alex Certify ಭಾರತಕ್ಕೆ ʼಕ್ರಿಕೆಟ್‌ʼ ಕಾಲಿಟ್ಟ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೆ ʼಕ್ರಿಕೆಟ್‌ʼ ಕಾಲಿಟ್ಟ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕ್ರೀಡಾ ಜಗತ್ತಿನ ನೂರಾರು ಕ್ರೀಡೆಗಳ ಪೈಕಿ ಕ್ರಿಕೆಟ್‌ಗೆ ಮಾತ್ರ ಭಾರತದಲ್ಲಿ ಪ್ರಮುಖ ಸ್ಥಾನವು ಜನರ ಮನಸ್ಸಿನಲ್ಲಿ ಸಿಕ್ಕಿದೆ. ಬ್ರೆಜಿಲ್‌ನಲ್ಲಿ ಫುಟ್ಬಾಲ್‌, ಸ್ಪೇನ್‌ನಲ್ಲಿ ಗೂಳಿ ಕಾಳಗ, ಅಮೆರಿಕದಲ್ಲಿ ಬ್ಯಾಸ್ಕೆಟ್‌ಬಾಲ್‌ಗಳು ಜನರ ಮನಸ್ಸಿನಲ್ಲಿ ಅತ್ಯಂತ ನೆಚ್ಚಿನ ಕ್ರೀಡೆಗಳಾಗಿ ಬೇರೂರಿದಂತೆ, ಕ್ರಿಕೆಟ್‌ ಭಾರತದಲ್ಲಿ ಕ್ರೀಡಾ ಜಗತ್ತಿನ ರಾಜನಾಗಿದೆ.

ಇಂಥ ಜನಪ್ರಿಯ ಕ್ರೀಡೆಯು ಭಾರತದಲ್ಲಿ ಬಹಳ ಹಿಂದಿನಿಂದಲೂ ಇರುವಂಥದ್ದಲ್ಲ. ನಮ್ಮ ನೆಲದ ಕ್ರೀಡೆಯೂ ಕೂಡ ಅಲ್ಲ. 18ನೇ ಶತಮಾನದಲ್ಲಿ ಭಾರತಕ್ಕೆ ಬ್ರಿಟಿಷರು ಕಾಲಿಟ್ಟಾಗ, ಕ್ರಿಕೆಟ್‌ ಈ ನೆಲಕ್ಕೆ ಪರಿಚಿತಗೊಂಡಿತು. ಸದ್ಯ ದೇಶದ ಉಸಿರಿನಂತಾಗಿದೆ ಎನ್ನುತ್ತಾರೆ ಇತಿಹಾಸ ತಜ್ಞರು.

Viral Video: ಸಲ್ಮಾನ್ ಖಾನ್ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದ ಡಾನ್ಸಿಂಗ್ ಡ್ಯಾಡ್

ಭಾರತದಲ್ಲಿ ಮೊದಲ ಕ್ರಿಕೆಟ್‌ ಪಂದ್ಯ ನಡೆದಿದ್ದು ಗುಜರಾತಿನ ಅಂದಿನ ಬಂದರು ನಗರ ಕ್ಯಾಂಬೇಯ್‌ನಲ್ಲಂತೆ (ಸದ್ಯ ಇದು ಖಂಭಾತ್‌ ನಗರ). ಇದನ್ನು ಆಯೋಜಿಸಿದ್ದು ಲೆಫ್ಟಿನೆಂಟ್‌ ಕ್ಲೆಮೆಂಟ್‌ ಡೌನಿಂಗ್ಸ್‌. 1737ರಲ್ಲಿ ಡೌನಿಂಗ್ಸ್‌ ಬರೆದಿರುವ ಪುಸ್ತಕವೊಂದರಲ್ಲಿ ಈ ಬಗ್ಗೆ ಉಲ್ಲೇಖವಿದೆ.

ಬ್ಯಾಟ್‌ ಮತ್ತು ಬಾಲ್‌ ಹಿಡಿದುಕೊಂಡು ನಾವಿಕರು ವಿಶೇಷವಾದ ಕ್ರೀಡೆಯನ್ನು ಆಡುತ್ತಿದ್ದರು. ಆಗ ಬಂದರಿನಲ್ಲಿನ ಕೂಲಿ ಕಾರ್ಮಿಕರು ಅಚ್ಚರಿಯಿಂದ ಇದನ್ನು ನೋಡುತ್ತಿದ್ದರು ಎಂದು ಡೌನಿಂಗ್ಸ್‌ ದಾಖಲಿಸಿದ್ದಾರಂತೆ.

ಬಳಿಕ 200 ವರ್ಷಗಳಾದ ಮೇಲೆ, 1932 ರಲ್ಲಿಭಾರತದ ಕ್ರಿಕೆಟ್‌ ತಂಡವು ಚೊಚ್ಚಲ ಟೆಸ್ಟ್‌ ಪಂದ್ಯವನ್ನು ಆಡಿತು. ಅದು ಕೂಡ ಇಂಗ್ಲೀಷ್‌ ಕ್ರಿಕೆಟ್‌ ತಂಡದ ಹೆಸರಿನಲ್ಲಿ, ಬ್ರಿಟಿಷರ ಪರವಾಗಿ ಆಡಿದ್ದವರು ರಂಜಿತ್‌ ಸಿಂಘಜೀ ಮತ್ತು ದುಲೀಪ್‌ ಸಿಂಘಜೀ ಅವರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ, 1948ರಲ್ಲಿ ಭಾರತದ ಕ್ರಿಕೆಟ್‌ ತಂಡವು ಲಾಲಾ ಅಮರನಾಥ್‌ ನಾಯಕತ್ವದಲ್ಲಿ ಆಸ್ಪ್ರೇಲಿಯಾ ವಿರುದ್ಧ ಮೊದಲ ಸರಣಿಯನ್ನು ಆಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...