alex Certify 90 ವರ್ಷದ ವೃದ್ದ ಪಬ್‌ನಲ್ಲಿ ಬೇಕಾದ್ದನ್ನು ತರಿಸಿಕೊಂಡು ತಿನ್ನಲು ದುಡ್ಡು ಕಳುಹಿಸಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90 ವರ್ಷದ ವೃದ್ದ ಪಬ್‌ನಲ್ಲಿ ಬೇಕಾದ್ದನ್ನು ತರಿಸಿಕೊಂಡು ತಿನ್ನಲು ದುಡ್ಡು ಕಳುಹಿಸಿದ ನೆಟ್ಟಿಗರು

ತಮ್ಮ ಮೊದಲ ಹೆಸರು ಪೇಟೆ ಅಂತಲೇ ಪರಿಚಿತರಾದ 90 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಜೀವನ ಸಾಗಿಸುತ್ತಾ, ಚೆಲ್ಮ್ಸ್‌ಫೋರ್ಡ್‌ನ ಪಬ್‌ ಒಂದಕ್ಕೆ ಭೇಟಿ ಕೊಟ್ಟು ಪ್ರತಿದಿನ ಹಂಟರ್ಸ್ ಚಿಕನ್ ಹಾಗೂ ಬಿಯರ್‌ ಸೇವಿಸುತ್ತಿರುವ ಸುದ್ದಿ ತಿಳಿದ ಅಪರಿಚಿತ ಮಂದಿ, ಬೇರೆ ಐಟಮ್‌ಗಳನ್ನೂ ತೆಗೆದುಕೊಳ್ಳಲೆಂದು 700 ಪೌಂಡ್‌ಗಳನ್ನು ಕಳುಹಿಸಿದ್ದಾರೆ.

ಪಬ್ ಮಾಲೀಕ ಟಿಮ್ ಮೆಫಾಮ್‌ ಅವರು ಪೇಟೆ ತಮ್ಮ ಪಬ್‌ಗೆ ಭೇಟಿ ಕೊಡುವ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಿದ ಬಳಿಕ ಸಾವಿರಾರು ವೀಕ್ಷಕರು ಅವರ ಪಾಡನ್ನ ಕಂಡು 700 ಪೌಂಡ್‌ (72,000 ರೂ.ಗಳು) ಲಭ್ಯವಾಗುವಂತೆ ಮಾಡಿದ್ದಾರೆ.

ಆಧಾರ್ ಕಾರ್ಡ್ –ಮತದಾರರ ಪಟ್ಟಿ ಜೋಡಣೆ, ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

ಪೇಟೆ ಕೂರುವ ಟೇಬಲ್‌ನ ಸಂಖ್ಯೆನ್ನು ಪೋಸ್ಟ್ ಮಾಡಿದ ಟಿಮ್, ಆ ಹಿರಿಯ ಜೀವಕ್ಕಾಗಿ ನೂರಾರು ಪೌಂಡ್‌ಗಳು ಹರಿದುಬರುವಂತೆ ಮಾಡಿದ್ದಾರೆ. ಸದ್ಯ ಪೆಟೆಗೆ ಬಾರ್‌ ಟ್ಯಾಬ್‌ ಒಂದನ್ನು ತೆರೆದಿದ್ದು, ಅದಕ್ಕೆ ಇಷ್ಟೆಲ್ಲಾ ದುಡ್ಡು ಹರಿದುಬಂದಿದೆ.

ಕೋವಿಡ್‌ ಲಸಿಕೆ ಬ್ಯಾಡ್ಜ್‌ ಹಾಕಿಕೊಂಡು ಡೇಟಿಂಗ್ ಸಂಗಾತಿ ಹುಡುಕಲಿರುವ ಬ್ರಿಟನ್ ಮಂದಿ

“ಪೆಟೆ ನಿಜಕ್ಕೂ ನಾನು ಕಂಡ ಒಬ್ಬ ಸಭ್ಯ ವ್ಯಕ್ತಿ. ನಾವು ಅವರಿಗೆ ಏನು ಮಾಡಿದ್ದೇವೋ ಅದಕ್ಕೆ ಅವರು ಬಹಳ ಧನ್ಯರಾಗಿದ್ದಾರೆ. ಅವರು ನಮ್ಮೊಂದಿಗೆ ಕಳೆಯುವ ಸಂದರ್ಭದಲ್ಲಿ ಅವರ ಹಾಸ್ಯಪ್ರಜ್ಞೆ ಬಹಳ ಮನಮುಟ್ಟುವಂತಿದೆ. ಪೆಟೆಗೆ ಜನರು ಪಾನೀಯಗಳನ್ನು ಖರೀದಿಸಿಕೊಟ್ಟಿದ್ದು ಆತ ಬಡವ ಎಂದಲ್ಲ, ಬದಲಾಗಿ ಆತನ ಒಳ್ಳೆಯ ಸ್ವಭಾವದಿಂದ ಜನರು ಆತನನ್ನು ಮೆಚ್ಚಿಕೊಂಡಿದ್ದಾರೆ” ಎಂದು ಟಿಮ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...