alex Certify 100 ವರ್ಷ ಆರೋಗ್ಯವಾಗಿ ಬದುಕಲು ಮಾಡಿಕೊಳ್ಳಿ ಈ ಸುಧಾರಣೆ..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100 ವರ್ಷ ಆರೋಗ್ಯವಾಗಿ ಬದುಕಲು ಮಾಡಿಕೊಳ್ಳಿ ಈ ಸುಧಾರಣೆ..…!

ಭೂಮಿಯ ಮೇಲೆ 100 ವರ್ಷಗಳ ಕಾಲ ಬದುಕಲು ಆರೋಗ್ಯಕರ ದೇಹರಚನೆ ಅಗತ್ಯವಿದೆ. ಎಲ್ಲಾ ವಯಸ್ಸಿನ ಜನರನ್ನೂ ಬಾಧಿಸುವ ಹಲವಾರು ದೀರ್ಘಕಾಲದ ಕಾಯಿಲೆಗಳಿಂದಾಗಿ 100 ವರ್ಷ ಬದುಕುವುದು ಅಸಾಧ್ಯವಾಗ್ತಿದೆ. ಅನೇಕರಿಗೆ ದೀರ್ಘಕಾಲ ಆರೋಗ್ಯವಾಗಿರಲು ಕಷ್ಟವಾಗುತ್ತದೆ. ಆದಾಗ್ಯೂ ಸರಿಯಾದ ಜೀವನಶೈಲಿಯನ್ನು ಅನುಸರಿಸಿದರೆ, ಆರೋಗ್ಯವನ್ನು ಕಾಪಾಡಿಕೊಂಡು ದೀರ್ಘಾಯುಷಿಯಾಗಬಹುದು.

ಸುದೀರ್ಘ ಜೀವನಕ್ಕೆ 5 ಸಲಹೆಗಳು…

ಆರೋಗ್ಯಕರ ಆಹಾರ : ಆರೋಗ್ಯಕರ ಆಹಾರ ಎಂದರೆ ಹಣ್ಣು, ತರಕಾರಿ, ಧಾನ್ಯ ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್‌ಗಳನ್ನು ಒಳಗೊಂಡಿರುತ್ತದೆ. ಈ ಆಹಾರಗಳಲ್ಲಿ ನಮ್ಮ ದೇಹವನ್ನು ಆರೋಗ್ಯಕರವಾಗಿರಲು ಸಹಾಯ ಮಾಡುವ ಪೋಷಕಾಂಶಗಳಿವೆ.

ಆಶಾವಾದಿಯಾಗಿರಿ: ಅಧ್ಯಯನಗಳ ಪ್ರಕಾರ ಆಹಾರದ ನಂತರ ಆರೋಗ್ಯದ ಮೇಲೆ ಪರಿಣಾಮ ಬೀರುವ ಎರಡನೇ ಪ್ರಮುಖ ಅಂಶವೆಂದರೆ ನಮ್ಮ ಮನಸ್ಸು. ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದು ನಮ್ಮ ಅಕಾಲಿಕ ಮರಣದ ಸಾಧ್ಯತೆಯನ್ನು 40 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಆಯುಷ್ಯ ವೃದ್ಧಿಯಾಗಲು ಚಿಂತೆ ಕಡಿಮೆ ಮಾಡಿಕೊಳ್ಳಬೇಕು. ಧನಾತ್ಮಕ ವಿಷಯಗಳತ್ತ ಗಮನಹರಿಸಬೇಕು.

ಸಾಕಷ್ಟು ನಿದ್ದೆ ಮಾಡಿ: ಅನೇಕ ಕಾಯಿಲೆಗಳಿಗೆ ನಿದ್ರೆಯೇ ಚಿಕಿತ್ಸೆ. ಹಾಗಾಗಿ ಚೆನ್ನಾಗಿ ನಿದ್ರೆ ಮಾಡಬೇಕು. ಕಳಪೆ ನಿದ್ರೆಯಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹೃದ್ರೋಗದಂತಹ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ. ನಮ್ಮ ದೇಹವು ಚೇತರಿಸಿಕೊಳ್ಳಲು ಮತ್ತು ಹೊಸ ಶಕ್ತಿಯನ್ನು ಉತ್ಪಾದಿಸಲು ನಿದ್ರೆ ಅತ್ಯಗತ್ಯ. ವಯಸ್ಕರಿಗೆ ಪ್ರತಿ ರಾತ್ರಿ 7-8 ಗಂಟೆಗಳ ನಿದ್ದೆ ಅಗತ್ಯವಿರುತ್ತದೆ.

ಉಸಿರಾಟದ ವ್ಯಾಯಾಮ ಮಾಡಿ: ಉಸಿರಾಟದ ವ್ಯಾಯಾಮಗಳು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಒತ್ತಡ ಸಂಬಂಧಿತ ಕಾಯಿಲೆಗಳನ್ನು ಕಡಿಮೆ ಮಾಡುತ್ತವೆ. ಇದು ನಮ್ಮ ಜೀವಿತಾವಧಿಯನ್ನು ಹೆಚ್ಚಿಸಬಹುದು.

ಧ್ಯಾನ: ಧ್ಯಾನದಿಂದ ಅನೇಕ ಪ್ರಯೋಜನಗಳಿವೆ, ಅವುಗಳಲ್ಲಿ ಪ್ರಮುಖವಾದದ್ದು ದೀರ್ಘಾಯುಷ್ಯ. ತಜ್ಞರ ಪ್ರಕಾರ ಧ್ಯಾನದ ಚಿಕಿತ್ಸೆಯ ಪ್ರಮುಖ ನಿರ್ಧಾರಕವೆಂದರೆ ಟೆಲೋಮಿಯರ್ ಉದ್ದ. ಟೆಲೋಮಿಯರ್‌ಗಳು ನಮ್ಮ ಡಿಎನ್‌ಎಯ ತುದಿಯಲ್ಲಿವೆ ಮತ್ತು ವಯಸ್ಸಾದ, ದೀರ್ಘಾಯುಷ್ಯದ ಪ್ರಮುಖ ಗುರುತುಗಳಾಗಿವೆ. ಉದ್ದವಾದ ಟೆಲೋಮಿಯರ್‌ಗಳು ಕಡಿಮೆ ಕಾಯಿಲೆ ಮತ್ತು ದೀರ್ಘಾವಧಿಯ ಜೀವಿತಾವಧಿಯೊಂದಿಗೆ ಸಂಬಂಧ ಹೊಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...