alex Certify 2023 ರ ಇನೋವಾ ಕ್ರಿಸ್ಟಾ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2023 ರ ಇನೋವಾ ಕ್ರಿಸ್ಟಾ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಇನ್ನೋವಾ ಕ್ರಿಸ್ಟಾದ 2023ರ ಅವತರಣಿಕೆಯನ್ನು ಭಾರತದಲ್ಲಿ ಬಿಡುಗಡೆ ಮಾಡಿರುವ ಟೊಯೋಟಾ, ಆರಂಭಿಕ ಬೆಲೆಯನ್ನು 19.13 ಲಕ್ಷ (ಎಕ್ಸ್ ಶೋ ರೂಂ) ಎಂದು ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಇನ್ನೋವಾ ಕಾರುಗಳ ಬುಕಿಂಗ್‌ ಅನ್ನು ಟೊಯೋಟಾ ಆರಂಭಿಸಿದೆ.

ಹಿಂದಿನ ಅವತರಣಿಕೆಗಳಿಗೆ ಹೋಲಿಸಿದಲ್ಲಿ 2023 ಇನೋವಾ ಕ್ರಿಸ್ಟಾದಲ್ಲಿ ಅಲ್ಪ ಮಟ್ಟದ ಸುಧಾರಣೆಗಳಾಗಿವೆ. ಒಟ್ಟಾರೆ ನಾಲ್ಕು ಟ್ರಿಮ್‌ಗಳಲ್ಲಿ ಹೊಸ ಇನೋವಾ ಕ್ರಿಸ್ಟಾ ಬರಲಿದೆ – G, GX, VX, ಮತ್ತು ZX. ಹಳೆಯ ಅವತರಣಿಕೆಯ ಕ್ರಿಸ್ಟಾ 2.7 ಲೀ ಪೆಟ್ರೋಲ್ ಯುನಿಟ್‌ನಲ್ಲಿ ಓಡುತ್ತಿದ್ದರೆ ಹೊಸ ಅವತರಣಿಕೆಯು 2.4 ಲೀ ಡೀಸೆಲ್ ಮೋಟರ್‌ನೊಂದಿಗೆ ಮ್ಯಾನುವಲ್ ಗೇರ್‌ ಬಾಕ್ಸ್‌ನಲ್ಲಿ ಚಲಿಸಲಿದೆ.

ಮುಂಭಾಗದಲ್ಲಿ ಕೊಂಚ ಸಣ್ಣನೆಯ ಗ್ರಿಲ್ ಹೊಂದಿರುವ ಇನೋವಾ ಕ್ರಿಸ್ಟಾ 2023, ಹೊಸ ಫಾಗ್ ಲ್ಯಾಂಪ್ ಹೌಸಿಂಗ್, ಮರುವಿನ್ಯಾಸಗೊಳಿಸಲಾದ ಬಂಪರ್‌ಗಳನ್ನು ಸಹ ಹೊಂದಿದೆ. ಆದೆ ಹಿಂಭಾಗ ಹಾಗೂ ಸೈಡ್‌ಗಳಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.

ಇನ್ನು ಒಳಭಾಗದಲ್ಲಿ ಅನೇಕ ಫೀಚರ್‌ಗಳನ್ನು 2023 ಕ್ರಿಸ್ಟಾ ಪಡೆದುಕೊಂಡಿದೆ. ಬಹು ವಲಯದ ವಾತಾವರಣ ನಿಯಂತ್ರಣ, ಪವರ್ ಡ್ರೈವರ್‌ ಸೀಟು ಹೊಂದಾಣಿಕೆ, ವಿಸ್ತಾರವಾದ ಲೈಟಿಂಗ್, ಚರ್ಮದ ಸೀಟುಗಳು ಟಾಪ್ ಎಂಡ್ ಟ್ರಿಮ್‌ಗಳಲ್ಲಿ ಕಂಡು ಬರುತ್ತವೆ. ‌

ಆಪಲ್ ಕಾರ್‌ಪ್ಲೇನೊಂದಿಗೆ 8 ಇಂಚಿನ ಟಚ್‌ ಸ್ಕ್ರೀನ್ & ಆಂಡ್ರಾಯ್ಡ್ ಆಟೋ, ಪಿಕ್‌ನಿಟ್ ಟೇಬಲ್‌ಗಳು ಹಾಗೂ ಇನ್ನೂ ಹೆಚ್ಚಿನ ಫೀಚರ್‌ಗಳು ಈ ಕಾರನ್ನು ವಿಶಿಷ್ಟವನ್ನಾಗಿಸಿವೆ. ZX ಟ್ರಿಮ್ 7-ಸೀಟಿನ ಸಾಮರ್ಥ್ಯದಲ್ಲಿ ಬಂದರೆ ಮಿಕ್ಕೆಲ್ಲ ಟ್ರಿಮ್‌ಗಳು 7 ಅಥವಾ 8 ಸೀಟಿನ ಸಾಮರ್ಥ್ಯದಲ್ಲಿ ಬರಲಿವೆ.

ಏಳು ಏರ್‌ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ನಿಯಂತ್ರಣ, ಮುಂಬದಿ ಹಾಗೂ ಹಿಂಬದಿ ಪಾರ್ಕಿಂಗ್ ಸೆನ್ಸರ್‌ಗಳು, ಹಿಲ್-ಸ್ಟಾರ್ಟ್ ಅಸಿಸ್ಟ್‌ಗಳ ಮೂಲಕ ಈ ಗಾಡಿ ಸುರಕ್ಷತೆಯಲ್ಲಿ ಅತ್ಯಾಧುನಿಕ ಸುಧಾರಣೆಗಳನ್ನು ಕಂಡಿದೆ. ಜೊತೆಗೆ ಮೂರು ಪಾಯಿಂಟ್ ಸೀಟ್‌ ಬೆಲ್ಟ್‌ಗಳನ್ನು ಎಲ್ಲಾ ಪ್ರಯಾಣಿಕರಿಗೂ ಒದಗಿಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...