alex Certify ಶಾರ್ಕ್‌ ದಾಳಿಯಿಂದ ಮೃತಪಟ್ಟವನ ಅಸ್ಥಿ ಪಂಜರ 3000 ವರ್ಷಗಳ ಬಳಿಕ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರ್ಕ್‌ ದಾಳಿಯಿಂದ ಮೃತಪಟ್ಟವನ ಅಸ್ಥಿ ಪಂಜರ 3000 ವರ್ಷಗಳ ಬಳಿಕ ಪತ್ತೆ

ಮೂರು ಸಾವಿರ ವರ್ಷಗಳಷ್ಟು ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬನ ಅಸ್ಥಿಪಂಜರ ಸಿಕ್ಕಿದ್ದು, ಶಾರ್ಕ್ ದಾಳಿಯಿಂದ ಮೃತಪಟ್ಟ ಘಟನೆಯೊಂದು ದಾಖಲಾದ ಮೊದಲ ನಿದರ್ಶನ ಇದಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಜಪಾನ್‌ನ ಒಕಾಯಾಮಾ ಪ್ರಿಫೆಕ್ಚರ್‌‌ನ ಸುಕೋಮೋ ಪ್ರಾಚ್ಯವಸ್ತು ಸ್ಮಾರಕದ ಬಳಿ ಇರುವ ಸ್ಮಶಾನದಲ್ಲಿ ಸಿಕ್ಕ ಈ ಅಸ್ಥಿಪಂಜರದ ಮೇಲೆ ಸುಮಾರು 800ರಷ್ಟು ಗಾಯದ ಗುರುತುಗಳಿವೆ.

ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಐಎಂಎಫ್ ಕಳವಳ

’ಜರ್ನಲ್ ಆಫ್ ಆರ್ಕಿಯಾಲಾಜಿಕಲ್ ಸೈನ್ಸ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಅಧ್ಯಯನ ವರದಿಯಲ್ಲಿ, ಕ್ರಿ.ಪೂ 1370-1010ರ ನಡುವೆ ಬದುಕಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬರ ಅಸ್ಥಿ ಪಂಜರ ಇದಾಗಿದೆ ಎನ್ನಲಾಗಿದ್ದು, ಈತನ ಅಸ್ಥಿಪಂಜರದಲ್ಲಿ ಕಂಡುಬಂದಿರುವ ಗಾಯಗಳು ಶಾರ್ಕ್‌ ದಾಳಿಯಿಂದ ಆಗಿರುವಂತವೆಂದು ತೋರುತ್ತಿವೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...