alex Certify ಒಂದು ವರ್ಷ ಜೈಲುಶಿಕ್ಷೆ ಅನುಭವಿಸಿ ಬಿಡುಗಡೆಯಾದ 9 ಮೇಕೆಗಳು; ಅಷ್ಟಕ್ಕೂ ಮೇಕೆಗಳು ಮಾಡಿದ ತಪ್ಪೇನು? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ವರ್ಷ ಜೈಲುಶಿಕ್ಷೆ ಅನುಭವಿಸಿ ಬಿಡುಗಡೆಯಾದ 9 ಮೇಕೆಗಳು; ಅಷ್ಟಕ್ಕೂ ಮೇಕೆಗಳು ಮಾಡಿದ ತಪ್ಪೇನು?

ಇದೆಂತಹ ವಿಚಿತ್ರ ಪ್ರಕರಣ ನೋಡಿ. ಒಂದು ವರ್ಷದ ಹಿಂದೆ ಜೈಲು ಸೇರಿದ್ದ 9 ಮೇಕೆಗಳು ಜೈಲಿನಿಂದ ಬಿಡುಗಡೆಯಾಗಿರುವ ಘಟನೆ ನಡೆದಿದೆ. ಪ್ರಾಣಿಗಳಿಗೆ ಜೈಲುಶಿಕ್ಷೆಯೇ? ಎಂದು ಅಚ್ಚರಿ ಎನಿಸಿದರೂ ಬಾಂಗ್ಲಾದೇಶದಲ್ಲಿ ಇಂತದ್ದೊಂದು ಪ್ರಕರಣ ನಡೆದಿದೆ.

ಸ್ಮಶಾನವೊಂದರಲ್ಲಿ ಮೇಯಲು ಹೋಗಿದ್ದ ತಪ್ಪಿಗೆ 9 ಮೇಕೆಗಳಿಗೆ ಒಂದು ವರ್ಷ ಶಿಕ್ಷೆ ವಿಧಿಸಲಾಗಿತ್ತು. 2022ರ ಡಿಸೆಂಬರ್ ನಲ್ಲಿ ಜೈಲು ಸೇರಿದ್ದ ಮೇಕೆಗಳಿಗೆ ಈಗ ಬಿಡುಗಡೆ ಭಾಗ್ಯ ಸಿಕ್ಕಿದೆ.

ಬಾಂಗ್ಲಾದೇಶದ ಬಾರಿಸಾಲ್ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, 9 ಮೇಕೆಗಳು ಸ್ಥಳೀಯ ಸ್ಮಶಾನವನ್ನು ಹೊಕ್ಕು ಅಲ್ಲಿದ್ದ ಹುಲ್ಲುಗಳನ್ನು ತಿಂದಿವೆ. ಈ ಹಿನ್ನೆಲೆಯಲ್ಲಿ ಮೇಕೆಗಳನ್ನು ಬಂಧಿಸಿ ಜೈಲುಗಟ್ಟಲಾಗಿತ್ತು.

ಈಗ ಮೇಕೆಗಳ ಮಾಲೀಕ ಶಹರಿಯಾರ್ ಸಚಿವ್ ರಾಜೀಬ್, ಹೊಸದಾಗಿ ಚುನಾಯಿತಗೊಂಡಿರುವ ಸಿಟಿ ಕಾರ್ಪೊರೇಷನ್ ಮೇಯರ್ ಅಬುರ್ ಖೈರ್ ಅಬ್ದುಲ್ಲಾ ಅವರಿಗೆ ಮನವಿ ಸಲ್ಲಿಸಿ 9 ಮೇಕೆಗಳನ್ನು ಬಿಡುಗಡೆ ಮಾಡುವಂತೆ ಕೋರಿದ್ದರು. ಮನವಿಗೆ ಸ್ಪಂದಿಸಿ 9 ಮೇಕೆಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಈ ಹಿಂದೆ ಉತ್ತರ ಪ್ರದೇಶದಲ್ಲಿಯೂ ಇಂತದ್ದೇ ಘಟನೆ ನಡೆದಿತ್ತು. ಜಲೌನ್ ಜಿಲ್ಲೆಯ ಉರೈ ಜೈಲಿನ ಹೊರಗೆ 5 ಲಕ್ಷ ಮೌಲ್ಯದ ಸಸ್ಯಗಳನ್ನು ತಿಂದಿದ್ದಕ್ಕೆ ಕತ್ತೆಗಳನ್ನು ಜೈಲಿಗೆ ಹಾಕಲಾಗಿತ್ತು. 4 ದಿನಗಳ ಬಳಿಕ ಕತ್ತೆಗಳನ್ನು ಬಿಡುಗಡೆ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...