alex Certify WATCH: ರೋಚಕ‌ ಐಪಿಎಲ್ ಪಂದ್ಯದ ವೇಳೆ ಸಿಟ್ಟಿಗೆದ್ದ ಮುತ್ತಯ್ಯ ಮುರಳೀಧರನ್ ಬಾಯಲ್ಲಿ ಅಶ್ಲೀಲ ಬೈಗುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ರೋಚಕ‌ ಐಪಿಎಲ್ ಪಂದ್ಯದ ವೇಳೆ ಸಿಟ್ಟಿಗೆದ್ದ ಮುತ್ತಯ್ಯ ಮುರಳೀಧರನ್ ಬಾಯಲ್ಲಿ ಅಶ್ಲೀಲ ಬೈಗುಳ

ಈಗ ಎಲ್ಲೆಲ್ಲೂ ಐಪಿಎಲ್ ಹಂಗಾಮ. ಬುಧವಾರ ರಾತ್ರಿ ಗುಜರಾತ್ ಟೈಟಾನ್ಸ್ ಹಾಗೂ ಸನ್‌ ರೈಸರ್ಸ್ ಹೈದ್ರಾಬಾದ್ ತಂಡಗಳ‌‌ ನಡುವೆ ರೋಚಕ ಹಣಾಹಣಿ ನಡೆಯಿತು. ಈ ವೇಳೆ ಸನ್ ರೈಸರ್ ಹೈದ್ರಾಬಾದ್‌ನ ಬೌಲಿಂಗ್ ಕೋಚ್ ತಾಳ್ಮೆ ಕಳೆದುಕೊಂಡು ಬೌಲರ್‌ಗೆ ವಾಚಾಮಗೋಚರ ನಿಂದಿಸಿದ ಕ್ಷಣದ ವಿಡಿಯೋ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಅಸಂಭವ ಎನಿಸುವ ಗುರಿಯನ್ನು ತಲುಪಿದ ಗುಜರಾತ್ 5 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಒಂದು ಹಂತದಲ್ಲಿ ಅರ್ಧದಷ್ಟು ವಿಕೆಟ್ ಕಳೆದುಕೊಂಡು ಪ್ರಮುಖ ಬ್ಯಾಟ್ಸ್‌ಮನ್ ಪೆವಿಲಿಯನ್‌ ಸೇರಿದ್ದರು.

ನಿರ್ಣಯಕ ಕೊನೆಯ ಓವರ್ ಎಸೆಯಲು ಅವಕಾಶ ಪಡೆದ ಸೌತ್ ಆಫ್ರಿಕ ಬೌಲರ್ ಮಾರ್ಕೊ ಜಾನ್ಸನ್ ರನ್ ಬಿಟ್ಟುಕೊಡುತ್ತಿರುವುದನ್ನು ಕಂಡು ತಾಳ್ಮೆ ಕಳೆದುಕೊಂಡ ಮುರಳೀಧರನ್, “ವೈ ದಿ f******” ಆ ರೀತಿ ಬಾಲ್ ಹಾಕುತ್ತಿದ್ದಾರೆಂದು ಡಗ್ಗೌಟ್‌ನಲ್ಲಿ ಕಿರುಚಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ವಿಡಿಯೋ‌ ಕ್ಲಿಪ್ ವೈರಲ್ ಆಗಿದೆ.

ಕೊನೆಯ ಓವರ್‌ನಲ್ಲಿ ಗುಜರಾತ್‌ಗೆ ಗೆಲುವಿನ ಗೆರೆ ತಲುಪಲು 22 ರನ್ ಗುರಿ ಇತ್ತು.‌ ಈ ವೇಳೆ ಬಾಲ್ ಎಸೆಯಲು ಅವಕಾಶ ಪಡೆದ ಮಾರ್ಕೊ ಜಾನ್ಸನ್ ಒಂದಾದ ಮೇಲೊಂದು ಸಿಕ್ಸ್ ಬಿಟ್ಟುಕೊಡುತ್ತಿದ್ದಂತೆ ಮುರಳೀಧರನ್ ತಾಳ್ಮೆ ಕಳೆದುಕೊಂಡಿದ್ದರು.

ಅಂತಿಮವಾಗಿ ರಶೀದ್ ಖಾನ್ ಹಾಗೂ ರಾಹುಲ್ ತೆವಾಟಿ ಗುಜರಾತ್ ತಂಡವನ್ನು ವಿಜಯದ ದಡ ಮುಟ್ಟಿಸಿದರು. ಕೊನೆಯ ಎಸೆತದಲ್ಲಿ ಮೂರು ರನ್ ಅವಶ್ಯಕತೆ ಇತ್ತು, ರಶೀದ್ ಖಾನ್ ಸಿಕ್ಸರ್ ಸಿಡಿಸಿ ಅಚ್ಚರಿ‌ ಮೂಡಿಸಿದರು.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮುರಳೀಧರನ್ ಬೈಗುಳ‌, ಅತೃಪ್ತಿಯ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...