alex Certify ಐದು ವರ್ಷದ ಪೋರಿಯ ಪೇಟಿಂಗ್‌ ಜಾಣ್ಮೆಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದು ವರ್ಷದ ಪೋರಿಯ ಪೇಟಿಂಗ್‌ ಜಾಣ್ಮೆಗೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಷಯಗಳು ಸುಖಾಸುಮ್ಮನೆ ಪ್ರಚಾರ ಗಿಟ್ಟಿಸಿಕೊಂಡು ಬಿಡುತ್ತವೆ. ದಂಪತಿಗಳ ಮುನಿಸು, ರಾಜಕಾರಣಿಗಳ ರಂಪಾಟ, ಕಿರುಚಾಟ, ಕೆಸರೆರಚಾಟ, ಪ್ರಾಣಿಗಳ ತಲೆಹರಟೆಯ ವಿಡಿಯೊಗಳಿಗೆ ಲಕ್ಷಾಂತರ ಮಂದಿ ವೀಕ್ಷಕರು ಮುಗಿಬಿದ್ದು ವೈರಲ್‌ ಆಗಿಸಿಬಿಡುತ್ತಾರೆ. ಆದರೆ, ಈ ಬಾರಿ ಟ್ವಿಟರ್‌ನಲ್ಲಿ ಐದು ವರ್ಷದ ಬಾಲಕಿಯ ಪೇಟಿಂಗ್‌ ಕೌಶಲದ ಅಪರೂಪದ ವಿಡಿಯೊ ವೈರಲ್‌ ಆಗಿದೆ.

ಸರಿಯಾಗಿ ಅಕ್ಷರಮಾಲೆಯನ್ನೇ ಬರೆಯಲು ಮಕ್ಕಳು ತಿಣುಕಾಡುವ ವಯಸ್ಸಿನಲ್ಲಿ ಈ ಬಾಲಕಿಯು ಬಣ್ಣಗಳನ್ನು ಬಹಳ ಸಮತೋಲಿತವಾಗಿ ಬಿಳಿ ಹಾಳೆಯ ಮೇಲೆ ಬಳಸುವುದು. ಆಕರ್ಷಕ ಬಣ್ಣಗಳ ಮಿಶ್ರಣದಿಂದ ಗೂಡಾರ್ಥವುಳ್ಳ ವರ್ಣಚಿತ್ರಗಳನ್ನು ರಚಿಸುವುದು ಯಾವುದೇ ದೊಡ್ಡ ಕ್ರಿಯಾಶೀಲ, ಮಾಡರ್ನ್‌ ಪೇಟಿಂಗ್‌ ಆರ್ಟಿಸ್ಟ್‌ಗೂ ಕಡಿಮೆ ಇಲ್ಲ ಎಂದು ನಿಮಗೆ ಟ್ವಿಟರ್‌ನಲ್ಲಿನ ವಿಡಿಯೊ ನೋಡಿದ ಮೇಲೆ ಅನಿಸುತ್ತದೆ.

ದಾರಿ ತಪ್ಪಿದರೂ ರಕ್ಷಣಾ ತಂಡದ ಕರೆ ಸ್ವೀಕರಿಸಿರಲಿಲ್ಲ ಭೂಪ…! ನಗು ತರಿಸುತ್ತೆ ಇದರ ಹಿಂದಿನ ಕಾರಣ

ಕೆಲವೊಮ್ಮೆ ಟೇಬಲ್‌ ಮೇಲೆ ನಿಂತು, ಮತ್ತೆ ಕೆಲವೊಮ್ಮೆ ಬುಟ್ಟಿಯಂಥ ಸ್ಟೂಲ್‌ ಮೇಲೆ ನಿಂತು ಕುಂಚ ಹಿಡಿದು ಪೋರಿಯೂ ದೊಡ್ಡ ಕ್ಯಾನ್‌ವಾಸ್‌ಗಳ ಮೇಲೆ ಆಕರ್ಷಕ ಬಣ್ಣಗಳ ಅರ್ಥಗರ್ಭಿತ ಪೇಟಿಂಗ್‌ ಮೂಡಿಸುವ ಫೋಟೊಗಳು ಕೂಡ ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. Buitengebieden ಟ್ವಿಟರ್‌ ಖಾತೆಯಲ್ಲಿ ಬಾಲಕಿಯ ಪೇಟಿಂಗ್‌ ವಿಡಿಯೊ ಲಭ್ಯವಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ವೀಟಿಗರು, ಬಹಳ ಅಪರೂಪದ ಪ್ರತಿಭೆ ಇರುವ ಹುಡುಗಿಗೆ ಅವರ ಪೋಷಕರು ನೀಡುತ್ತಿರುವ ಬೆಂಬಲ ದೊಡ್ಡದು. ಬಹುಪಾಲು ಪೋಷಕರಿಗೆ ಅವರ ಮಕ್ಕಳು ಶಾಲೆಯ ಪರೀಕ್ಷೆ ಅಗತ್ಯವಿದ್ದಷ್ಟು ಓದಿಕೊಂಡು, ಗರಿಷ್ಠ ಅಂಕ ಪಡೆದರೆ ಸಾಕಾಗಿದೆ. ಅದನ್ನೇ ದೊಡ್ಡ ಸಾಮಾಜಿಕ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಾರೆ ಎಂದಿದ್ದಾರೆ.

ಭಾರತಕ್ಕೆ ʼಕ್ರಿಕೆಟ್‌ʼ ಕಾಲಿಟ್ಟ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮತ್ತೆ ಕೆಲವರು ಬಾಲಕಿಯು ಪೇಟಿಂಗ್‌ ಮೂಲಕ ತನ್ನ ಮನದಾಳದ ಕೊರತೆಗಳು, ಆಸಕ್ತಿಗಳನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾಳೆ. ಅದನ್ನು ಸೂಕ್ಷ್ಮವಾಗಿ ಮನೋಚಿಕಿತ್ಸಕರು ಗಮನಿಸಿ ಪೋಷಕರಿಗೆ ಬಾಲಕಿಯ ಆಸೆಗಳನ್ನು ಪೂರೈಸಲು ಸೂಚಿಸಬೇಕು ಎಂದು ಆಳವಾದ ಸಲಹೆಗಳನ್ನು ಕೂಡ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...