alex Certify ಮರವೇರಿ ಸೊಪ್ಪು ಕಡಿಯುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರವೇರಿ ಸೊಪ್ಪು ಕಡಿಯುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ಚಿಕ್ಕಬಳ್ಳಾಪುರ: ಮೇಕೆಗಳಿಗೆ ಮರವೇರಿ ಸೊಪ್ಪು ಕಡಿಯುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ದಿಬ್ಬೂರುಹಳ್ಳಿ ಮೂಲದ ದೇವಪ್ಪ(12) ಮೃತಪಟ್ಟ ಬಾಲಕ. ಬರದಿಂದಾಗಿ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಇದರಿಂದಾಗಿ ಜಾನುವಾರುಗಳ ಮಾಲೀಕರು ಪರದಾಡುವಂತಾಗಿದೆ. ರಸ್ತೆ ಬದಿಗಳ ಮರಗಳಲ್ಲಿನ ಸೊಪ್ಪು ಕಡಿದು ಜಾನುವಾರುಗಳಿಗೆ ಹಾಕಲಾಗುತ್ತದೆ. ಇದೇ ರೀತಿ ಮೇಕೆಗಾಗಿ ದೇವಪ್ಪ ಅಚೇಪಲ್ಲಿ ಗ್ರಾಮದ ರಸ್ತೆ ಬಳಿಯ ಆಲದ ಮರವೇರಿ ಸೊಪ್ಪಿನ ರೆಂಬೆ ಕಡಿಯುವಾಗ ಮರದಡಿ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಬಾಗೇಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...