alex Certify 33 ಹೊಸ ಯೂನಿಕಾರ್ನ್‌ಗಳೊಂದಿಗೆ ಬ್ರಿಟನ್‌ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

33 ಹೊಸ ಯೂನಿಕಾರ್ನ್‌ಗಳೊಂದಿಗೆ ಬ್ರಿಟನ್‌ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತ

With 33 new 'unicorns', India replaces UK to be 3rd top country hosting such enterprises

ಮಾರುಕಟ್ಟೆಯಲ್ಲಿ ಶತಕೋಟಿ ಡಾಲರ್‌ ಮೀರಿದ ಮೌಲ್ಯ ಹೊಂದಿರುವ 33 ಸ್ಟಾರ್ಟ್‌ಅಪ್‌ಗಳನ್ನು ಹೊಂದಿರುವ ಭಾರತ, ಈ ವಿಚಾರದಲ್ಲಿ ಬ್ರಿಟನ್‌ ಅನ್ನು ಹಿಂದಿಕ್ಕಿ ಮೂರನೇ ಸ್ಥಾನ ಪ್ರವೇಶಿಸಿದೆ ಎಂದು ಹುರುನ್ ಸಂಶೋಧನಾ ಸಂಸ್ಥೆ ಬುಧವಾರದ ತನ್ನ ವರದಿಯಲ್ಲಿ ತಿಳಿಸಿದೆ.

ಕಳೆದ ವರ್ಷ 4ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 33 ಯೂನಿಕಾರ್ನ್‌ಗಳನ್ನು ಸೇರ್ಪಡೆ ಮಾಡಿಕೊಂಡಿದ್ದು, ಒಟ್ಟಾರೆ 54 ಯೂನಿಕಾರ್ನ್‌ಗಳಿಗೆ ತವರಾಗಿದೆ.

ಇದೇ ಅವಧಿಯಲ್ಲಿ 254 ಯೂನಿಕಾರ್ನ್‌ಗಳನ್ನು ಸೇರಿಸಿಕೊಂಡಿರುವ ಅಮೆರಿಕ, ಒಟ್ಟಾರೆ 487 ಯೂನಿಕಾರ್ನ್‌ಗಳೊಂದಿಗೆ ಅಗ್ರಸ್ಥಾನಿಯಾಗಿದ್ದು, ಇದೇ ಪಟ್ಟಿಯಲ್ಲಿ 74 ಹೊಸ ಯೂನಿಕಾರ್ನ್‌ಗಳ ಸೇರ್ಪಡೆಯೊಂದಿಗೆ ಚೀನಾ 301 ಯೂನಿಕಾರ್ನ್‌‌ಗಳ ಬಲದಿಂದ ಪಟ್ಟಿಯಲ್ಲಿ 2ನೇ ಸ್ಥಾನಿಯಾಗಿದೆ. ಜಗತ್ತಿನಲ್ಲಿರುವ ಎಲ್ಲಾ ಯೂನಿಕಾರ್ನ್‌ಗಳ ಪೈಕಿ ಅಮೆರಿಕ ಮತ್ತು ಚೀನಾಗಳಲ್ಲೇ 74%ನಷ್ಟು ಯೂನಿಕಾರ್ನ್‌ಗಳು ಇವೆ.

ಹುಟ್ಟು ಹಬ್ಬದ ದಿನವೇ ಕ್ರೂರ ವಿಧಿಗೆ ಬಲಿಯಾದ ಮಗ; ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪಾಲಕರು….!

ನವೆಂಬರ್‌ 2021ರಂತೆ ಅಪ್ಡೇಟ್ ಆಗಿರುವ ಈ ಪಟ್ಟಿಯ ಪ್ರಕಾರ, ಕಳೆದ ವರ್ಷ 15 ಯೂನಿಕಾರ್ನ್‌ಗಳನ್ನು ಹೊಸದಾಗಿ ಕಂಡು ಒಟ್ಟಾರೆ 39 ಯೂನಿಕಾರ್ನ್‌ಗಳನ್ನು ಹೊಂದಿದ್ದು, ಭಾರತಕ್ಕೆ ಮೂರನೇ ಸ್ಥಾನ ಬಿಟ್ಟುಕೊಟ್ಟಿದೆ.

ಈ ಕುರಿತು ಮಾತನಾಡಿದ ಹುರುನ್ ರಿಪೋರ್ಟ್ ಇಂಡಿಯಾದ ಎಂಡಿ ಮತ್ತು ಮುಖ್ಯ ಸಂಶೋಧಕ ಅನಾಸ್ ರಹಮಾನ್ ಜುನೈದ್, ವಿದೇಶಗಳಲ್ಲಿ ಭಾರತೀಯರು 65 ಯೂನಿಕಾರ್ನ್‌ಗಳನ್ನು ತೆರೆದಿದ್ದು, ಇವುಗಳಲ್ಲಿ ಹೆಚ್ಚಿನವು ಪಶ್ಚಿಮ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿವೆ ಎಂದಿದ್ದಾರೆ.

ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಯೂನಿಕಾರ್ನ್‌ಗಳನ್ನು ಹೊಂದಿರುವ ನಗರವೆಂಬುದು ನಮ್ಮ ಬೆಂಗಳೂರಿಗೆ ಸಿಕ್ಕ ಮತ್ತೊಂದು ಮುಕುಟವಾಗಿದೆ. ಮಿಕ್ಕಂತೆ, ಪುಣೆ, ಥಾಣೆ ಮತ್ತು ಗುರುಗ್ರಾಮಗಳು ಸಹ ಒಂದಷ್ಟು ಮಟ್ಟಿಗೆ ಯೂನಿಕಾರ್ನ್‌ಗಳನ್ನು ಹೊಂದಿವೆ ಎಂದು ವರದಿಯಲ್ಲಿ ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...