alex Certify 2021‌ ರ ಬೆಸ್ಟ್ ವೆಬ್ ಸಿರೀಸ್: ಯಾವುದು ನಂ.1..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2021‌ ರ ಬೆಸ್ಟ್ ವೆಬ್ ಸಿರೀಸ್: ಯಾವುದು ನಂ.1..?

ಪ್ರತಿವರ್ಷದಂತೆ ಈ ವರ್ಷವು ಇಂಡಿಯನ್ ಎಕ್ಸ್ ಪ್ರೆಸ್ ವರ್ಷದ ಬೆಸ್ಟ್ ಶೋ ಗಳ ಲಿಸ್ಟ್ ಬಿಡುಗಡೆ ಮಾಡಿದೆ. ಒಟಿಟಿಯಲ್ಲಿ ರಿಲೀಸ್ ಆದ ಸಾಕಷ್ಟು ವೆಬ್ ಸಿರೀಸ್ ಗಳು ಬಿಗ್ ಬಜೆಟ್, ಬಿಗ್ ಸ್ಟಾರರ್ ಸಿನಿಮಾಗಳಿಗಿಂತ ಹೆಚ್ಚು ಖ್ಯಾತಿ ಗಳಿಸಿವೆ. ಅದ್ರಲ್ಲಿ ಬೆಸ್ಟ್ ಯಾವ್ದು ಅನ್ನೋ ಲಿಸ್ಟ್ ಇಲ್ಲಿದೆ.

1. ತಬ್ಬರ್(ಸೋನಿ ಲೈವ್)

ಪವನ್ ಮಲ್ಹೋತ್ರ ಹಾಗೂ ಸುಪ್ರಿಯಾ ಪಾಠಕ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ತಬ್ಬರ್ ಸಿರೀಸ್, ಮಧ್ಯಮವರ್ಗದ ಕಥೆಯನ್ನ ವೀಕ್ಷಕರ ಮುಂದೆ ಇಡುತ್ತದೆ. ತಮ್ಮ ಕುಟುಂಬದವರ ಕಷ್ಟಕಾಲದಲ್ಲಿ ಹೇಗೆ ಜೊತೆಗೆ ನಿಲ್ಲುತ್ತೇವೆ, ಅವರ ರಕ್ಷಣೆಗಾಗಿ ಏನನ್ನಾದರು ಮಾಡಲು ತಯಾರಾಗುತ್ತೇವೆ ಎನ್ನುವುದೆ ಈ ಸರಣಿಯ ಪ್ಲಾಟ್.

2. ಗುಲ್ಲಕ್ (ಸೋನಿ ಲೈವ್)

ಮತ್ತೊಂದು ಮಧ್ಯಮ ವರ್ಗದ ಕಥೆ, ಸಿಂಪಲ್ ಸ್ಟೋರಿಯಾಗಿದ್ರು ಮನಸ್ಸನ್ನ ಸೂರೆಗೊಳ್ಳುವ ಈ ಸರಣಿ ಈ ವರ್ಷ ಎರಡನೇ ಸ್ಥಾನ‌ ಪಡೆದುಕೊಂಡಿದೆ‌.

3. ದಿ ಫ್ಯಾಮಿಲಿ ಮ್ಯಾನ್-2(ಅಮೆಜ಼ಾನ್ ಪ್ರೈಮ್)

ಹೆಸರು ಫ್ಯಾಮಿಲಿ ಮ್ಯಾನ್ ಆದ್ರು ಕ್ಷಣಕ್ಷಣಕ್ಕೂ ವೀಕ್ಷಕರನ್ನ ಎಂಗೇಜಿಂಗ್ ಆಗಿ ಇಡುವ ಈ ಶೋ, ದಿನೇ ದಿನೇ ಪ್ರಸಿದ್ಧಿ ಪಡೆಯುತ್ತಲೆ ಇದೆ. ಮನೋಜ್ ಬಜ್ಪಾಯಿ, ಪ್ರಿಯಾಮಣಿ, ಸಮಂತಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

