವಾರದವರೆಗೂ ಮುಂದುವರೆದಿತ್ತು.

ಒಟ್ಟಾರೆ 1991 ರಲ್ಲಿ ಅಂಧೇರಿಯ ಒಂದು‌ ಕುಟುಂಬದ ವಿರುದ್ಧ ಆಗಿದ್ದ ಎಫ್‌ಐಆರ್‌ನಿಂದ ಬಿಡುಗಡೆ ಹೊಂದಲು 31 ವರ್ಷಗಳ ಕಾಲ ತೆಗೆದುಕೊಂಡಿತು.‌

WATCH: ರೋಚಕ‌ ಐಪಿಎಲ್ ಪಂದ್ಯದ ವೇಳೆ ಸಿಟ್ಟಿಗೆದ್ದ ಮುತ್ತಯ್ಯ ಮುರಳೀಧರನ್ ಬಾಯಲ್ಲಿ ಅಶ್ಲೀಲ ಬೈಗುಳ

ಶೇರ್ ಬ್ರೋಕರ್ ಮತ್ತು ಅವರ ಚಾರ್ಟರ್ಡ್ ಅಕೌಂಟೆಂಟ್ ಸಹೋದರ ಮತ್ತು ವೈದ್ಯ ಸಹೋದರಿ, ಜೊತೆಗೆ ವೃದ್ಧ ತಾಯಿ ವಿರುದ್ಧ ಷೇರುಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊರಿಸಲಾಗಿತ್ತು.

ಶೇರ್ ಬ್ರೋಕರ್ 500 ಷೇರುಗಳನ್ನು ವರ್ಗಾಯಿಸುವುದಾಗಿ ಭರವಸೆ ನೀಡಿದ್ದು, 50ನ್ನು ಮಾತ್ರ ನೀಡಿದರು ಮತ್ತು ಉಳಿದವನ್ನು ಅವರ ಕುಟುಂಬ ಸದಸ್ಯರಿಗೆ ಹಂಚಿದರು ಎಂಬುದು ಪ್ರದೀಪ್ ಮತ್ತು ದಿಲೀಪ್ ಕಪಾನಿ ಎಂಬುವರ ಆರೋಪವಾಗಿತ್ತು.

1991ರಲ್ಲಿ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ನಂತರ, ಷೇರು ಬ್ರೋಕರ್ ಭಾರತ್ ಫೋರ್ಜ್ ಲಿಮಿಟೆಡ್‌ನ 450 ಷೇರು ಮತ್ತು ಜಿಆರ್ ಮ್ಯಾಗ್ನೇಟ್ಸ್ ಲಿಮಿಟೆಡ್‌ನ 100 ಷೇರನ್ನು ಪೊಲೀಸ್ ಠಾಣೆಯಲ್ಲಿ ಡಿಪಾಸಿಟ್ ಮಾಡಿದ್ದರು.

ಕಿತ್ತಾಟ ಮುಂದುವರಿದು ದಿಲೀಪ್ ಕಪಾನಿ ಕ್ರಿಮಿನಲ್ ಪ್ರಕರಣವನ್ನು ಹೊಸದಾಗಿ ದಾಖಲಿಸಿದ್ದರು. ಆದರೆ ಕುಟುಂಬದ ವಿರುದ್ಧದ ಆರೋಪಗಳು ನಿರಾಧಾರ ಎಂದು ನ್ಯಾಯಾಲಯ ಗಮನಿಸಿದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...