alex Certify 9/11 ದಾಳಿಗೆ 22 ವರ್ಷ: ಎರಡು ದಶಕಗಳ ನಂತರ ಮೃತರಿಬ್ಬರ ಗುರುತು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9/11 ದಾಳಿಗೆ 22 ವರ್ಷ: ಎರಡು ದಶಕಗಳ ನಂತರ ಮೃತರಿಬ್ಬರ ಗುರುತು ಪತ್ತೆ

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ 9/11 ದಾಳಿಗೆ ಇಂದಿಗೆ 22 ವರ್ಷ ಸಂದಿದೆ. ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಸೆಪ್ಟೆಂಬರ್ 11 ರಂದು ನಡೆದ ದಾಳಿಯು ಸುಮಾರು 3,000 ಜನರನ್ನು ಬಲಿ ತೆಗೆದುಕೊಂಡಿತು. ಎರಡು ದಶಕಗಳ ನಂತರ, ದುರಂತದಲ್ಲಿ ಮೃತಪಟ್ಟ ಇಬ್ಬರ ಅವಶೇಷಗಳನ್ನು ಗುರುತಿಸಲಾಗಿದೆ.

ವರದಿಯ ಪ್ರಕಾರ, ಇಬ್ಬರು ಬಲಿಪಶುಗಳ ಗುರುತನ್ನು ಒಬ್ಬ ಪುರುಷ ಮತ್ತು ಮಹಿಳೆ ಎಂದು ಹೇಳಲಾಗಿದೆ. ಆದರೆ, ಅವರ ಕುಟುಂಬಗಳ ಕೋರಿಕೆಯ ಮೇರೆಗೆ ಹೆಸರನ್ನು ತಡೆಹಿಡಿಯಲಾಗಿದೆ. ಇದರೊಂದಿಗೆ, ಗುರುತಿಸಬೇಕಾದ 9/11 ಸಂತ್ರಸ್ತರ ಸಂಖ್ಯೆ 1,649 ಕ್ಕೆ ತಲುಪಿದೆ.

ಅಲ್-ಖೈದಾ ಭಯೋತ್ಪಾದಕರು ಹೈಜಾಕ್ ಮಾಡಿದ ಎರಡು ನಾಗರಿಕ ಪ್ರಯಾಣಿಕ ವಿಮಾನಗಳನ್ನು ನ್ಯೂಯಾರ್ಕ್‌ನ ಅವಳಿ ಗೋಪುರಗಳಿಗೆ ಅಪ್ಪಳಿಸಿದ್ದರು. ಈ ದುರಂತದಲ್ಲಿ ಒಟ್ಟು 2,977 ಮಂದಿ ಪ್ರಾಣ ಕಳೆದುಕೊಂಡ್ರು.

ದುರಂತದಲ್ಲಿ ಹಲವರ ಗುರುತು ಪತ್ತೆಯಾಗಿಲ್ಲ. 22 ವರ್ಷದ ಬಳಿಕ ಇದೀಗ ಇಬ್ಬರ ಗುರುತು ಪತ್ತೆಯಾಗಿದೆ. ಈ ಹೊಸ ಗುರುತಿಸುವಿಕೆ, ಈ ಸಂತ್ರಸ್ತರ ಕುಟುಂಬಗಳಿಗೆ ಸ್ವಲ್ಪ ಮಟ್ಟಿಗೆ ಸೌಕರ್ಯವನ್ನು ತರಬಹುದು ಎಂದು ನಾವು ಭಾವಿಸುತ್ತೇವೆ ಎಂದು ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವಶೇಷಗಳನ್ನು ಹೇಗೆ ಗುರುತಿಸಲಾಯಿತು ?

ಸುದ್ದಿ ಸಂಸ್ಥೆಯೊಂದರ ವರದಿಯ ಪ್ರಕಾರ, ಸೀಕ್ವೆನ್ಸಿಂಗ್ ತಂತ್ರಜ್ಞಾನದ ಬಳಕೆಯ ಮೂಲಕ ಇಬ್ಬರು ಬಲಿಪಶುಗಳನ್ನು ಗುರುತಿಸಲಾಗಿದೆ. ಇದು ಸಾಂಪ್ರದಾಯಿಕ ಡಿಎನ್ಎ ತಂತ್ರಗಳಿಗಿಂತ ಹೆಚ್ಚು ಸೂಕ್ಷ್ಮ ಮತ್ತು ತ್ವರಿತವಾಗಿರುವುದಾಗಿದೆ. ಅವರ ಅವಶೇಷಗಳನ್ನು ವರ್ಷಗಳ ಹಿಂದೆ ಸಂಗ್ರಹಿಸಲಾಗಿದೆ.

ಇದಕ್ಕೂ ಮೊದಲು, ಕಳೆದ ಎರಡು 9/11 ದಾಳಿಯ ಬಲಿಪಶುಗಳ ಗುರುತುಗಳನ್ನು ಸುಮಾರು ಎರಡು ವರ್ಷಗಳ ಹಿಂದೆ, 2021 ರಲ್ಲಿ ಮಾಡಲಾಯಿತು. ಇಲ್ಲಿಯವರೆಗೆ ದುರಂತದಲ್ಲಿ ಬಲಿಯಾದ ಸುಮಾರು 1,104 ಮಂದಿಯ ಗುರುತು ಇನ್ನೂ ಕೂಡ ಪತ್ತೆಯಾಗಿಲ್ಲ.

ಅವಶೇಷಗಳ ಗುರುತಿಸುವಿಕೆ ಏಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ?

2001ರ ದುರಂತವು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿತು. ಕಿವುಡಗೊಳಿಸುವ ಘರ್ಜನೆಯೊಂದಿಗೆ ವರ್ಲ್ಡ್ ಟ್ರೇಡ್ ಸೆಂಟರ್ ನ ಎರಡು ಗೋಪುರಗಳು ಕುಸಿದು ಬಿದ್ದವು. ಕಟ್ಟಡದ ಒಳಗಿದ್ದವರು ಏನಾಯ್ತು ಎಂದು ಅಂದುಕೊಳ್ಳುವಷ್ಟರಲ್ಲಿ ದುರಂತವಾಗಿ ಬಲಿಯಾದ್ರು.

ಈ ಭೀಕರ ದುರಂತದ ಪ್ರಮಾಣವು ಎಷ್ಟು ತೀವ್ರವಾಗಿತ್ತು ಎಂದರೆ 22 ವರ್ಷಗಳ ನಂತರವೂ ನಾಪತ್ತೆಯಾದ ನೂರಾರು ಮಂದಿ ಇನ್ನೂ ಗುರುತಿಸಬಹುದಾದ ಕುರುಹುಗಳನ್ನು ಸಹ ಹೊಂದಿಲ್ಲ. ಪ್ರತಿ ವರ್ಷ, ಸೆಪ್ಟೆಂಬರ್ 11 ರಂದು ನ್ಯೂಯಾರ್ಕ್ನಲ್ಲಿ ಈ ಭೀಕರ ದುರಂತವನ್ನು ಸ್ಮರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...