alex Certify ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಗು ಸ್ಮಶಾನದಲ್ಲಿ ಬಾಯಿಗೆ ನೀರು ಬಿಟ್ಟಾಗ ಜೀವಂತ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಗು ಸ್ಮಶಾನದಲ್ಲಿ ಬಾಯಿಗೆ ನೀರು ಬಿಟ್ಟಾಗ ಜೀವಂತ!

ಹುಬ್ಬಳ್ಳಿ : ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ ಹಿನ್ನೆಲೆಯಲ್ಲಿ ಮಗುವನ್ನು ಹೂಳಲು ಸ್ಮಶಾನಕ್ಕೆ ತೆಗೆದುಕೊಂಡು ಹೋದ ವೇಳೆ ಮಗು ಜೀವಂತವಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.  

ನವಲಗುಂದ ತಾಲೂಕಿನ ಬಸಾಪೂರ ಗ್ರಾಮದ ಆಕಾಶ ಬಸವರಾಜ ಪೂಜಾರ ಎಂಬ ಮಗು ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಮಗುವಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಮಗು ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದರು. ಹೀಗಾಗಿ ಮಗುವನ್ನು ಹೂಳಲು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಗಿತ್ತು.

ಮಗುವನ್ನು ಸ್ಮಶಾನದಲ್ಲಿ ಹೂಳುವ ಸಂದರ್ಭದಲ್ಲಿಸಂಪ್ರದಾಯದಂತೆ ಬಾಯಿಗೆ ನೀರು ಬಿಡುತ್ತಿರುವಾಗ ಮಗು ಕೈಕಾಲು ಆಡಿಸಿತು. ಆಗ ಜೀವಂತವಾಗಿದೆ ಎಂದು ತಿಳಿದು ನವಲಗುಂದ ಆಸ್ಪತ್ರೆಗೆ ಕರೆ ತಂದಾಗ ಮಗುವಿನ ಹೃದಯ ಸ್ತಂಬನ ಸರಿಯಾಗಿದ್ದು, ಮಗು ಜೀವಂತವಾಗಿದೆ ಎಂದು ನವಲಗುಂದ ಸರಕಾರಿ ವೈದ್ಯರು ತಿಳಿಸಿದ್ದಾರೆ. ಕೂಡಲೇ ಮಗುವನ್ನು ಧಾರವಾಡ ಸಿವಿಲ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...