alex Certify BIG NEWS: 2020 ರ ಗಾಲ್ವಾನ್​ ಸಂಘರ್ಷದ ಬಗ್ಗೆ ಸ್ಫೋಟಕ ಮಾಹಿತಿ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2020 ರ ಗಾಲ್ವಾನ್​ ಸಂಘರ್ಷದ ಬಗ್ಗೆ ಸ್ಫೋಟಕ ಮಾಹಿತಿ ಬಯಲು

2020ರಲ್ಲಿ ಗಾಲ್ವಾನ್​ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ನಡುವೆ ಸಂಘರ್ಷದಲ್ಲಿ ವೇಗವಾಗಿ ಹರಿಯುತ್ತಿದ್ದ ನದಿಯನ್ನು ದಾಟುವ ವೇಳೆಯಲ್ಲಿ ಮುಳುಗಿಹೋದ ಸೈನಿಕರ ಸಂಖ್ಯೆಯು ಚೀನಾವು ವರದಿ ಮಾಡಿದ ಸಂಖ್ಯೆಗಿಂತ ಹೆಚ್ಚಿದೆ ಎಂದು ಆಸ್ಟ್ರೇಲಿಯಾದ ತನಿಖಾ ಪತ್ರಿಕೆಯು ಬುಧವಾರ ಮಾಹಿತಿ ನೀಡಿದೆ.

ಕ್ಲಾಕ್ಸನ್​ ವರದಿಯಲ್ಲಿ ಹೆಸರು ಬಹಿರಂಗಪಡಿಸದ ಸಂಶೋಧಕರು ಹಾಗೂ ಚೀನಾದ ಬ್ಲಾಗರ್​ಗಳ ಸಂಶೋಧನಾ ವರದಿಯನ್ನು ಉಲ್ಲೇಖಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಇವರೆಲ್ಲ ತಮ್ಮ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಚೀನಾದಲ್ಲಿ ಸಾವು – ನೋವುಗಳು ಹೊಸದೇನಲ್ಲ. ಆದರೂ ಸಾಮಾಜಿಕ ಮಾಧ್ಯಮದ ಸಂಶೋಧಕರ ಗುಂಪು ಒದಗಿಸಿದ ಪುರಾವೆಗಳ ಪ್ರಕಾರ ಚೀನಾದ ಸಾವು ನೋವುಗಳು ಬೀಜಿಂಗ್​ ಹೆಸರಿಸಿದ ನಾಲ್ವರು ಸೈನಿಕರನ್ನು ಮೀರಿ ವಿಸ್ತರಿಸಿದೆ ಎಂದು ಕ್ಲಾಕ್ಸನ್​​ ವರದಿ ಮಾಡಿದೆ.

2020ರಲ್ಲಿ ಎತ್ತರದ ಗಾಲ್ವಾನ್​ ಕಣಿಯಲ್ಲಿ ನಡೆದ ಭಾರತ ಹಾಗೂ ಚೀನಾ ನಡುವಿನ ಗಡಿ ಘರ್ಷಣೆಯು ಕಳೆದ ನಾಲ್ಕು ದಶಕಗಳಲ್ಲಿ ನಡೆದ ಎರಡು ದೈತ್ಯ ರಾಷ್ಟ್ರಗಳ ನಡುವಿನ ಮಾರಣಾಂತಿಕ ಮುಖಾಮುಖಿಯಾಗಿದೆ. ವೇಗವಾಗಿ ಹರಿಯುವ ನದಿಯನ್ನು ದಾಟುವಾಗ ಚೀನಾದ ಸಾಕಷ್ಟು ಸೈನಿಕರು ಮುಳುಗಿ ಹೋಗಿದ್ದರು. ಆದರೆ ಈ ಬಗ್ಗೆ ಚೀನಾವು ಒದಗಿಸಿದ ಸಂಖ್ಯೆಗಿಂತ ಹೆಚ್ಚು ಪಟ್ಟು ಜನರು ಇಲ್ಲಿ ಮುಳುಗಿ ಹೋಗಿದ್ದಾರೆ ಎಂದು ವರದಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...