4. ಗೀಲಿ ಪುಚ್ಚಿ(ಅಜೀಬ್ ದಾಸ್ತಾ-ನೆಟ್ ಫ್ಲಿಕ್ಸ್)

ಜಾತಿಯನ್ನು ಮೀರಿದ್ದು, ಪ್ರೀತಿ, ಸ್ನೇಹ, ಬಾಂಧವ್ಯ ಎಂದು ಹೇಳುವ ಈ ಕಥೆ ನಾಲ್ಕನೇ ಸ್ಥಾನದಲ್ಲಿದೆ.

33 ಹೊಸ ಯೂನಿಕಾರ್ನ್‌ಗಳೊಂದಿಗೆ ಬ್ರಿಟನ್‌ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತ

5. ಹಂಗಾಮ ಹೈ ಕ್ಯು ಬರ್ಪಾ(ರೇ-ನೆಟ್ ಫ್ಲಿಕ್ಸ್)

ಜೀವನದ ಮಜಲುಗಳನ್ನ ತಿಳಿಸುವ ಈ ಸಣ್ಣ ಕಥೆಯಲ್ಲಿ ಮನೋಜ್ ಬಜ್ಪಾಯಿ ಅಭಿನಯಿಸಿದ್ದಾರೆ.

6. ಮುಂಬೈ ಡೈರೀಸ್(ಅಮೆಜ಼ಾನ್ ಪ್ರೈಮ್)

ಮುಂಬೈನ 26/11 ಘಟನೆ ಆಧಾರದಲ್ಲಿ ಮೂಡಿಬಂದಿರುವ ಆಸ್ಪತ್ರೆ ಎಮರ್ಜನ್ಸಿ ಈ ಸರಣಿ, ಹಿಂದಿ ಒಟಿಟಿಯಲ್ಲೆ ಅತ್ಯಂತ ವಿಭಿನ್ನ.

7. ಅಸ್ಪಿರೆಂಟ್ಸ್ (ಯೂಟ್ಯೂಬ್)

ಟಿವಿಎಫ್ ಪ್ಲೇ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಮೂಡಿಬಂದ ಈ ಸಿರೀಸ್, ಯುವ ಜನತೆಯ ಜೀವನದ ಜಟಿಲತೆಗಳನ್ನ ತಿಳಿಸುತ್ತದೆ.

8. ಸ್ಪಾಟ್ ಲೈಟ್(ರೇ- ನೆಟ್ ಫ್ಲಿಕ್ಸ್)

ಸಾಮಾನ್ಯ ಜನರು, ಪ್ರಭಾವಿ ಜನರೊಂದಿಗೆ ಹೋರಾಡುವುದನ್ನ ಈ ಕಿರುಚಿತ್ರದಲ್ಲಿ‌ ನೋಡಬಹುದು.

9. ಗ್ರಹಣ್(ಡಿಸ್ನೀ+ಹಾಟ್ ಸ್ಟಾರ್)

ಬೊಕಾರೊ ಭಾಗದ 1984ರ ದಂಗೆಯ ಸಂದರ್ಭದಲ್ಲಿ, ಹುಟ್ಟಿದ ಪ್ರೀತಿಯ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿದೆ‌.

10. ಕೋಟಾಫ್ಯಾಕ್ಟರಿ-2(ನೆಟ್ ಫ್ಲಿಕ್ಸ್)

ಗುರು-ಶಿಷ್ಯರ ಸಂಬಂಧ, ಓದಲೇಬೇಕೆಂಬ ಒತ್ತಡ, ಯುವಜನರ ಮೇಲಿರುವ ಸಾಮಾಜಿಕ ಒತ್ತಡಗಳನ್ನ ಈ ಸಿರೀಸ್ ನಲ್ಲಿ ಅದ್ಭುತವಾಗಿ ತೋರಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...